2000 Note Exchange: ಈಗ ಮನೆಯಲ್ಲಿಯೇ ಕುಳಿತುಕೊಂಡು ಬದಲಾಯಿಸಿ 2000 ರೂ ನೋಟ್, ಹೊಸ ಸೇವೆ ಆರಂಭ.

ನಿಮ್ಮ ಬಳಿ ಇರುವ 2000 ರೂ ಮುಖಬೆಲೆಯ ನೋಟುಗಳನ್ನು ಮನೆಯಲ್ಲಿಯೇ ಕುಳಿತು ಬದಲಾಯಿಸುವ ಬಗ್ಗೆ ಮಾಹಿತಿ ತಿಳಿಯಿರಿ.

Amazon Pay Cash Load System: ಆರ್ ಬಿಐ ಇತ್ತೀಚಿಗೆ 2000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದೆ. ಇನ್ನು 2000 ರೂ. ನೋಟು ವಿನಿಮಯ ಅಥವಾ ಠೇವಣಿ ಪ್ರಕ್ರಿಯೆಗೆ ಬ್ಯಾಂಕ್ ಸೆಪ್ಟೆಂಬರ್ ವರೆಗೆ ಸಮಯವನ್ನು ನೀಡಿದೆ.

ಸೆಪ್ಟೆಂಬರ್ 30 ರೊಳಗೆ ನಿಮ್ಮ ಬಳಿ ಇರುವ 2000 ಮುಖಬೆಲೆಯ ನೋಟುಗಳನ್ನು ವಿನಿಮಯ ಅಥವಾ ಠೇವಣಿ ಮಾಡಿಕೊಳ್ಳಬಹುದಾಗಿದೆ. ಇದೀಗ ನಿಮ್ಮ ಬಳಿ 2000 ರೂ. ನೋಟುಗಳಿದ್ದು ಇನ್ನು ಬದಲಾವಣೆ ಆಗಿಲ್ಲದಿದ್ದರೆ ನೀವು ಸುಲಭವಾಗಿ ಹಣವನ್ನು ಬದಲಾಯಿಸಿಕೊಳ್ಳಬಹುದು.

2000 notes exchange procedure
Image Credit: Tamil.Samayam

2000 ರೂ. ನೋಟು ಬದಲಾವಣೆಗೆ ಹೊಸ ಸೌಲಭ್ಯ
ಇದೀಗ ಜನಸಾಮಾನ್ಯರು ನೋಟುಗಳನ್ನು ಸುಲಭವಾಗಿ ಬದಲಾಯಿಸಿಕೊಳ್ಳಲು ಇ ಕಾಮರ್ಸ್ ಹೊಸ ಸೌಲಭ್ಯವನ್ನು ನೀಡಲಿದೆ. ನೋಟು ಬದಲಾವಣೆಗಾಗಿ Amazon Pay Cash Load System ಅನ್ನು ಪರಿಚಯಿಸಿದೆ.

ಇದರ ಮೂಲಕ ನೀವು ಒಂದು ತಿಂಗಳಲ್ಲಿ 50000 ರೂ. ವರೆಗೆ ಬದಲಾಯಿಸಿಕೊಳ್ಳಬಹುದು. ಅಮೆಜಾನ್ ವಿನಿಮಯ ಮಾಡಿಕೊಂಡ ನೋಟಿಗೆ ನಿಮ್ಮ Amazon Pay Wallet ನಲ್ಲಿ ಆನ್ಲೈನ್ ನಲ್ಲಿ ಹಣವನ್ನು ಪಡೆಯಬಹುದು. ಅಮೆಜಾನ್ ಪೇ ವಾಲೆಟ್ ನಲ್ಲಿ ಹಣ ವಿನಿಯಮ ಮಾಡುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

2000 ನೋಟುಗಳನ್ನು ಬದಲಾಯಿಸುವ ವಿಧಾನ
1. ನೀವು 2000 ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅಮೆಜಾನ್ ನಿಂದ ನಗದು ಲೋಡ್ ಗೆ ಅರ್ಹವಾದ ಕೆಲವು ಸರಕುಗಳನ್ನು ಆರ್ಡರ್ ಮಾಡಬೇಕಾಗುತ್ತದೆ.

Join Nadunudi News WhatsApp Group

2000 notes exchange procedure
Image Credit: pragnews

2.ಚೆಕ್ ಔಟ್ ಪ್ರಕ್ರಿಯೆಯಲ್ಲಿ ನಗದು ವಿತರಣೆ ಆಯ್ಕೆಯನ್ನು ಆರಿಸಬೇಕು.

3.ಆರ್ಡರ್ ಮಾಡಿದ ಬಳಿಕ ಡೆಲಿವರಿ ಅಜೇಂಟ್ ನಿಮ್ಮ ಮನೆಯ ಬಳಿಗೆ ಬಂದಾಗ Amazon Pay ಬ್ಯಾಲೆನ್ಸ್ ನಲ್ಲಿ ಹಣವನ್ನು ಠೇವಣಿ ಮಾಡಬಹುದು.

4.ಹಣವನ್ನು ಏಜೆನ್ಟ್ ನೀಡಿದಾಗ ಡೆಲಿವರಿ ಮಾಡುವವರು ಇ ಹಣವನ್ನು ಪರಿಶೀಲಿಸುತ್ತಾರೆ ಮತ್ತು ಸರಿಯಾಗಿ ಕಂಡುಬಂದರೆ ಅವರು ನಿಮ್ಮ Amazon Pay ವ್ಯಾಲೆಟ್ ಗೆ ಹಣವನ್ನು ವರ್ಗಾಯಿಸುತ್ತಾರೆ.

Join Nadunudi News WhatsApp Group