ಒಂದು ಕಾಲದ ಟಾಪ್ ನಟಿ ಈಗ ಸಾಬೂನು ಮಾರಿಕೊಂಡು ಜೀವನ ಮಾಡುತ್ತಿದ್ದಾಳೆ, ಈಕೆ ಯಾರು ನೋಡಿ.

ಸ್ಟಾರ್ ನಟ ನಟಿಯರು ಅಂದಮೇಲೆ ಅವರ ಬಳಿ ಕೋಟಿಗಟ್ಟಲೆ ಹಣ ಇರುತ್ತದೆ ಮತ್ತು ಅವರಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ ಎಂದು ಅದೆಷ್ಟೋ ಜನರು ಭಾವಿಸಿದ್ದಾರೆ. ಹೌದು ಇತ್ತೀಚಿನ ದಿನಗಳಲ್ಲಿ ನಟ ನಟಿಯರು ಕೋಟಿಗಟ್ಟಲೆ ಹಣವನ್ನ ಸಂಭಾವನೆಯ ರೂಪದಲ್ಲಿ ಪಡೆಯುತ್ತಿರುವ ಕಾರಣ ಬಹುತೇಕ ಎಲ್ಲಾ ಜನರ ತಲೆಯಲ್ಲಿ ನಟ ನಟಿಯರ ಬಳಿ ಸಾಕಷ್ಟು ಹಣ ಇರುತ್ತದೆ ಎಂದು ಭಾವಿಸಿದ್ದಾರೆ. ಚಿತ್ರರಂಗ ಕೆಲವು ನಟ ನಟಿಯರ ಕೈ ಹಿಡಿದರೆ ಇನ್ನೂ ಕೆಲವರನ್ನ ಚಿತ್ರರಂಗ ಪಾತಾಳಕ್ಕೆ ಬೀಳುವಂತೆ ಮಾಡಿದೆ. ಸಿನಿಮಾ ನಂಬಿಕೊಂಡ ಬಂದ ಅದೆಷ್ಟೋ ಜನರು ಈಗ ಹಣವಿಲ್ಲದೆ ಪರದಾಡುತ್ತಿರುವ ಘಟನೆಯನ್ನ ಕೂಡ ನಾವು ನೀವೆಲ್ಲ ನೋಡಬಹುದಾಗಿದೆ.

ಇನ್ನು ಅದೇ ರೀತಿಯಲ್ಲಿ ಒಂದು ಕಾಲದಲ್ಲಿ ಚಿತ್ರರಂಗದ ಸ್ಟಾರ್ ನಟಿಯಾಗಿ ಮಿಂಚಿದ ಖ್ಯಾತ ನಟಿ ಈಗ ಬೀದಿ ಬೀದಿಯಲ್ಲಿ ಸೋಫಾ ಮಾರಿಕೊಂಡು ಜೀವನ ಮಾಡುತ್ತಿದ್ದು ಈಕೆಯನ್ನ ನೋಡಿದ ಅದೆಷ್ಟೋ ಜನರು ಬೇಸರವನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಈ ಖ್ಯಾತ ನಟಿ ಯಾರು ಮತ್ತು ಈಕೆಯ ಜೀವನದಲ್ಲಿ ಆಗಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Aishwarya bhaskar

ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿದ ಖ್ಯಾತ ನಟಿ ಐಶ್ವರ್ಯ ಭಾಸ್ಕರ್ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದ್ದಾರೆ ಎಂದು ಹೇಳಬಹುದು. ತಮಿಳು, ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಯ ಸ್ಟಾರ್ ನಟರ ಜೊತೆ ನಟನೆಯನ್ನ ಮಾಡಿ ಮಿಂಚಿದ ಖ್ಯಾತ ನಟಿ ಐಶ್ವರ್ಯ ಭಾಸ್ಕರ್ ಆಗಿನ ಕಾಲದ ಟಾಪ್ ನಟಿಯರಲ್ಲಿ ಒಬ್ಬರು. ಕಾಲ ಉರುಳಿದಂತೆ ಈ ನಟಿಗೆ ಬೆಳ್ಳಿತೆರೆಯ ಮೇಲೆ ಅವಕಾಶಗಳು ಕಡಿಮೆಯಾದ ಕಾರಣ ನಟಿ ಐಶ್ವರ್ಯ ಭಾಸ್ಕರ್ ಅವರು ಕಿರುತೆರೆಯಲ್ಲಿ ನಟನೆಯನ್ನ ಮಾಡಲು ಆರಂಭ ಮಾಡಿದರು. ಕೆಲವು ದಿನಗಳ ನಂತರ ಕಿರುತೆರೆಯಲ್ಲಿ ಕೂಡ ಅವಕಾಶ ಸಿಗದ ಕಾರಣ ಜೀವನದಲ್ಲಿ ಏನು ಮಾಡಬೇಕು ಎಂದು ತೋಚದ ಈ ನಟಿ ಈಗ ಸಭೂನು ಮಾರಿಕೊಂಡು ಜೀವನವನ್ನ ಮಾಡುತ್ತಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿಷಯ ಬಹಿರಂಗಪಡಿಸಿರುವ ಐಶ್ವರ್ಯ, ನನಗೆ ಅವಕಾಶಗಳು ಬರುತ್ತಿಲ್ಲ. ಹಾಗಾಗಿ ಹೊಟ್ಟೆಪಾಡಿಗಾಗಿ ಬೀದಿ ಬದಿಯಲ್ಲಿ ಸಾಬೂನು ಮಾರಿ ಜೀವನ ಸಾಗಿಸುತ್ತಿದ್ದೇನೆ. ಈಗಿನ ಪರಿಸ್ಥಿತಿಯಲ್ಲಿ ಟಾಯ್ಲೆಟ್‌ ತೊಳೆಯುವ ಕೆಲಸ ಕೊಟ್ಟರೂ ಮಾಡುವ ಸ್ಥಿತಿಯಲ್ಲಿದ್ದೇನೆ. ನಟನೆಗೆ ಅವಕಾಶ ಇನ್ನಾದರೂ ಬರುತ್ತದೆಯೇ ಎಂದು ಕಾದು ನೋಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ನಾನು ಮಗಳ ಮದುವೆ ಮಾಡಿದ್ದೇನೆ. ನಾನು ದುಡಿದದ್ದನ್ನೆಲ್ಲಾ ಕುಡಿದು ಹಾಳು ಮಾಡಿಲ್ಲ. ನಾವು ವೃತ್ತಿಜೀವನದಲ್ಲಿ ಟಾಪಲ್ಲಿ ಇದ್ದಿದ್ದೇ ಮೂರು ವರ್ಷ. ನಾನೀಗ ಒಂಟಿ. ಹಾಗಾಗಿ ನಾನು ನನ್ನ ಜೀವನ ನೋಡಿಕೊಳ್ಳಲು ಅಗತ್ಯ ಇರುವಷ್ಟು ಸಂಪಾಧನೆ ಮಾಡುತ್ತಿದ್ದೇನೆ ಎಂದು ನಟಿ ಹೇಳಿದ್ದಾರೆ.

Join Nadunudi News WhatsApp Group

Aishwarya bhaskar

Join Nadunudi News WhatsApp Group