Agricultural Land Rule: ಇನ್ಮುಂದೆ ಈ ಜಮೀನಿನಲ್ಲಿ ಮನೆ ಕಟ್ಟಲು ಸರ್ಕಾರೀ ಅನುಮತಿ ಬೇಕಿಲ್ಲ, ಹೊಸ ನಿಯಮ ಜಾರಿಗೆ.

ಕೃಷಿ ಭೂಮಿಯಲ್ಲಿ ಮನೆ ಕಟ್ಟುವವರಿಗೆ ಹೊಸ ನಿಯಮ ಜಾರಿ

Agricultural Land New Rule: ಸ್ವಂತ ಮನೆ ಕಟ್ಟಿಕೊಳ್ಳುವ ಆಸೆ ಎಲ್ಲರಲ್ಲೂ ಇದ್ದೆ ಇರುತ್ತದೆ. ಸ್ವಂತ ಮನೆ ನಿರ್ಮಾಣ ಮಾತಿನಲ್ಲಿ ಹೇಳಿದಷ್ಟು ಸುಲಭ ಇರುವುದಿಲ್ಲ. ಮನೆ ನಿರ್ಮಾಣಕ್ಕೆ ಮುಖ್ಯವಾಗಿ ಜಾಗದ ಅಗತ್ಯ ಇರುತ್ತದೆ. ಪ್ರಸ್ತುತ ಈ ದುಬಾರಿ ದುನಿಯಾದಲ್ಲಿ ಜಾಗ ಖರೀದಿಸಲು ಸಾಕಷ್ಟು ಹಣ ಬೇಕಾಗುತ್ತದೆ.

ಹೀಗಾಗಿ ಜನರು ಮನೆ ನಿರ್ಮಾಣಕ್ಕೆ ತಮ್ಮ ಸ್ವಂತ ಜಮೀನನ್ನು ಬಳಸಿಕೊಳ್ಳುತ್ತಾರೆ. ಮನೆ ನಿರ್ಮಾಣಕ್ಕೆ ಈಗಾಗಲೇ ಸಾಕಷ್ಟು ಜನರು ತಮ್ಮ ಕೃಷಿ ಜಮೀನನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಜಮೀನಿನಲ್ಲಿ ಮನೆ ಕಟ್ಟಲು ಸರ್ಕಾರದ ಯಾವುದೇ ಷರತ್ತುಗಳಿರಲಿಲ್ಲ. ಆದರೆ ಇದೀಗ ಸರ್ಕಾರ ಕೃಷಿ ಭೂಮಿಯಲ್ಲಿ ಮನೆ ಕಟ್ಟುವವರಿಗೆ ಹೊಸ ನಿಯಮವನ್ನು ರೂಪಿಸಿದೆ.

Agricultural Land Rule
Image Credit: Ipleaders

ಇನ್ಮುಂದೆ ಈ ಜಮೀನಿನಲ್ಲಿ ಮನೆ ಕಟ್ಟಲು ಸರ್ಕಾರೀ ಅನುಮತಿ ಬೇಕಿಲ್ಲ
ನೀವು ಈಗಾಗಲೇ ನಿವೇಶನ ಅಥವಾ ಜಮೀನು ಹೊಂದಿದ್ದರೆ, ನಿಮ್ಮ ಜಮೀನಿನಲ್ಲಿ ಮನೆ ನಿರ್ಮಿಸಲು ನೀವು ಯಾರ ಅನುಮತಿಯನ್ನು ತೆಗೆದುಕೊಳ್ಳಬೇಕಾಗಿಲ್ಲ. ಆದರೆ ಈಗ ಸರ್ಕಾರ ಈ ನಿಯಮವನ್ನು ಸ್ವಲ್ಪ ಬದಲಾಯಿಸಿದೆ. ವಾಣಿಜ್ಯ ನಿವೇಶನದಲ್ಲಿ ಮನೆ ಕಟ್ಟುವುದಾದರೆ ಸರಕಾರದಿಂದ ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೆ ಆ ಜಾಗದಲ್ಲಿ ಮನೆ ಕಟ್ಟಬೇಕಾದರೆ ಸರಕಾರದ ಅನುಮತಿ ಕಡ್ಡಾಯ. ಜಮೀನಿನಲ್ಲಿ ಮನೆ ಕಟ್ಟುವ ಕನಸು ಕಂಡವರಲ್ಲಿ ಎರಡು ವಿಧ.

