Aaradya Bachchan: ಕೋರ್ಟ್ ಮೆಟ್ಟಿಲೇರಿದ ಐಶ್ವರ್ಯ ರೈ ಮಗಳು, ಸುದ್ದಿಯ ವಿರುದ್ಧ ಗರಂ ಆದ ಅಮಿತಾಭ್.

ಆರೋಗ್ಯದ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸಿದರವರ ಮೇಲೆ ದೂರು ನೀಡಿದ ಆರಾಧ್ಯ ಬಚ್ಚನ್.

Aradya Bachchan: ಬಾಲಿವುಡ್ ನ ಖ್ಯಾತ ನಟ ಅಮಿತಾಬ್ ಬಚ್ಚನ್ (Amitabh Bachchan) ಅವರ ಮಗ ಅಭಿಷೇಕ್ ಬಚ್ಚನ್ (Abhishek Bachchan) ಹಾಗೂ ಅವರ ಪತ್ನಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ (Aishwarya Rai) ಅವರು ಇತ್ತೀಚಿಗೆ ತಮ್ಮ ವಿಚ್ಛೇದನದ ವಿಚಾರವಾಗಿ ಬಾರಿ ಸುದ್ದಿಯಲ್ಲಿದ್ದರು.

ಇದೀಗ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ತಮ್ಮ ಬಗ್ಗೆ ಹರಡಿರುವ ಸುಳ್ಳು ಸುದ್ದಿಗಳ ಕುರಿತಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.

Aradya Bachchan Complint
Image Source: ABP News

ಆರಾಧ್ಯ ಬಚ್ಚನ್ ಆರೋಗ್ಯದ ವಿಚಾರವಾಗಿ ಸುಳ್ಳು ಸುದ್ದಿ ವೈರಲ್
ಅಮಿತಾಬ್ ಬಚ್ಚನ್ ಅವರ ಮಗ ಅಭಿಷೇಕ ಬಚ್ಚನ್ ಹಾಗೂ ಅವರ ಪತ್ನಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರ ಮಗಳು ಆರಾಧ್ಯ ಬಚ್ಚನ್ ಆರೋಗ್ಯ ಹಾಗೂ ಜೀವನಕ್ಕೆ ಸಂಬಂಧಿಸಿದಂತೆ YT ಟ್ಯಾಬ್ಲಾಯ್ಡ್ ನಕಲಿ ಸುದ್ದಿಗಳನ್ನು ವೈರಲ್ ಮಾಡಿದೆ.

ಇನ್ನು ತಮ್ಮ ಮಗಳ ಬಗ್ಗೆ ಸುಳ್ಳು ಸುದ್ದಿಯ ಬಗ್ಗೆ ಅಭಿಷೇಕ್ ಬಚ್ಚನ್ ಗರಂ ಆಗಿದ್ದಾರೆ. ಇದೀಗ ಆರಾಧ್ಯ ಬಚ್ಚನ್ YT ಟ್ಯಾಬ್ಲಾಯ್ಡ್ ವಿರುದ್ಧ ದೂರು ದಾಖಲಿಸಿದ್ದಾರೆ.

Aradya Bachchan Complint
Image Source: NDTV.COM

ಕೋರ್ಟ್ ಮೆಟ್ಟಿಲೇರಿದ ಅಮಿತಾಬ್ ಮೊಮ್ಮಗಳು
ತಮ್ಮ ಬಗ್ಗೆ ಸುಳ್ಳು ಸುದ್ದಿಗಳನ್ನು ವೈರಲ್ ಮಾಡಿದ ಕಾರಣ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು YT ಟ್ಯಾಬ್ಲಾಯ್ಡ್ ವಿರುದ್ಧ ದೆಹಲಿ ಹೈಕೋರ್ಟ್ ನಲ್ಲಿ ದೂರು ನೀಡಿದ್ದಾರೆ. 11 ವರ್ಷದ ಬಾಲಕಿ ತಾನು ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ತನ್ನ ಬಗ್ಗೆ ಮಾಧ್ಯಮಗಳು ಸುಳ್ಳು ಸುದ್ದಿ ಹರಡಿದೆ ಎಂದು ದೂರು ನೀಡಿದ್ದಾರೆ.

Join Nadunudi News WhatsApp Group

ಇಂತಹ ನಕಲಿ ವರದಿ ಮಾಡುವರ ವಿರುದ್ಧ ಆರಾಧ್ಯ ಬಚ್ಚನ್ ತಡೆಯಾಜ್ಞೆಯನ್ನು ಕೋರಿದ್ದಾರೆ. ಈ ದೂರಿನ ಹಿನ್ನಲೆ ಏಪ್ರಿಲ್ 20 ರಂದು ದೆಹಲಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.

Aradya Bachchan Complint
Image Source: Law Trend

Join Nadunudi News WhatsApp Group