Airtel OTT Plan: 2024 ರ ಮೊದಲ ರಿಚಾರ್ಜ್ ಆಫರ್ ಬಿಡುಗಡೆ ಮಾಡಿದ ಏರ್ಟೆಲ್, ಡೇಟಾ ಮತ್ತು ಕರೆ ಜೊತೆಗೆ 15 OTT ಉಚಿತ

2024 ರ ಮೊದಲ ಆಫರ್ ಘೋಷಣೆ ಮಾಡಿದ ಏರ್ಟೆಲ್, ಉಚಿತ ಡೇಟಾ ಜೊತೆಗೆ OTT ಫ್ರೀ

Airtel Recharge Plan For Free OTT Subscription: ದೇಶದಲ್ಲಿ Airtel ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ಪ್ರತಿಷ್ಠಿತ ಟೆಲಿಕಾಂ ಕಂಪನಿಯಾದ Airtel ಇದೀಗ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ವಿವಿಧ ರೀತಿಯ ಆಕರ್ಷಕ ರಿಚಾರ್ಜ್ ಪ್ಲ್ಯಾನ್ ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ಹೊಸ ವರ್ಷಕ್ಕೆ ಸದ್ಯ Airtel ತನ್ನ ಬಳಕೆದಾರರಿಗೆ ಅತಿ ಅಗ್ಗದ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನ ನೀಡುವ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ.

OTT ಸೌಲಭ್ಯದ ಜೊತೆಗೆ ಹೆಚ್ಚಿನ ಡೇಟಾ ಸೌಲಭ್ಯವನ್ನು ನೀಡುತ್ತಿದೆ. ಗ್ರಾಹಕರಿಗೆ ಅನುಕೂಲವಾಗಲು Airtel ಇದೀಗ ಈ ರಿಚಾರ್ಜ್ ನಲ್ಲಿ ಎಲ್ಲ ಪ್ರಯೋಜನ ನೀಡುವಂತ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಏರ್ಟೆಲ್ ಹೊಸ ವರ್ಷಕ್ಕೆ ಪರಿಚಯಿಸಿರುವ ರಿಚಾರ್ಜ್ ಪ್ಲಾನ್ ನ ಬೆಲೆ ಎಷ್ಟು..? ಈ ರಿಚಾರ್ಜ್ ಪ್ಲಾನ್ ಯಾವೆಲ್ಲ ಸೌಲಭ್ಯ ನೀಡಲಿದೆ ಎನ್ನುವ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

Airtel Recharge Plan For Free OTT Subscription
Image Credit: Hindustantimes

ಹೊಸ ವರ್ಷಕ್ಕೆ ಹೊಸ ರಿಚಾರ್ಜ್ ಪ್ಲಾನ್ ಪರಿಚಯಿಸಿದ ಏರ್ಟೆಲ್
ಸದ್ಯ ಜನರು ಹೆಚ್ಚಾಗಿ OTT Application ಗಳನ್ನೂ ಬಳಸುತ್ತಾರೆ. ವೆಬ್ ಸರಣಿ ಹಾಗೂ ಸಿನಿಮಾಗಳನ್ನೂ ವೀಕ್ಷಿಸಲು ಹೆಚ್ಚಾಗಿ OTT Subscription ಅಗತ್ಯವಿದೆ. ಈಗಂತೂ ಬಹುತೇಕ ಸಿನಿಮಾಗಳು OTT ಯಲ್ಲಿಯೇ ಬಿಡುಗಡೆಯಾಗುತ್ತಿವೆ. ಥಿಯೇಟರ್ ನ ಬದಲಾಗಿ ಜನರು ಹೆಚ್ಚಾಗಿ OTT ಅಪ್ಲಿಕೇಶನ್ ನಲ್ಲಿಯೇ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೆ. ಸದ್ಯ Airtel ತನ್ನ ಬಳಕೆದಾರರಿಗೆ OTT Application ಗೆ ಉಚಿತ ಚಂದಾದಾರಿಕೆಯ್ನನು ನೀಡುವಂತಹ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ.

ಕೇವಲ 148 ರೂ. ಗೆ 15 OTT ಅಪ್ಲಿಕೇಶನ್
ಏರ್ಟೆಲ್ ತನ್ನ ಬಳಕೆದಾರರಿಗಾಗಿ ಉತ್ತಮ ಸೌಲಭ್ಯವಿರುವ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಗ್ರಾಹಕರು ಕೇವಲ 148 ರೂ. ರಿಚಾರ್ಜ್ ಮಾಡಿಕೊಳ್ಳುವುದರಿಂದ 15 ಕ್ಕೂ ಹೆಚ್ಚಿನ OTT Application ಗಳ ಚಂದಾದಾರಿಕೆಯನ್ನು ಪಡೆಯಬಹುದು. 148 ರೂ. ಏರ್‌ ಟೆಲ್ ಯೋಜನೆಯೊಂದಿಗೆ ನೀವು 15 GB ಹೈ ಸ್ಪೀಡ್ ಡೇಟಾದ ಪ್ರಯೋಜನವನ್ನು ಪಡೆಯಬಹುದು. ಇದು ಡೇಟಾ ಯೋಜನೆಯಾಗಿದೆ ಅಂದರೆ ಈ ಯೋಜನೆಯೊಂದಿಗೆ ನೀವು ಕರೆ ಮಾಡುವ ಅಥವಾ SMS ಮಾಡುವ ಪ್ರಯೋಜನವನ್ನು ಪಡೆಯುವುದಿಲ್ಲ.

Airtel 148 Rs Recharge Plan
Image Credit: News Next Live

ಇನ್ನು 148 ರೂ. ಈ ಕೈಗೆಟುಕುವ ಯೋಜನೆಯು ನಿಮ್ಮ ಅಸ್ತಿತ್ವದಲ್ಲಿರುವ ಯೋಜನೆಯ ಮಾನ್ಯತೆಗೆ ಸಮನಾಗಿರುತ್ತದೆ. 148 ರೂ. ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌ ನೊಂದಿಗೆ ನೀವು Sony LIV, Lionsgate Play, Fancode, Eras Now, Hoichoi ಮತ್ತು Manorama Max ನಂತಹ OTT ಪ್ಲಾಟ್‌ ಫಾರ್ಮ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು. ಈ ಯೋಜನೆಯೊಂದಿಗೆ 15 GB ಡೇಟಾ ಲಭ್ಯವಿದೆ, ಆದರೆ ಡೇಟಾ ಮುಗಿದ ನಂತರ ಪ್ರತಿ MB ಗೆ 50 ಪೈಸೆ ವಿಧಿಸಲಾಗುತ್ತದೆ.

Join Nadunudi News WhatsApp Group

Join Nadunudi News WhatsApp Group