Aishwarya Rai: ವೈರಲ್ ಆಯಿತು ನಟಿ ಐಶ್ವರ್ಯ ರೈ ಆಸ್ತಿ ವಿವರ, ದೇಶದ ಶ್ರೀಮಂತ ನಟಿ.

ನಟಿ ಐಶ್ವರ್ಯ ರೈ ಅವರ ಒಟ್ಟು ಆಸ್ತಿಯ ಮೌಲ್ಯದ ಬಗ್ಗೆ ಮಾಹಿತಿ

Aishwarya Rai Net Worth: ಮಾಜಿ ವಿಶ್ವ ಸುಂದರಿ ಪಟ್ಟವನ್ನು ಪಡೆದಿರುವ Aishwarya Rai ಬಗ್ಗೆ ಎಲ್ಲರಿಗು ತಿಳಿದೇ ಇದೆ. ಇನ್ನು 1994 ರಲ್ಲಿ ವಿಶ್ವ ಸುಂದರಿ ಪಟ್ಟವನ್ನು ತನ್ನಡಗಿಸಿಕೊಂಡಿದ್ದ ಐಶ್ವರ್ಯ ರೈ ಇಂದಿಗೂ ಕೂಡ ಎಲ್ಲರ ನೆಚ್ಚಿನ ನಟಿಯಾಗಿದ್ದಾರೆ. ಈ ಮಾಜಿ ವಿಶ್ವ ಸುಂದರಿ ಭಾರತೀಯ ಚಿತ್ರರಂಗದಲ್ಲಿಯೂ ಛಾಪು ಮೂಡಿಸುವ ಮೂಲಕ ಮನೆ ಮಾತಾಗಿದ್ದಾರೆ. ಕೆಲವೊಂದಿಷ್ಟು ಸಿನಿಮಾಗಳಲ್ಲಿ ಮಿಂಚಿದ್ದ ಮಾಜಿ ವಿಶ್ವ ಸುಂದರಿ ಈಗಲೂ ಹೈಲೈಟ್ ಆಗುತ್ತಾ ಇರುತ್ತದೆ.

1994 ರಲ್ಲಿ ವಿಶ್ವ ಸುಂದರಿ ಪಟ್ಟವನ್ನು ಪಡೆದ ಐಶ್ವರ್ಯ ರೈ ಅವರ ಆಸ್ತಿ ಮೌಲ್ಯ ಎಷ್ಟಿರಬಹುದು..? ಎನ್ನುವ ಬಗ್ಗೆ ಅನೇಕರು ಯೋಚಿಸಿರಬಹುದು. ನಾವೀಗ ಇಂದು ಈ ಲೇಖನದಲ್ಲಿ ನಟಿ ಐಶ್ವರ್ಯ ರೈ ಅವರ ಒಟ್ಟು ಆಸ್ತಿಯ ಮೌಲ್ಯದ ಬಗ್ಗೆ ಮಾಹಿತಿ ನೀಡಲಿದ್ದೇವೆ.

Aishwarya Rai Family
Image Credit: onmanorama

ಭಾರತದ ಶ್ರೀಮಂತ ನಟಿ ಇವರೇ ನೋಡಿ
ಇನ್ನು ಬಚ್ಚನ್ ಕುಟುಂಬದಲ್ಲಿ ಒಬ್ಬರಾಗಿರುವ ಐಶ್ವರ್ಯ ರೈ ಐಷಾರಾಮಿ ಜೀವನವನ್ನು ನಡೆಸುವುದು ಸಾಮಾನ್ಯ ವಿಚಾರ. ಐಶ್ವರ್ಯ ರೈ ಆಗಾಗ ತಮ್ಮ ಹೈಫೈ ಜೀವನ ಶೈಲಿಯ ಕಾರಣಕ್ಕಾಗಿ ಎಲ್ಲರ ಗಮನ ಸೆಳೆದು ಸುದ್ದಿಯಾಗುತ್ತಾರೆ. ಆಗಾಗ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಐಶ್ವರ್ಯ ರೈ ಇಂದಿಗೂ ಬೇಡಿಕೆ ಕಳೆದುಕೊಂಡಿಲ್ಲ. ಇನ್ನು 50 ವರ್ಷ ವಯಸ್ಸಿನ ಐಶ್ವರ್ಯ ರೈ ಇಂದಿಗೂ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡಿಕೊಂಡಿದ್ದಾರೆ. 1997 ರಲ್ಲಿ ಮಣಿರತ್ನಂ ಅವರ ‘ಇರುವರ್’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ನಟಿ ಭಾರತದ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

