Agricultural Equipment: ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್, 50 % ಡಿಸ್ಕೌಂಟ್ ಘೋಷಣೆ ಮಾಡೋದ ಸರ್ಕಾರ

ರಾಜ್ಯ ಸರ್ಕಾರದಿಂದ ರೈತರಿಗೆ ಶೇ. 50 ರಷ್ಟು ರಿಯಾಯಿತಿ ದರದಲ್ಲಿ ಕೃಷಿ ಉಪಕರಣ ಲಭ್ಯ.

Agricultural Equipment Discount: ಈಗಾಗಲೇ ರಾಜ್ಯ ಸರ್ಕಾರ ದೇಶದ ಬೆನ್ನೆಲುಬಾಗಿರುವ ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ. ರೈತರು ಸರ್ಕಾರದ ಯೋಜನೆಗಳ ಸಹಾಯದಿಂದ ಆರ್ಥಿಕವಾಗಿ ಸ್ಥಿರತೆ ಕಾಣುತ್ತಿದ್ದಾರೆ ಎನ್ನಬಹುದು. ಇನ್ನು ರೈತರ ಕೃಷಿಗಾಗಿ ಸರ್ಕಾರ ಸಾಕಷ್ಟು ರೀತಿಯ ಸೌಲಭ್ಯವನ್ನು ನೀಡುತ್ತಿದೆ. ಸಧ್ಯ ರಾಜ್ಯ ಸರಕಾರ ರೈತರ ಕೃಷಿಗೆ ಸಹಾಯವಾಗಲು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ರೈತರ ಕೃಷಿ ಬೆಳವಣಿಗೆಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಬಹುದು.

Agricultural Equipment Discount
Image Credit: Krishijagran

ಶೇ. 50 ರಷ್ಟು ರಿಯಾಯಿತಿ ದರದಲ್ಲಿ ಕೃಷಿ ಉಪಕರಣ ಲಭ್ಯ
ಸದ್ಯ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಹೊರಬಿದ್ದಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ. 50 ರ ರಿಯಾಯಿತಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ. 90 ರಷ್ಟು ರಿಯಾಯಿತಿ ದರದಲ್ಲಿ ಕೃಷಿ ಉಪಕರಣಗಳನ್ನು ನೀಡಲು ಕೃಷಿ ಇಲಾಖೆ ನಿರ್ಧರಿಸಿದೆ.

ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟೋವೇಟರ್, ಕಳೆ ಕಿತ್ತಲು ಯಂತ್ರಗಳು (ಪವರ್ ವೀಡರ್), ಪವರ್ ಸ್ಪ್ರೇಯರ್‌ ಗಳು, ಡೀಸೆಲ್ ಪಂಪ್‌ ಸೆಟ್, ಫ್ಲೋರ್ ಮಿಲ್, ಮೋಟೋಕಾರ್ಟ್, ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳು ಮತ್ತು ಇತರ ಹೈಟೆಕ್ ಕೃಷಿ ಉಪಕರಣಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಮಡಿಕೇರಿ ತಾಲೂಕಿನ ಜನರು ಮುಖ್ಯ ದಾಖಲೆಗಳನ್ನು ನೀಡುವ ಮೂಲಕ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳ ಬಗ್ಗೆ ವಿವರ ಇಲ್ಲಿದೆ.

Government is Providing 50% Subsidy on Agriculture Machinery & Equipment
Image Credit: Pxhere

ಈ ದಾಖಲೆಗಳು ಇದ್ದರೆ ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯ
•ಪಹಣಿ (RTC )
•ಆಧಾರ್ ಕಾರ್ಡ್
•ಬ್ಯಾಂಕ್ ಪಾಸ್ ಬುಕ್ ನಕಲು
•ಒಂದು ಪಾಸ್ ಪೋರ್ಟ್ ಗಾತ್ರದ ಫೋಟೋ
•ಛಾಪಾ ಕಾಗದ

Join Nadunudi News WhatsApp Group

Join Nadunudi News WhatsApp Group