Allah Ghazanfar: KKR ತಂಡವನ್ನ ಸೇರಿಕೊಂಡ 16 ವರ್ಷದ ಯುವ ಆಟಗಾರ, ಈತನ ಆಟ ನೋಡುವುದೇ ಸುಂದರ.

KKR ತಂಡವನ್ನ ಸೇರಿಕೊಂಡ 16 ವರ್ಷದ ಯುವ ಆಟಗಾರ, ಇನ್ನಷ್ಟು ಬಲಿಷ್ಠವಾದ KKR

Allah Mohammad Ghazanfar In IPL 2024:ಮಾರ್ಚ್ 30 ರಂದು Kolkata Knight Riders ಹಾಗೂ Royal Challengers Bangalore ತಂಡದ ನಡುವೆ ಪಂದ್ಯ ನಡೆಯಲಿದೆ. ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ KKR ಹಾಗೂ RCB ನಡುವೆ ಹಣಾಹಣಿ ನಡೆಯಲಿದೆ. ಈ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ.

ಸದ್ಯ ಈ ಎರಡು ತಂಡದ ನಡುವೆ ಪಂದ್ಯ ನಡೆಯುವ ಮುನ್ನವೇ ಬಿಗ್ ಅಪ್ಡೇಟ್ ಹೊರಬಿದ್ದಿದೆ. KKR ತಂಡದಲ್ಲಿ ಈ ಸ್ಟಾರ್ ಆಟಗಾರನ ಬದಲಾಗಿ 16 ವರ್ಷದ ಯುವಕ ಕಣಕ್ಕಿಳಿಯಲಿದ್ದಾನೆ ಎನ್ನುವ ಬಗ್ಗೆ ವರದಿಯಾಗಿದೆ. ಅಷ್ಟಕ್ಕೂ, ನಾಳೆ ನಡೆಯುವ ಪಂದ್ಯದಲ್ಲಿ KKR ತಂಡಕ್ಕೆ ಸೇರುವ ಆಟಗಾರ ಯಾರು ಎನ್ನುವ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

Allah Mohammad Ghazanfar
Image Credit: The Hindu

KKR ತಂಡವನ್ನ ಸೇರಿಕೊಂಡ 16 ವರ್ಷದ ಯುವ ಆಟಗಾರ
ಅಫ್ಘಾನಿಸ್ತಾನದ ಸ್ಟಾರ್ ಆಟಗಾರ Mujeeb ur Rahman ಈ ಬಾರಿಯ ಐಪಿಎಲ್‌ ನಿಂದ ಹೊರಗುಳಿದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಮುಜೀಬ್ ಉರ್ ರೆಹಮಾನ್ ಈ ಬಾರಿಯ ಐಪಿಎಲ್ ಆಡಲು ಸಾಧ್ಯವಾಗಿಲ್ಲ. ಹೀಗಾಗಿ, ಮುಜೀಬ್ ಉರ್ ರೆಹಮಾನ್ ಬದಲಿಗೆ 16 ವರ್ಷದ ಆಟಗಾರನನ್ನು ಕೆಕೆಆರ್ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಮುಜೀಬ್ ಉರ್ ರೆಹಮಾನ್ ಬದಲಿಗೆ 16 ವರ್ಷದ Allah Mohammad Ghazanfar ಅವರನ್ನು ಆಯ್ಕೆ ಮಾಡಿದೆ. ಅಲ್ಲಾ Allah Mohammad Ghazanfar ಕೂಡ ಅಫ್ಘಾನಿಸ್ತಾನ ಕ್ರಿಕೆಟಿಗನಾಗಿದ್ದು, ಇದುವರೆಗೆ 2 ಏಕದಿನ ಪಂದ್ಯಗಳಲ್ಲಿ ಅಫ್ಘಾನಿಸ್ತಾನವನ್ನು ಪ್ರತಿನಿಧಿಸಿದ್ದಾರೆ.

Allah Mohammad Ghazanfar IPL Team
Image Credit: Revsportz

Allah Mohammad Ghazanfar
ಈ ಯುವ ಆಟಗಾರ ODI ಹೊರತಾಗಿ 3 T20 ಮತ್ತು 6 List A ಪಂದ್ಯಗಳನ್ನೂ ಆಡಿದ್ದಾರೆ. ಅವರು ಕ್ರಮವಾಗಿ 5 ಮತ್ತು 4 ವಿಕೆಟ್ ಪಡೆದಿದ್ದಾರೆ. ಇದೀಗ ಕೆಕೆಆರ್ ತಂಡಕ್ಕೆ ಸೇರ್ಪಡೆಗೊಂಡಿರುವ Allah Mohammad Ghazanfar ಅವರನ್ನು ಕೆಕೆಆರ್ ಮೂಲ ಬೆಲೆ 20 ಲಕ್ಷಕ್ಕೆ ಖರೀದಿಸಿದೆ.

Join Nadunudi News WhatsApp Group

ಟೆನಿಸ್ ಬಾಲ್ ಕ್ರಿಕೆಟ್ ಮೂಲಕ ವೃತ್ತಿಜೀವನ ಆರಂಭಿಸಿರುವ ಅಲ್ಲಾ ಮೊಹಮ್ಮದ್ Ghazanfar ಅವರು ಈ ಬಾರಿ IPL ನಲ್ಲಿ ಆಡುವ ಅವಕಾಶ ಸಿಕ್ಕರೆ ಈ ಋತುವಿನ ಐಪಿಎಲ್‌ ನಲ್ಲಿ ಆಡುವ ಎರಡನೇ ಅತ್ಯಂತ ಕಿರಿಯ ಆಟಗಾರನಾಗಲಿದ್ದಾರೆ.

Allah Mohammad Ghazanfar In KKR
Image Credit: Crictamil

Join Nadunudi News WhatsApp Group