Actress Aishwarya Rai
Image Credit: Yashbharat

ವೈರಲ್ ಆಯಿತು ನಟಿ ಐಶ್ವರ್ಯ ರೈ ಆಸ್ತಿ ವಿವರ, ದೇಶದ ಶ್ರೀಮಂತ ನಟಿ
ಇರುವರ್ ಚಿತ್ರದ ನಂತರ, ಅದೇ ವರ್ಷದಲ್ಲಿ ಅವರು ರಾಹುಲ್ ರಾವೈಲ್ ಅವರ ಔರ್ ಪ್ಯಾರ್ ಹೋ ಗಯಾದಲ್ಲಿ ನಟಿಸಿದರು. ಅವರ ವೃತ್ತಿಜೀವನದಲ್ಲಿ ಅವರು ಹಮ್ ದಿಲ್ ದೇ ಚುಕೆ ಸನಮ್, ದೇವದಾಸ್, ಧೂಮ್ 2, ಗುರು ಮತ್ತು ರೋಬೋಟ್‌ ನಂತಹ ಬೃಹತ್ ಹಿಟ್‌ ಗಳನ್ನು ನೀಡಿದ್ದಾರೆ. ಅದಾಗ್ಯೂ, ಅಲ್ಬೆಲಾ ಹಮ್ ಕಿಸೀಸೆ ಕಾಮ್ ನಹಿ, ದಿಲ್ ಕಾ ರಿಶ್ತಾ, ಕುಚ್ ನಾ ಕಹೋ, ಕ್ಯೂ ಹೋ ಗಯಾ ನಾ, ಫನ್ನೆ ಖಾನ್ ಮತ್ತು ಜಜ್ಬಾದಂತಹ ಫ್ಲಾಪ್‌ ಗಳಲ್ಲಿ ಕಾಣಿಸಿಕೊಂಡರು.

ಇನ್ನು ವರದಿಗಳ ಪ್ರಕಾರ ಐಶ್ವರ್ಯಾ ರೈ 700 ಕೋಟಿ ರೂ. ಅವರು ನಿವ್ವಳ ಮೌಲ್ಯದೊಂದಿಗೆ ಭಾರತದ ಶ್ರೀಮಂತ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸೆಲೆಬ್ರೆಟಿಗಳು ಐಷಾರಾಮಿ ಜೀವನ ಹಾಗೂ ಕೋಟಿ ಕೋಟಿ ಹಣ ಹೊಂದುವುದು ಸಹಜ ವಿಚಾರ. ಅದರಲ್ಲೂ ಟಾಪ್ ಬೆಸ್ಟ್ ನಟಿಯಾಗಿರುವ ಐಶ್ವರ್ಯ ರೈ 700 ಕೋಟಿ ರೂ. ಹೊಂಡಿರುವುದು ಅಚ್ಚರಿಯ ವಿಷಯವೇನಲ್ಲ. ನಟಿ ಐಶ್ವರ್ಯ ರೈ ಈಗಲೂ ಕೂಡ ಕೆಲ ಚಿತ್ರಗಳಲ್ಲಿ ಮುಖ್ಯ ಪಾತ್ರವನ್ನು ಮಾಡುವ ಮೂಲಕ ಎಲ್ಲರಿಗು ಹತ್ತಿರವಾಗುತ್ತಿದ್ದಾರೆ.

Join Nadunudi News WhatsApp Group

Aishwarya Rai Net Worth
Image Credit: Firstpost

Join Nadunudi News WhatsApp Group