Amazfit Cheetah: ಕಡಿಮೆ ಬೆಲೆ ಮತ್ತು 14 ದಿನ ಬ್ಯಾಟರಿ ಸಾಮರ್ಥ್ಯ, ಚೀತಾ ವಾಚ್ ಬೇಡಿಕೆ ಕಳೆದುಕೊಂಡ ಆಪಲ್ ವಾಚ್.

14 ದಿನಗಳ ಬ್ಯಾಟರಿ ಸಾಮರ್ಥ್ಯದೊಂದಿಗೆ ಬಿಡುಗಡೆಗೊಂಡಿದೆ Amazfit Cheetah ಸ್ಮಾರ್ಟ್ ವಾಚ್

Amazfit Cheetah Round And Square Smartwatch: ಇದೀಗ ಮಾರುಕಟ್ಟೆಯಲ್ಲಿ Smartphone ಗಳಷ್ಟೇ Smartwatch ಕೂಡ ಬೇಡಿಕೆ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ ವಿವಿಧ ಸ್ಮಾರ್ಟ್ ವಾಚ್ ತಯಾರಾಕ ಕಂಪನಿಗಳು ನೂತನ ವಿನ್ಯಾಸದ ಸುಧಾರಿತ ವೈಶಿಷ್ಟ್ಯಗಳಿರುವ ವಿವಿಧ Smartwatch ಗಳನ್ನೂ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಸದ್ಯ Smartwatch Trend ನಲ್ಲಿದ್ದು ಎಲ್ಲರ ಕೈಯಲ್ಲೂ ಸ್ಮಾರ್ಟ್ ವಾಚ್ ರಾರಾಜಿಸುತ್ತಿದೆ. ಇದೀಗ Amazfit ಕಂಪನಿ ಮಾರುಕಟ್ಟೆಯಲ್ಲಿ ತನ್ನ ಹೊಸ ವಿನ್ಯಾಸದ Smartwatch ಅನ್ನು ಪರಿಚಯಿಸಿದೆ. Amazfit ನ ಸ್ಮಾರ್ಟ್ ವಾಚ್ ಗ್ರಾಹಕರಿಗೆ ಅತಿ ಕಡಿಮೆ ಬೆಲೆಗೆ ಲಭ್ಯವಾಗಲಿದೆ.

Amazfit Cheetah
Image Source: Gadgets 360

Amazfit Cheetah Round ಮತ್ತು Amazfit Cheetah Square
Amazfit ಇದೀಗ ಮಾರುಕಟ್ಟೆಯಲ್ಲಿ ತನ್ನ Amazfit Cheetah Round ಮತ್ತು Amazfit Cheetah Square ವಾಚ್ ಗಳನ್ನೂ ಪರಿಚಯಿಸಿದೆ. ಈ ಸ್ಮಾರ್ಟ್ ವಾಚ್ ಗಳು AI ನಿಂದ ನಾಡಿಸಲ್ಪಡುವ Zeep ಕೋಚ್ ನೊಂದಿಗೆ ಬರಲಿದೆ. ಈ ಸ್ಮಾರ್ಟ್ ವಾಚ್ ವಿಶೇಷವಾಗಿ ಓಟಗಾರರರಿಗೆ ತರಬೇತಿ ಮತ್ತು ರನ್ನಿಂಗ್ ಗೋಲ್ ಗಳನ್ನೂ ಸೆಟ್ ಮಾಡಲು ಸಹಾಯವಾಗಲಿದೆ.

Amazfit Cheetah ಸ್ಮಾರ್ಟ್ ವಾಚ್ ನ ಫೀಚರ್
Amazfit Cheetah ಸರಣಿಯ ಸ್ಮಾರ್ಟ್ ವಾಚು ಗಳು ಫೈಬರ್-ಬಲವರ್ಧಿತ ಪಾಲಿಮರ್ ಮಧ್ಯ ಫ್ರೇಮ್ನೊಂದಿಗೆ ಹಗುರವಾದ ವಿನ್ಯಾಸವನ್ನು ಹೊಂದಿದೆ. Amazfit ಚೀತಾ ರೌಂಡ್ ವಾಚ್ 1.39 ಇಂಚಿನ HD AMOLED ಡಿಸ್ಪ್ಲೇ ಹೊಂದಿದ್ದು, ಈ ಡಿಸ್ಪ್ಲೇ 454×454 ಪಿಕ್ಸೆಲ್ಸ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. Amazfit Cheetah 326 PPI ನ ಪಿಕ್ಸೆಲ್ ಸಾಂದ್ರತೆಯನ್ನು ಸಹ ಹೊಂದಿದೆ. ಇನ್ನು Amazfit Cheetah Square ಸ್ಮಾರ್ಟ್ ವಾಚ್ 1.75 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಪ್ರದರ್ಶನವು 341 PPI ನ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ.

Amazfit Cheetah
Image Source: Gadgets360

Amazfit Cheetah Smartwatch Price
Amazfit Cheetah ಸರಣಿಯ ಸ್ಮಾರ್ಟ್ ವಾಚು ಗಳು Running, walking, cycling, swimming ಚಟುವಟಿಕೆಗಳನ್ನು ಸುಲಭವಾಗಿ ಗುರುತಿಸಲಿದೆ. ಇನ್ನು ಈ Amazfit Cheetah ಸರಣಿಯ ಸ್ಮಾರ್ಟ್ ವಾಚು ಗಳು ಒಂದೇ ಚಾರ್ಜ್ ನಲ್ಲಿ 14 ದಿನಗಳ ಬಾಳಿಕೆಯನ್ನು ನೀಡಲಿದೆ. ನೀವು ಒಮ್ಮೆ ಚಾರ್ಜ್ ಮಾಡಿದರೆ 14 ದಿನಗಳು ಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ. ಇನ್ನು ಕಂಪನಿಯ ಎರಡು ಸರಣಿಯ ಸ್ಮಾರ್ಟ್ ವಾಚ್ ಗಳು 20,999 ರೂ. ಗಳಲ್ಲಿ ಲಭ್ಯವಾಗಲಿದೆ. ಇನ್ನು September 24 ರಿಂದ ಕಂಪನಿಯ ಅಧಿಕೃತ ವೆಬ್ ಸೈಟ್ ನ ಮೂಲಕ ಖರೀದಿ ಮಾಡಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group