Alia Bhatt has decided to name her children: ತಮ್ಮ ಮಕ್ಕಳಿಗೆ ಇಡುವ ಹೆಸರು ನಿರ್ಧರಿಸಿದ ಆಲಿಯಾ ಭಟ್.

Alia Bhatt has decided to name her children: ಬಾಲಿವುಡ್ ಸ್ಟಾರ್(Bollywood star) ಜೋಡಿಗಳಾದ ಆಲಿಯಾ ಭಟ್ ಮತ್ತು ರಣ್‌ಬೀರ್ ಕಪೂರ್(Ranbir kapoor) ಇಬ್ಬರೂ ಐದು ವರ್ಷಗಳಿಂದ ಡೇಟಿಂಗ್(Dating) ನಡೆಸುತ್ತಿದ್ದು ಆ ಬಳಿಕವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹೌದು ಇದೇ ವರ್ಷ ಏಪ್ರಿಲ್ 14ರಂದು ಈ ಜೋಡಿ ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿದ್ದು ಕೇವಲ ಆತ್ಮೀಯರು ಹಾಗೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಈ ಜೋಡಿ ವಿವಾಹವಾಗಿತ್ತು.

ಮದುವೆಯಾದ ಎರಡೇ ತಿಂಗಳಿಗೆ ಈ ಜೋಡಿ ತಮ್ಮ ಅಭಿಮಾನಿಗಳುಗೆ ಗುಡ್‌ ನ್ಯೂಸ್(Goodnews) ನೀಡಿದ್ದು ಸ್ವತ: ಆಲಿಯಾ ಭಟ್ ಈ ಖುಷಿ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ(Social media)ಹಂಚಿಕೊಂಡಿದ್ದರು.ಬಾಲಿವುಡ್ ಮೂಲಗಳ ಪ್ರಕಾರವಾಗಿ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಪೋಷಕರಾಗಿದ್ದು ನೆವೆಂಬರ್ 06 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ.

Alia Bhatt has decided to name her children.
Image Source: India Today

ಈ ವರ್ಷ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಇಬ್ಬರಿಗೂ ಸಕ್ಸಸ್ ಸಿಕ್ಕಿದ್ದು ಆ ಖುಷಿಯೊಂದಿಗೆ ಮತ್ತೊಂದು ಖುಷಿ ಸೇರ್ಪಡೆಯಾಗಿದೆ.ಹೌದು ಭಾನುವಾರ ಕಪೂರ್ ಮತ್ತು ಭಟ್ ಕುಟುಂಬಗಳಿಗೆ ಸಂಭ್ರಮದ ದಿನವಾಗಿದ್ದು ನಟರಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.

ಇನ್ನು ಆಲಿಯಾ ಈ ವಿಷಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲರ ಜೊತೆ ಶೇರ್‌ ಮಾಡಿದ್ದು ಹೇಳಿಕೆಯಲ್ಲಿ ಯಾವುದೇ ಹೆಸರನ್ನು ಉಲ್ಲೇಖಿಸಲಾಗಿಲ್ಲವಾದ್ದರಿಂದ ದಂಪತಿಗಳು ತಮ್ಮ ಪುಟ್ಟ ರಾಜಕುಮಾರಿಗಾಗಿ ಹೆಸರು ಆರಿಸಿಕೊಂಡಿದ್ದಾರೆಯೇ ಎಂಬುದು ಇನ್ನೂ ತಿಳಿದಿಲ್ಲ.

ಹೌದು ದಂಪತಿಗಳು ತಮ್ಮ ಪುಟ್ಟ ಮಗುವಿನ ಹೆಸರನ್ನು ಯಾವಾಗ ಅಧಿಕೃತವಾಗಿ ಘೋಷಿಸುತ್ತಾರೆ ಎಂಬುದು ತಿಳಿದಿಲ್ಲ. ಆದರೆ ಈ ಹಿಂದೆ ಆಲಿಯಾ ಭಟ್ ಒಮ್ಮೆ ರಿಯಾಲಿಟಿ ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಅಲ್ಲಿ ಅವರು ತಮ್ಮ ಮಗಳಿಗೆ ಇಡಲು ಬಯಸುವ ಹೆಸರನ್ನು ಚರ್ಚಿಸಿದರು. ಹಾಗಾದರೆ ಆಲಿಯಾ ಭಟ್ ಅವರ ಮಗಳ ಹೆಸರೇನು ಗೊತ್ತಾ?

