Airtel Plan: ಏರ್ಟೆಲ್ ಗ್ರಾಹಕರಿಗೆ ಇನ್ನೊಂದು ಬಂಪರ್ ಆಫರ್, 84 ದಿನಗಳ ಕಾಲ 15 OTT ಉಚಿತ.

Airtel Plan 999 recharge Plan: ಪ್ರತಿಷ್ಠಿತ ಟೆಲಿಕಾಂ ಕಂಪನಿಯಾದ Airtel ಇದೀಗ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ವಿವಿಧ ರೀತಿಯ ಆಕರ್ಷಕ ರಿಚಾರ್ಜ್ ಪ್ಲ್ಯಾನ್ ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ಹೊಸ ವರ್ಷಕ್ಕೆ ಸದ್ಯ Airtel ತನ್ನ ಬಳಕೆದಾರರಿಗೆ ಅತಿ ಅಗ್ಗದ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನ ನೀಡುವ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. OTT ಸೌಲಭ್ಯದ ಜೊತೆಗೆ ಹೆಚ್ಚಿನ ಡೇಟಾ ಸೌಲಭ್ಯವನ್ನು ನೀಡುತ್ತಿದೆ. ನೀವು OTT ಸೌಲಭ್ಯವನ್ನು ಆನಂದಿಸಲು ಏರ್ಟೆಲ್ ನ ಎಷ್ಟು ರೂ. ರಿಚಾರ್ಜ್ ಮಾಡಿಸಿಕೊಳ್ಳಬೇಕಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Airtel Plan 999 Recharge Plan
Image Credit: Gizbot

ಏರ್ಟೆಲ್ ಗ್ರಾಹಕರಿಗೆ ಇನ್ನೊಂದು ಬಂಪರ್ ಆಫರ್
ಸದ್ಯ ಜನರು ಹೆಚ್ಚಾಗಿ OTT Application ಗಳನ್ನೂ ಬಳಸುತ್ತಾರೆ. ವೆಬ್ ಸರಣಿ ಹಾಗೂ ಸಿನಿಮಾಗಳನ್ನೂ ವೀಕ್ಷಿಸಲು ಹೆಚ್ಚಾಗಿ OTT Subscription ಅಗತ್ಯವಿದೆ. ಈಗಂತೂ ಬಹುತೇಕ ಸಿನಿಮಾಗಳು OTT ಯಲ್ಲಿಯೇ ಬಿಡುಗಡೆಯಾಗುತ್ತಿವೆ. ಥಿಯೇಟರ್ ನ ಬದಲಾಗಿ ಜನರು ಹೆಚ್ಚಾಗಿ OTT ಅಪ್ಲಿಕೇಶನ್ ನಲ್ಲಿಯೇ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೆ. ಸದ್ಯ Airtel ತನ್ನ ಬಳಕೆದಾರರಿಗೆ15 OTT Application ಗೆ ಉಚಿತ ಚಂದಾದಾರಿಕೆಯ್ನನು ನೀಡುವಂತಹ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ.

84 ದಿನಗಳ ಕಾಲ 15 OTT ಉಚಿತ
ಏರ್ಟೆಲ್ ತನ್ನ ಬಳಕೆದಾರರಿಗಾಗಿ ಉತ್ತಮ ಸೌಲಭ್ಯವಿರುವ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಗ್ರಾಹಕರು ಕೇವಲ 999 ರೂ. ರಿಚಾರ್ಜ್ ಮಾಡಿಕೊಳ್ಳುವುದರಿಂದ 15 ಕ್ಕೂ ಹೆಚ್ಚಿನ OTT Application ಗಳ ಚಂದಾದಾರಿಕೆಯನ್ನು ಪಡೆಯಬಹುದು. 199 ರೂ. ಏರ್‌ ಟೆಲ್ ಯೋಜನೆಯೊಂದಿಗೆ ನೀವು ಪ್ರತಿನಿತ್ಯ 2 .5 GB ಹೈ ಸ್ಪೀಡ್ ಡೇಟಾದ ಪ್ರಯೋಜನವನ್ನು ಪಡೆಯಬಹುದು.

Airtel Recharge Plans List
Image Credit: Freekaamaal

ಈ ಯೋಜನೆಯೊಂದಿಗೆ ನೀವು ಉಚಿತ ಕರೆ ಹಾಗೂ SMS ಪ್ರಯೋಜನವನ್ನು ಪಡೆಯಬಹುದು. ಇನ್ನು ನೀವು 999 ರೂ. ಏರ್‌ ಟೆಲ್ ಪ್ರಿಪೇಯ್ಡ್ ಪ್ಲಾನ್‌ ನೊಂದಿಗೆ ನೀವು Sony LIV, Lionsgate Play, Fancode, Eras Now, Hoichoi ಮತ್ತು Manorama Max ನಂತಹ OTT ಪ್ಲಾಟ್‌ ಫಾರ್ಮ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು. ಈ ಯೋಜನೆಯು ಬಳಕೆದಾರರಿಗೆ ಬರೋಬ್ಬರಿ 84 ದಿನಗಳ ಮಾನ್ಯತೆಯನ್ನು ನೀಡುತ್ತದೆ.

Join Nadunudi News WhatsApp Group

Join Nadunudi News WhatsApp Group