Aaradhya Bachchan: ಮಗಳ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಚಳಿ ಬಿಡಿಸಿದ ಐಶ್ವರ್ಯ ರೈ.

ಮಗಳ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಖಡಕ್ ವಾರ್ನಿಂಗ್ ನೀಡಿದ ನಟಿ ಐಶ್ವರ್ಯ ರೈ

Aishwarya Rai Daughter Aaradhya Bachchan: ಬಾಲಿವುಡ್ ನ ಖ್ಯಾತ ನಟ ಅಮಿತಾಬ್ ಬಚ್ಚನ್ (Amitabh Bachchan) ಅವರ ಮಗ ಅಭಿಷೇಕ್ ಬಚ್ಚನ್ (Abhishek Bachchan) ಹಾಗೂ ಅವರ ಪತ್ನಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ (Aishwarya Rai) ಅವರು ಇತ್ತೀಚಿಗೆ ತಮ್ಮ ವಿಚ್ಛೇದನದ ವಿಚಾರವಾಗಿ ಬಾರಿ ಸುದ್ದಿಯಲ್ಲಿದ್ದರು.

ಇನ್ನು ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ತಮ್ಮ ಬಗ್ಗೆ ಹರಡಿರುವ ಸುಳ್ಳು ಸುದ್ದಿಗಳ ಕುರಿತಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಐಶ್ವರ್ಯ ರೈ ಅವರು ತಮ್ಮ ಮಗಳ ಬಗ್ಗೆ ಹರಡಿರುವ ಸುಳ್ಳು ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Aishwarya Rai Daughter Aaradhya Bachchan
Image Source: Vijaykarnataka

ಕೋರ್ಟ್ ಮೆಟ್ಟಿಲೇರಿದ್ದ ಅಮಿತಾಬ್ ಮೊಮ್ಮಗಳು
ಅಭಿಷೇಕ ಬಚ್ಚನ್ ಹಾಗೂ ಅವರ ಪತ್ನಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರ ಮಗಳು ಆರಾಧ್ಯ ಬಚ್ಚನ್ ಆರೋಗ್ಯ ಹಾಗೂ ಜೀವನಕ್ಕೆ ಸಂಬಂಧಿಸಿದಂತೆ YT ಟ್ಯಾಬ್ಲಾಯ್ಡ್ ನಕಲಿ ಸುದ್ದಿಗಳನ್ನು ವೈರಲ್ ಮಾಡಿದ್ದವು. ಇನ್ನು ತಮ್ಮ ಮಗಳ ಬಗ್ಗೆ ಹರಡಿರುವ ಸುಳ್ಳು ಸುದ್ದಿಯ ಬಗ್ಗೆ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಗರಂ ಆಗಿದ್ದರು.

ಆರಾಧ್ಯ ಬಚ್ಚನ್ YT ಟ್ಯಾಬ್ಲಾಯ್ಡ್ ವಿರುದ್ಧ ದೂರು ದಾಖಲಿಸಿದ್ದಾರೆ. ಆರಾಧ್ಯ ಬಚ್ಚನ್ ದೂರನ್ನು ಪರಿಗಣಿಸಿ ಯುಆರ್ ಎಲ್ ಗಳಿಗೆ ಸಂಬಂಧಿಸಿದಂತೆ ವಿಡಿಯೋಗಳನ್ನು ಪ್ರಸಾರ ಮಾಡದಂತೆ 1 -9 ಪ್ರತಿವಾದಿಗಳನ್ನು ತಕ್ಷಣವೇ ನಿರ್ಧರಿಸಲಾಗಿದೆ. ಇದೀಗ ಪೊನ್ನಿಯಿನ್ ಸೆಲ್ವನ್ 2 ಚಿತ್ರದ ಪತ್ರಿಕಾ ಸುದ್ದಿಗೋಷ್ಠಿಯಲ್ಲಿ ಐಶ್ವರ್ಯ ರೈ ತಮ್ಮ ಮಗಳ ಬಗ್ಗೆ ಹರಡಿರುವ ಸುಳ್ಳು ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Aishwarya Rai Daughter Aaradhya Bachchan
Image Source: Vijay karanataka

ಮಗಳ ಆರೋಗ್ಯದ ಸುಳ್ಳು ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿದ ಐಶ್ವರ್ಯ ರೈ
“ಮಾಧ್ಯಮದ ಸದಸ್ಯರುಗಳು ಮಾತ್ರ ಇಂತದ್ದನ್ನು ಗುರುತಿಸಿರುವುದು ತುಂಬಾ ಒಳ್ಳೆಯದು. ಆದ್ದರಿಂದ ನೀವು ನಿಸ್ಸಂಶಯವಾಗಿ ಅದನ್ನೆಲ್ಲಾ ಪ್ರಸಾರ ಮಾಡಲು ಹೋಗುವುದಿಲ್ಲ. ನೀವು ಅದನ್ನು ಪ್ರೋತ್ಸಾಹಿಸಲು ಹೋಗುವುದಿಲ್ಲ ಎಂದು ನಮಗೆ ಭರವಸೆಯನ್ನು ನೀಡುತ್ತದೆ.

Join Nadunudi News WhatsApp Group

ಸಂವೇದನರಾಹಿತ ಮತ್ತು ಅನಗತ್ಯವಾದ ಸುಳ್ಳು ಬರವಣಿಗೆ ಅಥವಾ ಅನಗತ್ಯ ಬರವಣಿಗೆಯ ನಕಾರಾತ್ಮಕ ಪರಿಣಾಮವನ್ನು ನೀವು ಬುದ್ದಿವಂತಿಕೆಯಿಂದ ಗುರುತಿಸಿದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲಕ್ಕಾಗಿ ಮತ್ತು ಇಂತಹ ಸುಳ್ಳು ಸುದ್ದಿಗಳನ್ನು ಗುರುತಿಸಿದ್ದಕ್ಕೆ ನಿಮ್ಮ ಬುದ್ದಿವಂತಿಕೆಗೆ ತುಂಬಾ ಧನ್ಯವಾದಗಳು” ಎಂದು ಪ್ರತಿಕ್ರಿಯಿಸಿದ್ದಾರೆ.

Aishwarya Rai Daughter Aaradhya Bachchan
Image Source: BelakuNews

Join Nadunudi News WhatsApp Group