Join Nadunudi News WhatsApp Group

Alia Bhatt has decided to name her children.
Image Source: India Today

ಆ ಕಾರ್ಯಕ್ರಮದಲ್ಲಿ ಒಬ್ಬ ಚಿಕ್ಕ ಹುಡುಗ ಆಲಿಯಾರ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದು ಆದರೆ ಅದನ್ನು ಕೇಳಿದ ಆಲಿಯಾ ಭಟ್ ತುಂಬಾ ಆಶ್ಚರ್ಯಚಕಿತರಾದರು ಹಾಗೂ ಅವರು ತಮ್ಮ ಮಗುವಿಗೆ ಅದರ ಹೆಸರನ್ನು ಇಡಲು ಬಯಸುತ್ತಾರೆ ಎಂದು ತಮಾಷೆಯಾಗಿ ಒಪ್ಪಿಕೊಂಡಿದ್ದು ನೆಟ್‌ನಲ್ಲಿ ಲಭ್ಯವಿರುವ ಕ್ಲಿಪ್‌ನಲ್ಲಿ ಹುಡುಗ ಆಲಿಯಾರ ಹೆಸರನ್ನು ಅಲ್ಮಾ ಎಂದು ಉಚ್ಚರಿಸುತ್ತಿರುವುದನ್ನು ತಾವು ಕಾಣಬಹುದು.

ಹೌದು ಮಗುವಿನ ಮುಗ್ಧ ತಪ್ಪನ್ನು ನೋಡಿ ನಗುತ್ತಾ ಅಲ್ಮಾ ಎಂಬುದು ಸುಂದರವಾದ ಹೆಸರು. ನಾನು ನನ್ನ ಮಗಳಿಗೆ ಅಲ್ಮಾ ಎಂದು ಹೆಸರಿಸುತ್ತೇನೆ ಎಂದು ಆಲಿಯಾ ಹೇಳುತ್ತಾರೆ. ಹೌದು ಭಾನುವಾರ ಮುಂಜಾನೆ ಆಲಿಯಾ ಭಟ್ ಅವರನ್ನು ಮುಂಬೈನ ಎಚ್‌ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ದಂಪತಿಗಳು ತಮ್ಮ ಕಾರನ್ನು ಆಸ್ಪತ್ರೆಯಿಂದ ಹೊರಹೋಗುವ ಫೋಟೋ ತೆಗೆದ ಕೆಲವೇ ಗಂಟೆಗಳ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಹೆಣ್ಣು ಮಗುವಿನ ಜನನದ ಬಗ್ಗೆ ಹೇಳಿಕೆಯನ್ನು ನೀಡಿದರು.

Alia Bhatt has decided to name her children.
Image Source: Hindusthan Times

ಇನ್ನು ರಣ್‌ಬೀರ್ ಹಾಗೂ ಆಲಿಯಾ ಭಟ್ ಇಬ್ಬರೂ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದು ತಿಂಗಳುಗಳಿಂದಲೇ ಅದಕ್ಕೆ ಬೇಕಾಗಿರೋ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆಲಿಯಾ ಮಗುವನ್ನು ಹೇಗೆ ಬೆಳೆಸಬೇಕು ಅನ್ನೋ ಬಗ್ಗೆ ಪುಸ್ತಕವನ್ನು ಓದುವಂತೆ ರಣ್‌ಬೀರ್ ಮೇಲೆ ಒತ್ತಡ ಹೇರುತ್ತಿದ್ದರಂತೆ. ಆದರೆ ಪುಸ್ತಕಗಳು ನಮಗೆ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ಕಲಿಸುವುದಿಲ್ಲ ಎಂಬುದು ರಣ್‌ಬೀರ್ ವಾದವಾಗಿತ್ತಂತೆ.

ಈ ಮಾತನ್ನು ಸ್ವತ: ರಣ್‌ಬೀರ್ ಕಫೂರ್ ಬಾಲಿವುಡ್‌ ವೆಬ್‌ ಸೈಟ್ ಒಂದಕ್ಕೆ ಹೇಳಿದ್ದರು. ಇನ್ನು ಆಲಿಯಾ ಭಟ್ ಮತ್ತು ರಣ್‌ಬೀರ್ ಕಪೂರ್ ಇಬ್ಬರಿಗೂ ಈ ವರ್ಷ ಸಿಕ್ಕಿದ್ದು ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದ ಖುಷಿಯಲ್ಲಿರೋರಿಗೆ ಮತ್ತೊಂದು ಖುಷಿ ಸಿಕ್ಕಿದೆ. ಆಲಿಯಾ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳುವ ಮುನ್ನ ಹಾಲಿವುಡ್‌ ಸಿನಿಮಾದಲ್ಲಿ ನಟಿಸಿದ್ದು ವಂಡರ್‌ವುಮನ್ ಖ್ಯಾತಿಯ ಗಾಲ್ ಗಾಡೋಟ್ ನಟಿಸಿರೊ ಹಾರ್ಟ್ ಆಫ್ ಸ್ಟೋನ್ ಸಿನಿಮಾದಲ್ಲಿ ನಟಿಸಿ ಬಂದಿದ್ದಾರೆ. ರಣ್‌ಬೀರ್ ಕಪೂರ್ ಅನಿಮಲ್ ಹಾಗೂ ಲವ್ ರಂಜನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

 

Alia Bhatt has decided to name her children.
Image Source: India Today

Join Nadunudi News WhatsApp Group