Airtel 2024: 49 ರೂ ರಿಚಾರ್ಜ್ ಮಾಡಿದರೆ ಅನಿಯಮಿತ ಕರೆ ಮತ್ತು ಡೇಟಾ, ಏರ್ಟೆಲ್ ಗ್ರಾಹಕರಿಗೆ ಬಂಪರ್ ರಿಚಾರ್ಜ್ ಪ್ಲಾನ್

49 ರೂಪಾಯಿಯ ಅನಿಯಮಿತ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದ ಏರ್ಟೆಲ್

Airtel 49 Rupees Recharge Plan: ದೇಶದಲ್ಲಿ ಅತೀ ಹೆಚ್ಚು ಗ್ರಾಹಕರನ್ನ ಹೊಂದಿರುವ ಟೆಲಿಕಾಂ ಸಂಸ್ಥೆ ಅಂದರೆ ಅದು ಏರ್ಟೆಲ್ (Airtel) ಎಂದು ಹೇಳಬಹುದು. ಸಾಕಷ್ಟು ವರ್ಷಗಳಿಂದ ಜನರಿಗೆ ಉತ್ತಮವಾದ ಸೇವೆಯನ್ನ ಒದಗಿಸಿಕೊಂಡು ಬಂದಿರುವ ಏರ್ಟೆಲ್ ಸಾಕಷ್ಟು ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಗಳನ್ನ ಕೂಡ ಘೋಷಣೆ ಮಾಡಿದೆ ಎಂದು ಹೇಳಬಹುದು.

ಹೌದು ಸಾಕಷ್ಟು ಅನಿಯಮಿತ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿರುವ ಏರ್ಟೆಲ್ ತನ್ನ ಗ್ರಾಹಕರನ್ನ ವಿಶ್ವಾಸವನ್ನ ಗಳಿಸಿಕೊಂಡಿದೆ. ಸದ್ಯ ಈಗ ಇನ್ನೊಂದು ಹೊಸ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿರುವ ಏರ್ಟೆಲ್ ಮತ್ತೆ ತನ್ನ ಗ್ರಾಹಕರಿಗೆ ಹತ್ತಿರವಾಗಿದೆ ಎಂದು ಹೇಳಿದರೆ ತಪ್ಪಗಲ್ಲ. ಹಾಗಾದರೆ ಏರ್ಟೆಲ್ ಜಾರಿಗೆ ತಂದಿರುವ ಹೊಸ ರಿಚಾರ್ಜ್ ಪ್ಲ್ಯಾನ್ ಯಾವುದು ಅನ್ನುವುದರ ಬಗ್ಗೆ ತಳಿಯೋಣ ಬನ್ನಿ.

Airtel Recharge India
Image Credit: mybigplunge

ಅನಿಯಮಿತ 5 ನೀಡುತ್ತಿರುವ ಏರ್ಟೆಲ್
ಹೌದು ಏರ್ಟೆಲ್ ತನ್ನ ಗ್ರಾಹಕರಿಗೆ ಸದ್ಯ ಅನಿಯಮಿತವಾದ 5G ನೀಡುತ್ತಿದೆ ಎಂದು ಹೇಳಬಹುದು. ದೇಶದಲ್ಲಿ 5G ಜಾರಿಗೆ ಬಂದಾಗಿನಿಂದ ಏರ್ಟೆಲ್ ತನ್ನ ಗ್ರಾಹಕರಿಗೆ ಅನಿಯಮಿತವಾದ 5G ದಾಟವನ್ನ ನೀಡುತ್ತಿದೆ ಎಂದು ಹೇಳಬಹುದು. ಇದರ ನಡುವೆ ಈಗ ಅಗ್ಗದ ಬೆಲೆಯ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿರುವ ಏರ್ಟೆಲ್ ಇನ್ನಷ್ಟು ಗ್ರಾಹಕರಿಗೆ ಹತ್ತಿರವಾಗಿದೆ.

49 ರೂಪಾಯಿಯ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದ ಏರ್ಟೆಲ್
ಹೌದು ಈಗ ಏರ್ಟೆಲ್ ಗ್ರಾಹಕರು ಕೇವಲ 49 ರೂಪಾಯಿಗೆ ಅನಿಯಮಿತ ಡೇಟಾ ಸೇವೆಯನ್ನ ಪಡೆದುಕೊಳ್ಳಬಹುದಾಗಿದೆ. ಹಿಂದೆ 49 ರೂಪಾಯಿಯ ರಿಚಾರ್ಜ್ ನ ಅಡಿಯಲ್ಲಿ 20 GB ಡೇಟಾ ಸೇವೆ ಲಭ್ಯ ಇತ್ತು, ಆದರೆ ಈಗ ಈ ರಿಚಾರ್ಜ್ ನಲ್ಲಿ ಬದಲಾವಣೆ ಮಾಡಲಾಗಿದೆ ಮತ್ತು ಬದಲಾವಣೆಯ ಕಾರಣ ಜನರು ಅನಿಯಮಿತ ಡೇಟಾ ಸೇವೆ ಪಡೆದುಕೊಳ್ಳಬಹುದಾಗಿದೆ.

Airtel 49 Rupees Recharge Plan
Image Credit: Times Of India

49 ರೂಪಾಯಿಯ ರಿಚಾರ್ಜ್ ಅವಧಿ ಎಷ್ಟು
49 ರೂಪಾಯಿಯ ರಿಚಾರ್ಜ್ ಪ್ಲ್ಯಾನ್ ಒಂದು ದಿನದ ಮಾನ್ಯತೆಯನ್ನ ಹೊಂದಿದ್ದು ಗ್ರಾಹಕರು ಒಂದು ದಿನದ ತನಕ ಅನಿಯಮಿತ ಡೇಟಾ ಸೇವೆ ಬದಲಬಹುದಾಗಿದೆ. ಹಿಂದೆ 20GB ಮಾತ್ರ ಲಭ್ಯವಿದ್ದ ಈ ರಿಚಾರ್ಜ್ ಅಡಿಯಲ್ಲಿ ಈಗ ಜನರು ಅನಿಯಮಿತ ಡೇಟಾ ಸೇವೆ ಬದಲಬಹುದು, ಈ ರಿಚಾರ್ಜ್ ಪ್ಲ್ಯಾನ್ 24 ಘಂಟೆಗಳ ಅವಧಿಯನ್ನ ಹೊಂದಿರುತ್ತದೆ.

Join Nadunudi News WhatsApp Group

ಅದೇ ರೀತಿಯಲ್ಲಿ 99 ರೂಪಾಯಿಯ ರಿಚಾರ್ಜ್ ನಲ್ಲಿ ಕೂಡ ಬದಲಾವಣೆ ಮಾಡಲಾಗಿದೆ ಮತ್ತು ಈ 99 ರೂ ರಿಚಾರ್ಜ್ ನಲ್ಲಿ ಜನರು ಎರಡು ದಿನಗಳ ಕಾಲ ಅನಿಯಮಿತ ಡೇಟಾ ಸೇವೆ ಬಳಸಬಹುದಾಗಿದೆ. ಇನ್ನು ಏರ್ಟೆಲ್ ರಿಚಾರ್ಜ್ ಸೇವೆಯನ್ನ ಬದಲಾವಣೆ ಮಾಡಿದ ಬೆನ್ನಲ್ಲೇ ದೇಶದಲ್ಲಿ ಜಿಯೋ ಕೂಡ ತನ್ನ ಕೆಲವು ರಿಚಾರ್ಜ್ ಸೇವೆಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group