Amitabh Bachchan: ಐಶ್ವರ್ಯ ರಾಯ್ ಮೇಲೆ ಕೋಪ ಮಾಡಿಕೊಂಡ ಅಮಿತಾಬ್ ಬಚ್ಚನ್, ಕುಟುಂಬದಲ್ಲಿ ಈ ಕಾರಣಕ್ಕೆ ಬಿರುಕು

ಸೋಶಿಯಲ್ ಮೀಡಿಯಾದಲ್ಲಿ ಐಶ್ವರ್ಯ ರೈ ಅವರನ್ನು ಅನ್ ಫಾಲೋ ಮಾಡಿದ ಅಮಿತಾಬ್ ಬಚ್ಚನ್

Amitabh Bachchan Unfollow Aishwarya Rai Bachchan: ಸದ್ಯ ಬಾಲಿವುಡ್ ನಲ್ಲಿ ಅಮಿತಾಬ್ ಬಚ್ಚನ್ (Amitabh Bachchan) ಅವರ ಕುಟುಂಬದ ಸುದ್ದಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಹಿಂದೆ ಅಮಿತಾಬ್ ಅವರ ಮಗ ಹಾಗೂ ಸೊಸೆ ಐಶ್ವರ್ಯ ರೈ ಬಚ್ಚನ್ (Aishwarya Rai Bachchan) ಅವರು ವೈವಾಹಿಕ ಜೀವನದಿಂದ ದೂರ ಆಗಲಿದ್ದಾರೆ ಎನ್ನುವ ಬಗ್ಗೆ ಸುದ್ದಿ ಹರಿದಾಡಿದ್ದು.

ಇದೀಗ ಆ ವಿಷಯ ಸತ್ಯವಾಗುತ್ತ ಎನ್ನುವ ಅನುಮಾನ ಹುಟ್ಟುವಂತೆ ಅಮಿತಾಬ್ ಮನೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ಬಿಗ್ ಬಿ ಮನೆಯಲ್ಲಿ ಬಿರುಕು ಉಂಟಾಗಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಕೇಳಿಬರುತ್ತಿದೆ.

Amitabh Bachchan Unfollow Aishwarya Rai Bachchan
Image Credit: malayalam.samayam

ಅಮಿತಾಬ್ ಕುಟುಂಬದಲ್ಲಿ ಬಿರುಕು
ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಡಿವೋರ್ಸ್ ವಿಚಾರ ಈಗಾಗಲೇ ಹೆಚ್ಚಿನ ಚರ್ಚೆಯನ್ನು ಹೂತುಹಾಕಿತ್ತು. ಈ ಇಬ್ಬರು ಸಾಕಷ್ಟು ಬಾರಿ ತಮ್ಮ ಡೈವೋರ್ಸ್ ಬಗ್ಗೆ ಸ್ಪಷ್ಟನೆ ನೀಡಿದ್ದರು. ಸದ್ಯ ಅಮಿತಾಬ್ ಬಚ್ಚನ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸೊಸೆ ಐಶ್ವರ್ಯ ರೈ ಅವರನ್ನು ಅನ್ ಫಾಲೋ ಮಾಡಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ. ಅಮಿತಾಬ್ ಬಚ್ಚನ್ ಐಶ್ವರ್ಯ ಅವರನ್ನು ಅನ್ ಫಾಲೋ ಮಾಡಲು ಅಭಿಷೇಕ್ ಹಾಗು ಐಶ್ವರ್ಯ ಅವರ ವಿಚ್ಛೇಧನದ ಸುದ್ದಿಯೇ ಕಾರಣ ಇರಬಹುದಾ..? ಎನ್ನುವುದು ಸದ್ಯ ಪ್ರಶ್ನೆಯಾಗಿದೆ.

ಸೊಸೆಯನ್ನು ಅನ್ ಫಾಲೋ ಮಾಡಿದ ಅಮಿತಾಬ್ ಬಚ್ಚನ್
ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವಿಚ್ಛೇಧನದ ವದಂತಿಯೂ ನಡುವೆ ಇದೀಗ ಹೊಸ ಸುದ್ದಿ ಹಬ್ಬಿಕೊಂಡಿದೆ. ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ವಿರಾಟ್ ಕೊಹ್ಲಿ, ಶ್ವೇತಾ ಬಚ್ಚನ್ ನವ್ಯಾ ನವೇಲಿ, ನಂದಾ ಸೇರಿದಂತೆ ಅಮಿತಾಬ್ ಬಚ್ಚನ್ ಇನ್‌ ಸ್ಟಾಗ್ರಾಮ್‌ ನಲ್ಲಿ ಒಟ್ಟು 74 ಜನರನ್ನು ಅನುಸರಿಸುತ್ತಿದ್ದಾರೆ.

Amitabh Bachchan And Aishwarya Rai Bachchan
Image Credit: Freepressjournal

ಇನ್ನು ಐಶ್ವರ್ಯ ರೈ ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರನ್ನು ಮಾತ್ರ ಅನುಸರಿಸುತ್ತಿದ್ದಾರೆ. ಸದ್ಯ ಅಮಿತಾಬ್ ಸೋಶಿಯಲ್ ಮೀಡಿಯಾದಲ್ಲಿ ಐಶ್ವರ್ಯ ರೈ ಅವರನ್ನು ಅನ್ ಫಾಲೋ ಮಾಡಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಇನ್ನೊಂದಡೆ ಅಮಿತಾಬ್ ಹಾಗೂ ಐಶ್ವರ್ಯ ರೈ ಇಬ್ಬರು ಒಬ್ಬರನೊಬ್ಬರು ಅನುಸರಿಸುತ್ತಿಲ್ಲ ಎಂದು ಕೂಡ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಎಲ್ಲ ಸುದ್ದಿಗಳು ಅಮಿತಾಬ್ ಕುಟುಂಬದಲ್ಲಿ ಬಿರುಕು ಮೂಡುತಿದೆ ಎನ್ನುವುದನ್ನು ಪರೋಕ್ಷವಾಗಿ ಹೇಳುತ್ತಿದೆ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group