Akshaya Tritiya 2024: ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸುವ ಬಯಕೆ ಇದೆಯಾ…? ಆ ದಿನ ಚಿನ್ನದ ಬೆಲೆ ಇಷ್ಟಿರಲಿದೆ.

ಈ ಬಾರಿ ಅಕ್ಷಯ ತೃತೀಯದಂತೂ ಚಿನ್ನದ ಬೆಲೆ ಎಷ್ಟಿರಲಿದೆ...? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Akshaya Tritiya Gold Price: ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟು ಏರಿಕೆಯಾಗುತ್ತಿದೆ ಎನ್ನುವುದರ ಅಂದಾಜು ಎಲ್ಲರಿಗು ಇದೆ. 2024 ರ ಮಾರ್ಚ್ ನಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡು ಬರುತ್ತಿದೆ. ಇನ್ನು ಮಾರ್ಚ್ ನಿಂದ ಮದುವೆಯ ಸೀಸನ್ ಆರಂಭವಾದ ಕಾರಣ ಚಿನ್ನದ ಬೇಡಿಕೆ ಬಾರಿ ಹೆಚ್ಚಾಗಿತ್ತು.

ಈ ಕಾರಣಕ್ಕೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕೂಡ ಮುಗಿಲು ಮುಟ್ಟಿದೆ ಎನ್ನಬಹುದು. ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಚಿನ್ನದ ಏರಿಕೆಯ ಬಗ್ಗೆ ತಿಳಿದರೆ ಒಂದು ಕ್ಷಣ ಅಚ್ಚರಿ ಆಗುವುದಂತೂ ನಿಜ. ಜನರು ಚಿನ್ನದ ಖರೀದಿಗೆ ಹಿಂದೇಟು ಹಾಕುವಂತಹ ಪರಿಸ್ಥಿತಿ ಎದುರಾಗಿದೆ ಎನ್ನಬಹುದು.

Akshaya Tritiya Gold Price
Image Credit: Muliya

ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸುವ ಬಯಕೆ ಇದೆಯಾ…?
ಇನ್ನು ಜನರು ಚಿನ್ನದ ಖರೀದಿಗಾಗಿ ಚಿನ್ನದ ಬೆಲೆಯ ಇಳಿಕೆಯ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಪ್ರಸ್ತುತ ಹತ್ತು ಗ್ರಾಂ ಚಿನ್ನದ ಬೆಲೆ 6585 ರೂ. ತಲುಪಿದೆ. ಹಾಗೆಯೆ 24 ಕ್ಯಾರೆಟ್ ಚಿನ್ನದ ಬೆಲೆ 7183 ರೂ. ತಲುಪಿದೆ. ಇನ್ನು ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಚಿನ್ನದ ಏರಿಳಿತಕ್ಕೆ ಹೋಲಿಸಿದರೆ ಮೇ ತಿಂಗಳಿನಲ್ಲಿ ಚಿನ್ನದ ಬೆಲೆಯಲ್ಲಿಒಂದಿಷ್ಟು ಇಳಿಕೆ ಕಂಡುಬಂದಿದೆಯೆನ್ನಬಹುದು. ಮೇ ತಿಂಗಳಿನಲ್ಲಿ ಚಿನ್ನದ ಬೆಲೆ ಇಳಿಕೆಯಾಗಲು ಕಾರಣ Akshaya Tritiya ಎನ್ನಬಹುದು. ಹೌದು, ನೀವು ಈ ಅಕ್ಷಯ ತೃತೀಯದಲ್ಲಿ ಸ್ವಲ್ಪ ಕಡಿಮೆ ಬೆಲೆಯಲ್ಲಿ ಚಿನ್ನವನ್ನು ಖರೀದಿಸಬಹುದಾಗಿದೆ.

“ಅಕ್ಷಯ” ಎಂದರೆ ಶಾಶ್ವತ. ಈ ಶುಭ ದಿನದಂದು ಚಿನ್ನ, ಬೆಳ್ಳಿಯಂತಹ ಲೋಹಗಳನ್ನು ಮತ್ತು ಇತರ ದುಬಾರಿ ವಸ್ತುಗಳನ್ನು ಖರೀದಿಸುವುದು ವಾಡಿಕೆ. ಈ ದಿನ ಖರೀದಿಸಿದ ವಸ್ತು ಶಾಶ್ವತ ಸಂಪತ್ತನ್ನು ತರುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಹೀಗಾಗಿ ಅಕ್ಷಯ ತೃತೀಯದಲ್ಲಿ ಕೆಲವರು ಚಿನ್ನ, ಬೆಳ್ಳಿ ಖರೀದಿಸಿದರೆ ಇನ್ನು ಕೆಲವರು ಮನೆ, ಜಮೀನು, ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಖರೀದಿಸುತ್ತಾರೆ. ಆದರೆ ಈ ಬಾರಿ ಅಕ್ಷಯ ತೃತೀಯದಂತೂ ಚಿನ್ನದ ಬೆಲೆ ಎಷ್ಟಿರಲಿದೆ…? ಎನ್ನುವುದು ಜನಸಾಮಾನ್ಯರ ಯೋಜನೆಯಾಗಿದೆ. ಅಕ್ಷಯ ತೃತೀಯ ಚಿನ್ನದ ಬೆಲೆಯ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Gold Price Update
Image Credit: Timesnownews

ಅಕ್ಷಯ ತೃತೀಯದ ದಿನ ಚಿನ್ನದ ಬೆಲೆ ಇಷ್ಟಿರಲಿದೆ
ಈ ವರ್ಷ ಅಕ್ಷಯ ತೃತೀಯವನ್ನು ಮೇ 10 ರಂದು ಆಚರಿಸಲಾಗುತ್ತದೆ. ಶುಭ ಮುಹೂರ್ತವು ಮೇ 11 ರಂದು ಬೆಳಿಗ್ಗೆ 4:17 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 2:50 ಕ್ಕೆ ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ ನೀವು ಚಿನ್ನ, ಬೆಳ್ಳಿ, ಮನೆ, ಭೂಮಿ, ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ಸ್ ಖರೀದಿಸಬಹುದು. ಈ ದಿನ ಚಿನ್ನ ಮತ್ತು ಬೆಳ್ಳಿ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತದೆ. ಹೀಗಾಗಿ ಚಿನ್ನದ ಅಂಗಡಿಗಳು ಗ್ರಾಹಕರನ್ನು ಸೆಳೆಯಲು ಮುಂದಾಗಿವೆ. ಅದರಲ್ಲೂ ಚಿನ್ನವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಸಾಧ್ಯತೆ ಇದೆ. ಇನ್ನು ಚಿನ್ನದ ಬೆಲೆಯಲ್ಲಿ ಮೇ ತಿಂಗಳಿನಲ್ಲಿ ಎರಡು ಬಾರಿ ಇಳಿಕೆ ಕಂಡಿದ್ದು, ನೀವು ಅಕ್ಷಯ ತೃತೀಯದ ದಿನ ಕಡಿಮೆ ಬೆಲೆಯಲ್ಲಿ ಚಿನ್ನವನ್ನು ಖರೀದಿಸಬಹುದಾಗಿದೆ.

Join Nadunudi News WhatsApp Group

Akshaya Tritiya 2024
Image Credit: Caratlane

Join Nadunudi News WhatsApp Group