Amit Shah: ದೇಶದಲ್ಲಿ ರದ್ದಾಗಲಿದೆ ಮುಸ್ಲಿಂ ಮೀಸಲಾತಿ, ದೊಡ್ಡ ಯೋಜನೆಯ ಬಗ್ಗೆ ಅಮಿತ್ ಶಾಹ್ ಘೋಷಣೆ

Amit Shah New Announcement: ಸದ್ಯ ದೇಶದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. NDA ಹಾಗೂ ಇಂಡಿಯಾ ಮೈತ್ರಿಕೂಟಗಳು ಭರ್ಜರಿಯಾಗಿ ಮತಬೇಟೆ ನಡೆಸಿವೆ. ಮತದಾರರ ಓಲೈಕೆಗಾಗಿ ಪಕ್ಷಗಳು ವಿವಿಧ ಘೋಷಣೆಗಳನ್ನು ಘೋಷಿಸುತ್ತಿದ್ದಾರೆ. ಬಿಜೆಪಿ ಪಕ್ಷ ಇನ್ನು 5 ವರ್ಷ ತಮ್ಮ ಅಧಿಕಾರ ಮುಂದುವರೆಸಿಕೊಂಡು ಹೋಗಬೇಕೆನ್ನುವ ಉದ್ದೇಶದಿಂದ ಸಾಕಷ್ಟು ಸಿದ್ಧತೆ ಮಾಡುತ್ತಿದೆ.

ನಿನ್ನೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಕಾಂಗ್ರೆಸ್‌ ಸರ್ಕಾರ ಹಿಂದುಗಳು ಆಸ್ತಿಯನ್ನು ಮುಸ್ಲಿಮರಿಗೆ ಹಂಚಲು ಹೊಂಚು ಹಾಕಿದೆ ಎಂದು ಟೀಕಿಸಿದ್ದರು. ಸದ್ಯ ಚುನಾವಣಾ ಪ್ರಚಾರದ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಅದೇನೆಂದು ನಾವೀಗ ತಿಳಿದುಕೊಳ್ಳೋಣ.

Amit Shah New Announcement
Image Credit: Business Standard

ದೇಶದಲ್ಲಿ ರದ್ದಾಗಲಿದೆ ಮುಸ್ಲಿಂ ಮೀಸಲಾತಿ, ಅಮಿತ್ ಶಾ ಘೋಷಣೆ
ಚುನಾವಣಾ ಪ್ರಚಾರದ ವೇಳೆ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಮೂರನೇ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿರುವ 4% ಮೀಸಲಾತಿಯನ್ನು ರದ್ದು ಮಾಡುತ್ತೇವೆ, ಹಾಗೆ ಅದನ್ನು SC ST ಮತ್ತು OBC ಗೆ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group