ಒಂದು ತಮ್ಮ ಇರುವ ಜಾಗದಲ್ಲಿ ಪುಟ್ಟ ಮನೆ ಕಟ್ಟುವುದು, ಇನ್ನೊಂದು ಫಾರ್ಮ್ ಹೌಸ್ ಮಾದರಿಯಲ್ಲಿ ಮನೆ ಕಟ್ಟುವುದು. ಆದರೆ ಇನ್ಮುಂದೆ ಸ್ವಂತ ಜಮೀನಿನಲ್ಲಿ ಮನೆ ಕಟ್ಟಬೇಕು ಅಂದರೆ ಅದಕ್ಕೆ ಸರ್ಕಾರದಿಂದ ಅನುಮತಿ ಪಡೆಯಬೇಕು. ಫಲವತ್ತಾದ ಕೃಷಿ ಭೂಮಿ ಉಳಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕೃಷಿ ಭೂಮಿಯನ್ನು ವಾಣಿಜ್ಯ ತಾಣಗಳಾಗಿ ಪರಿವರ್ತಿಸಿದರೆ ಅಥವಾ ಮನೆಗಳನ್ನು ನಿರ್ಮಿಸಿದರೆ ಮುಂದೆ ಕೃಷಿ ಭೂಮಿ ಸಂಪೂರ್ಣವಾಗಿ ನಾಶವಾಗುತ್ತದೆ. ಈ ಕಾರಣಕ್ಕಾಗಿ ಕೃಷಿ ಭೂಮಿಯಲ್ಲಿ ಮನೆ ಕಟ್ಟುವ ಆಸೆ ಇದ್ದರೆ ಮೊದಲು ಕೃಷಿ ಭೂಮಿಯನ್ನು ವಾಣಿಜ್ಯ ಭೂಮಿ- ಕೃಷಿಯೇತರ ಭೂಮಿಯಾಗಿ ಪರಿವರ್ತಿಸಿ ನಂತರ ಮನೆ ಕಟ್ಟಲು ಅನುಮತಿ ಪಡೆಯಲಾಗುವುದು.

Agricultural Land Act
Image Credit: Kannada News

ಹೊಸ ನಿಯಮ ಜಾರಿಗೆ
ಕೃಷಿ ಭೂಮಿಯಲ್ಲಿ ಸ್ವಲ್ಪ ಭಾಗವನ್ನು ಮಾತ್ರ ಕಟ್ಟಡ ನಿರ್ಮಾಣಕ್ಕೆ ಬಳಸಬಹುದಾಗಿದ್ದು, ಸಂಪೂರ್ಣ ಕೃಷಿ ಭೂಮಿಯನ್ನು ಮನೆ ನಿರ್ಮಾಣಕ್ಕೆ ಬಳಸುವಂತಿಲ್ಲ. ನೀವು ರೈತರಾಗಿದ್ದರೆ ಮತ್ತು ಸ್ವಂತ ಜಮೀನು ಹೊಂದಿದ್ದರೆ, ನಿಮಗೆ ಸ್ವಂತ ಸೂರು ಇಲ್ಲದಿದ್ದರೆ, ನೀವು ಮನೆ ನಿರ್ಮಿಸಲು ಈ ಜಮೀನಿನ ಆಯ್ದ ಭಾಗವನ್ನು ಬಳಸಬಹುದು. ಆದರೆ ಅದಕ್ಕೂ ಮೊದಲು ನೀವು ನಿಮ್ಮ ಜಮೀನನ್ನು ಅಗ್ರಿಕಲ್ಚರಲ್ ಲ್ಯಾಂಡ್ ವರ್ಗದಿಂದ ನಾನ್ ಅಗ್ರಿಕಲ್ಚರಲ್ ಲ್ಯಾಂಡ್ ವರ್ಗಕ್ಕೆ ಪರಿವರ್ತಿಸಬೇಕು.

Join Nadunudi News WhatsApp Group

ಆಗ ಮಾತ್ರ ನಿಮಗೆ ಮನೆ ನಿರ್ಮಿಸಲು ಅವಕಾಶ ನೀಡಲಾಗುವುದು. ಒಮ್ಮೆ ನಿಮ್ಮ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತಿಸಿದರೆ ಅಲ್ಲಿ ಮನೆ ಕಟ್ಟಲು ಯಾವುದೇ ಅಡೆತಡೆಗಳಿಲ್ಲ. ಆದರೆ ನಿರ್ಮಾಣಕ್ಕೂ ಮುನ್ನ ಸ್ಥಳೀಯ ಗ್ರಾಮ ಪಂಚಾಯಿತಿ ಅಥವಾ ಪುರಸಭೆಯಿಂದ ಎನ್ ಒಸಿ ಪಡೆಯುವುದು ಕಡ್ಡಾಯ.

Agricultural Land New Rule
Image Credit: Indiafilings

Join Nadunudi News WhatsApp Group