Amit Shah: ಚುನಾವಣಾ ಫಲಿತಾಂಶಕ್ಕೂ ಮೊದಲೇ ಇನ್ನೊಂದು ಘೋಷಣೆ ಮಾಡಿದ ಅಮಿತ್ ಶಾ, CCA ಬಿಗ್ ಅಪ್ಡೇಟ್

ಚುನಾವಣಾ ಫಲಿತಾಂಶಕ್ಕೂ ಮೊದಲೇ ಇನ್ನೊಂದು ಘೋಷಣೆ ಮಾಡಿದ ಅಮಿತ್ ಶಾ

Amit Shah Latest Update: ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ಬಾರಿ ಕೇಂದ್ರದಲ್ಲಿ ಯಾವ ಪಕ್ಷ ಅಧಿಕ್ರವನ್ನು ಪಡೆಯುತ್ತದೆ ಎನ್ನುವುದು ಸದ್ಯದ ಕುತೂಹಲವಾಗಿದೆ. ಈಗಾಗಲೇ ಸಾಕಷ್ಟು ಜನರು ಲೋಕಸಭಾ ಚುನಾವಣೆಯಲ್ಲಿ ತಮ್ಮ ನೆಚ್ಚಿನ ನಾಯಕನಿಗೆ ಮತ ಚಲಾಯಿಸಿದ್ದಾರೆ.

ಮೋದಿ ಸರ್ಕಾರ ಇನ್ನು 5 ವರ್ಷ ಅಧಿಕಾರಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದು, ಕೇಂದ್ರ ಮತ್ತು ರಾಜ್ಯ ಎರಡಲ್ಲೂ ತನ್ನದೇ ಅಧಿಕಾರವನ್ನು ಪಡೆಯಲು ಕಾಂಗ್ರೆಸ್ ಸರ್ಕಾರ ಕೂಡ ಪಣ ತೊಟ್ಟಿದೆ. ಲೋಕಸಭಾ ಚುನಾವಣೆಯ ಕಾರಣ ಅನೇಕ ಗ್ಯಾರಂಟಿ ಘೋಷಣೆಗಳು ಕೂಡ ಜಾರಿಯಾಗಿದ್ದು, ಸದ್ಯ ಅಮಿತ್ ಶಾ ಬಹುದೊಡ್ಡ ಘೋಷಣೆಯನ್ನು ಹೊರಡಿಸಿದ್ದಾರೆ.

Amit Shah Latest Update
Image Credit: NDTV

ಚುನಾವಣಾ ಫಲಿತಾಂಶಕ್ಕೂ ಮೊದಲೇ ಇನ್ನೊಂದು ಘೋಷಣೆ ಮಾಡಿದ ಅಮಿತ್ ಶಾ
ದೇಶದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಯ ಕೊನೆಯ ಹಂತದ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ಅಡಿಯಲ್ಲಿ ಮೊದಲ ಪೌರತ್ವವನ್ನು ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ. CAA ಅಡಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ನಿಯಮಾನುಸಾರ ಪರಿಶೀಲನೆ ನಡೆಯುತ್ತಿದೆ. ಲೋಕಸಭೆ ಚುನಾವಣೆಯ ಕೊನೆಯ ಹಂತದ ಮೊದಲು ಪೌರತ್ವ ನೀಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ನಿರೀಕ್ಷೆ ಮಾಡಿದ್ದೇನೆ ಎಂದಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಾರ್ಚ್‌ ನಲ್ಲಿ CAA ಅನ್ನು ಜಾರಿಗೊಳಿಸಿತು. ಇದು ಡಿಸೆಂಬರ್ 31, 2014 ಕ್ಕಿಂತ ಮೊದಲು ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಡಿಸೆಂಬರ್ 2019 ರಲ್ಲಿ ಸಂಸತ್ತು ಕಾನೂನನ್ನು ಅಂಗೀಕರಿಸಿದ ನಾಲ್ಕು ವರ್ಷಗಳ ನಂತರ ಮಹತ್ವದ ಬೆಳವಣಿಗೆಯಾಗಿದೆ.

Amit Shah Latest News
Image Credit: Business-standard

CCA ಬಿಗ್ ಅಪ್ಡೇಟ್
ಸಿಎಎ ಬಗ್ಗೆ ವಿರೋಧ ಪಕ್ಷಗಳು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸಿಕೊಂಡು ಬಂದಿವೆ. ಕಾಯ್ದೆಯಲ್ಲಿರುವ ಅಧಿಸೂಚಿತ ನಿಯಮಗಳು ಅಸಂವಿಧಾನಿಕ, ತಾರತಮ್ಯ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಪೌರತ್ವದ ಜಾತ್ಯತೀತ ತತ್ವದ ಉಲ್ಲಂಘನೆಯಾಗಿದೆ ಎಂದು ಹೇಳಿವೆ. ವಿರೋಧ ಪಕ್ಷಗಳು ಮೊದಲಿನಿಂದಲೂ ಸಿಎಎ ಯನ್ನು ವಿರೋಧಿಸುತ್ತಿವೆ. ಕಾಯಿದೆಯಲ್ಲಿ ಒಳಗೊಂಡಿರುವ ಅಧಿಸೂಚಿತ ನಿಬಂಧನೆಗಳು ಅಸಂವಿಧಾನಿಕ, ತಾರತಮ್ಯ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಪೌರತ್ವದ ಜಾತ್ಯತೀತ ತತ್ವದ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ.

Join Nadunudi News WhatsApp Group

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 400 ಸ್ಥಾನಗಳನ್ನು ದಾಟಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮತ ಎಣಿಕೆ ದಿನದಂದು ಮಧ್ಯಾಹ್ನ 12.30ರೊಳಗೆ ಎನ್‌ಡಿಎ 400ರ ಗಡಿ ದಾಟಲಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಮೊದಲ ಎರಡು ಹಂತದಲ್ಲಿ ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. 400 ರ ಗುರಿ ದಾಟುವ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

Amit Shah Big Update On CAA
Image Credit: News 18

Join Nadunudi News WhatsApp Group