Airtel Recharge Plan: ಏರ್ಟೆಲ್, ಜಿಯೋ ಗ್ರಾಹಕರಿಗೆ ಬಿಗ್ ಶಾಕ್, ಈ ರಿಚಾರ್ಜ್ ಪ್ಲಾನ್ ಗಳ ದರ ಹೆಚ್ಚಳ.

ಏರ್ಟೆಲ್, ಜಿಯೋ ರಿಚಾರ್ಜ್ ಪ್ಲಾನ್ ಗಳ ದರ ಹೆಚ್ಚಳ, ಗ್ರಾಹಕರಿಗೆ ಬೇಸರದ ಸುದ್ದಿ

Airtel And Jio Recharge Plan Hike: ದೇಶದಲ್ಲಿ ವಿವಿಧ ಟೆಲಿಕಾಂ ಕಂಪನಿಗಳು ಜನರಿಗೆ ನೆಟ್ವರ್ಕ್ ಅನ್ನು ನೀಡುತ್ತಿದೆ. Airtel, BSNL, Jio, Vi ಸೇರಿದಂತೆ ಕೆಲ ಟೆಲಿಕಾಂ ನೆಟ್ವರ್ಕ್ ಗಳು ಸದ್ಯ ಗ್ರಾಹಕರಿಗೆ ಸೇವೆಯನ್ನು ನೀಡುತ್ತಿದೆಯೆನ್ನಬಹುದು.

ಇನ್ನು ಇನ್ನಿತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ 5G Network ಅನ್ನು ನೀಡುವ Airtel ಬಳಕೆದಾರರ ಸಂಖ್ಯೆ ಹೆಚ್ಚಿದೆ ಎನ್ನಬಹುದು. ಕಂಪನಿಯು ತನ್ನ ಗ್ರಾಹಕರಿಗೆ ವಿಭಿನ್ನ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನೂ ಘೋಷಿಸುತ್ತಿವೆ. ಸದ್ಯ ಏರ್ಟೆಲ್ ಕಂಪನಿಯಿಂದ ಗ್ರಾಹಕರಿಗೆ ಬಹುದೊಡ್ಡ ಶಾಕ್ ಎದುರಾಗಿದೆ.

Airtel And Jio Recharge Plan Hike
Image Credit: India TV News

ಏರ್ಟೆಲ್, ಜಿಯೋ ಗ್ರಾಹಕರಿಗೆ ಬಿಗ್ ಶಾಕ್
ದೇಶದ ಎರಡನೇ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿ ಗುರುತಿಸಿಕೊಂಡಿರುವ Airtel ಸದ್ಯದಲ್ಲೇ ಶುಲ್ಕ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನುವ ಬಗ್ಗೆ ಮೂಲಗಳಿಂದ ವರದಿ ಬಂದಿದೆ. ಜನಪ್ರಿಯ ಭಾರ್ತಿ ಏರ್‌ ಟೆಲ್ ದರವನ್ನು ಹೆಚ್ಚಿಸಬಹುದು ಎಂದು ಏರ್‌ ಟೆಲ್ ಅಧ್ಯಕ್ಷ ಸುನಿಲ್ ಮಿತ್ತಲ್ ಹೇಳಿದ್ದಾರೆ. ಮಾರುಕಟ್ಟೆಯನ್ನು ಸ್ಥಿರವಾಗಿಡಲು ಕಂಪನಿಯು ಟೆಲಿಕಾಂ ದರಗಳನ್ನು ಹೆಚ್ಚಿಸಲಿದೆ ಎಂದು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಏರ್ಟೆಲ್, ಜಿಯೋ ರಿಚಾರ್ಜ್ ಪ್ಲಾನ್ ಗಳ ದರ ಹೆಚ್ಚಳ
ಪರಿಷ್ಕೃತ ದರಗಳ ನಿರ್ದಿಷ್ಟ ಸಮಯದ ಚೌಕಟ್ಟನ್ನು ಸುನಿಲ್ ಮಿತ್ತಲ್ ಬಹಿರಂಗಪಡಿಸಿಲ್ಲ. ಆದಾಗ್ಯೂ, ಪ್ರಸ್ತುತ – 2024 ರ ದ್ವಿತೀಯಾರ್ಧದಲ್ಲಿ ಟೆಲಿಕಾಂ ಶುಲ್ಕಗಳಲ್ಲಿ ಬದಲಾವಣೆಗಳನ್ನು ಕಾಣಬಹುದು. ಮುಂಬರುವ ತಿಂಗಳುಗಳಲ್ಲಿ ಪ್ರತಿ ಬಳಕೆದಾರರ ಸರಾಸರಿ ಆದಾಯವನ್ನು (ARPU) ರೂ 208. ರಿಂದ 300 ರೂ. ಗೆ ಹೆಚ್ಚಿಸುವ ಗುರಿಯನ್ನು ಏರ್‌ಟೆಲ್ ಟೆಲಿಕಾಂ ಕೂಡ ಹೊಂದಿದೆ.

Airtel And Jio Recharge Plan List
Image Credit: Socialnews

ಇತ್ತೀಚಿನ ಟೆಲಿಕಾಂ ವರದಿಯ ಪ್ರಕಾರ ಭಾರ್ತಿ ಏರ್‌ ಟೆಲ್ ಮತ್ತು Reliance Jio ಶೀಘ್ರದಲ್ಲೇ ದೇಶದಲ್ಲಿ ತಮ್ಮ ಅನಿಯಮಿತ 5G ಪ್ರಯೋಗಗಳನ್ನು ಕೊನೆಗೊಳಿಸಬಹುದು. ಎರಡೂ ಟೆಲಿಕಾಂ ಗಳು ಸಾಮಾನ್ಯ 4G ಯೋಜನೆಗಿಂತ 5-10% ಹೆಚ್ಚಿನ ಬೆಲೆಯ ಬೇಡಿಕೆಯ 5G ಯೋಜನೆಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

Join Nadunudi News WhatsApp Group

Join Nadunudi News WhatsApp Group