New Prepaid Plan: Airtel, Jio ಮತ್ತು BSNL ಗ್ರಾಹಕರಿಗೆ 365 ದಿನ ಉಚಿತ ಕರೆ ಮತ್ತು ಅನಿಯಮಿತ ಡೇಟಾ, ದೀಪಾವಳಿ ಬಂಪರ್ ಪ್ಲ್ಯಾನ್ ಘೋಷಣೆ.

Airtel, BSNL, Jio, Vodafone Idea ಗ್ರಾಹಕರಿಗೆ ಕಡಿಮೆ ಬೆಲೆಯ ವಾರ್ಷಿಕ ರಿಚಾರ್ಜ್ ಪ್ಲ್ಯಾನ್.

Airtel, BSNL, Jio, Vodafone Idea Prepaid Recharge Plans: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಸ್ಮಾರ್ಟ್ ಫೋನ್ ಗಳನ್ನ ಬಳಕೆ ಮಾಡುತ್ತಾರೆ. ಈಗೀಗ ಬರುವ ಸ್ಮಾರ್ಟ್ ಫೋನ್ ಗಳಲ್ಲಿ ನಾವು ಡುಯೆಲ್ ಸಿಮ್ ಆಯ್ಕೆಯನ್ನು ಸಹ ನೋಡಬಹುದಾಗಿದೆ. ಜನರು ವ್ಯವಹಾರದ ಉದ್ದೇಶದಿಂದ ಅಥವಾ ಇನ್ನಾವುದೇ ಉದ್ದೇಶದಿಂದ ಎರಡೆರಡು ಸಿಮ್ ಗಳನ್ನೂ ಬಳಕೆ ಮಾಡುತ್ತಾರೆ.

ಸಾಮಾನ್ಯವಾಗಿ ಎರಡು ಸಿಮ್ ಗಳನ್ನ ಹೊಂದುದು ಎಂದರೆ ವೆಚ್ಚ ಜಾಸ್ತಿ ಏಕೆಂದರೆ ಎರಡು ಸಿಮ್ ಗಳಿಗೂ ರಿಚಾರ್ಜ್ ಮಾಡಬೇಕಾಗುತ್ತದೆ. ನಿಮ್ಮ ವೆಚ್ಚವನ್ನು ಕಡಿಮೆ ಮಾಡಲು ಟೆಲಿಕಾಂ ಕಂಪನಿ ದೀಪಾವಳಿ ಹಬ್ಬದ ಆಫರ್ ಅನ್ನು ಘೋಷಣೆ ಮಾಡಿದೆ. ಇದೀಗ ನಾವು ಏರ್ಟೆಲ್, ಜಿಯೋ, ವೊಡಾಫೋನ್ ಐಡಿಯಾ, ಹಾಗೂ ಬಿ ಎಸ್ ಏನ್ ಎಲ್ ಕಂಪನಿಗಳು ಬಿಡುಗಡೆ ಮಾಡಿದ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ತಿಳಿಯೋಣ.

Airtel Prepaid Recharge Plan
Image Credit: Telecomtalk

Airtel Prepaid Recharge Plan
ಏರ್ಟೆಲ್ ನ 1799 Rs ಪ್ರೀಪೇಯ್ಡ್ ಯೋಜನೆ 365 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಇದರಲ್ಲಿ ಅನಿಯಮಿತ ಕರೆ, 24 GB ಡೇಟಾ, 3600 SMS , ಹಾಗೆ ಉಚಿತ ವಿಂಕ್ ಮ್ಯೂಸಿಕ್ ಚಂದಾದಾರಿಕೆ ಬಳಸಬಹುದಾಗಿದೆ.

BSNL Prepaid Recharge Plan
Image Credit: TV9hindi

BSNL Prepaid Recharge Plan
BSNL ಇದೀಗ ಕೈಗೆಟಕುವ ದರದಲ್ಲಿ ವಾರ್ಷಿಕ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ರಿಚಾರ್ಜ್ ನ ಬೆಲೆ 1251 ರೂಪಾಯಿ ಆಗಿದೆ. ಈ ಯೋಜನೆಯಲ್ಲಿ 0 .75 GB ಡೇಟಾವನ್ನು ಮಾಸಿಕವಾಗಿ ಬಳಸಬಹುದಾಗಿದೆ. ಇದು 365 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಒಂದು ಸಿಮ್ ಅನ್ನು ಕಡಿಮೆ ಬಳಸುವುದಾದರೆ ಈ ಪ್ಲ್ಯಾನ್ ಉತ್ತಮವಾಗಿದೆ.

Reliance Jio Prepaid Recharge Plan
Image Credit: Businessleague

Reliance Jio Prepaid Recharge Plan
ಕಡಿಮೆ ವೆಚ್ಚದ ರಿಚಾರ್ಜ್ ಪ್ಲಾನ್ ಗಳಿಗೆ ಜಿಯೋ ಹೆಸರುವಾಸಿಯಾಗಿದೆ. ಜಿಯೋ 1559 ರಿಚಾರ್ಜ್ ಪ್ಲಾನ್ 336 ದಿನಗಳು ಅಂದರೆ 11 ತಿಂಗಳುಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಈ ಯೋಜನೆಯಲ್ಲಿ 24 GB ಡೇಟಾ, ಅನಿಯಮಿತ ಕರೆ, 3600 SMS ಹಾಗೆ ಇದರ ಜೊತೆಗೆ 5G ಬಳಕೆದಾರರು ಅನ್‌ಲಿಮಿಟೆಡ್ ಡೇಟಾವನ್ನು ಪಡೆಯಬಹುದಾಗಿದೆ. ಜಿಯೋ ಗ್ರಾಹಕರು ಈ ರಿಚಾರ್ಜ್ ಪ್ಲಾನ್ ನಲ್ಲಿ ಜಿಯೋ ಟಿವಿ, ಜಿಯೋ ಕ್ಲೌಡ್ ಸೇವೆಗಳನ್ನ ಪಡೆಯಬಹುದಾಗಿದೆ.

Join Nadunudi News WhatsApp Group

Vodafone Idea Prepaid Recharge Plan
Image Credit: Discountwalas

Vodafone Idea Prepaid Recharge Plan
ವೊಡಾಫೋನ್‌ ಐಡಿಯಾದ ವಾರ್ಷಿಕ ರೀಚಾರ್ಜ್ ಪ್ಲಾನ್ 1799 ರೂಪಾಯಿ ಬೆಲೆಯದ್ದಾಗಿದೆ. ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅನಿಯಮಿತ ಕರೆ 24 GB ಡೇಟಾ, 3600 SMS ಈ ಪ್ಲಾನ್ ನಲ್ಲಿ ಲಭ್ಯವಿರುತ್ತದೆ. ಹೆಚ್ಚುವರಿಯಾಗಿ ಬಳಕೆದಾರರು Vi ಮೂವಿಸ್ ಮತ್ತು ಟಿವಿ ಬಳಕೆ ಮಾಡಬಹುದಾಗಿದೆ.

Join Nadunudi News WhatsApp Group