Ampere EV: Ola ಸ್ಕೂಟರ್ ಗೆ ಪೈಪೋಟಿ ಕೊಡಲು ಇನ್ನೊಂದು Ev ಲಾಂಚ್, ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್

ಓಲಾ ಸ್ಕೂಟರ್ ಗೆ ಪೈಪೋಟಿ ಕೊಡಲು ಬಂತು ಇನ್ನೊಂದು ಸ್ಕೂಟರ್

Ampere Magnus EX Electric Scooter: ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಎಲೆಕ್ಟ್ರಿಕ್ ಸ್ಕೂಟರ್ ಸಂಖ್ಯೆ ಇದೀಗ ಮಾರುಕಟ್ಟೆಯಲ್ಲಿ ಹೆಚ್ಚಾಗಿವೆ. ಭಾರತೀಯ ಮಾರುಕಟ್ಟೆಗೆ ಹೊಸ ರೀತಿಯ Electric Scooter ಲಗ್ಗೆ ಇಡುತ್ತಿದೆ.

ಈಗಾಗಲೇ ಸಾಕಷ್ಟು ಪ್ರತಿಷ್ಠಿತ ಎಲೆಕ್ಟ್ರಿಕ್ ವಾಹನ ಕಂಪನಿಗಳು ವಿಭಿನ್ನ ರೀತಿಯ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಿವೆ. ಇದೀಗ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನ ಬಗ್ಗೆ ಮಾಹಿತಿ ತಿಳಿಯೋಣ.

Ampere Magnus EX Electric Scooter
Image Credit: buy2hands

Ola ಸ್ಕೂಟರ್ ಗೆ ಪೈಪೋಟಿ ಕೊಡಲು ಇನ್ನೊಂದು Ev ಲಾಂಚ್
ಇದೀಗ ಜನಪ್ರಿಯ Ampere ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯು ಇತ್ತೀಚಿಗೆ ಉನ್ನತ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ದೇಶಿಯ ಮಾರುಕಟ್ಟೆಯಲ್ಲಿ ಇದೀಗ ಆಂಪಿಯರ್ ಕಂಪನಿಗಳು ಶಕ್ತಿಯುತ ಬ್ಯಾಟರಿ ಪ್ಯಾಕ್ ಜೊತೆಗೆ ಲಾಂಗ್ ಡ್ರೈವ್ ಶ್ರೇಣಿಯನ್ನು ನೀಡುವ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸಿದೆ. ನೀವು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಯೋಜನೆಯಲ್ಲಿದ್ದರೆ ಇದೀಗ ನಾವು ಈ ಲೇಖನದಲ್ಲಿ ಬೆಸ್ಟ್ ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾಹಿತಿ ಹೇಳಲಿದ್ದೇವೆ.

ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್
Ampere Magnus EX Electric Scooter ನಲ್ಲಿ, ಕಂಪನಿಯು ಆಧುನಿಕ ತಂತ್ರಜ್ಞಾನದ ಆಧಾರದ ಮೇಲೆ ಶಕ್ತಿಯುತ ಬ್ಯಾಟರಿ ಪ್ಯಾಕ್ ಜೊತೆಗೆ ಎಲೆಕ್ಟ್ರಿಕ್ ಮೋಟರ್ ಅನ್ನು ಒದಗಿಸುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 80 ರಿಂದ 100 ಕಿಲೋಮೀಟರ್ ದೂರದವರೆಗೆ ಓಡಿಸಬಹುದು. ಹಾಗೆಯೇ ಈ ಎಲೆಕ್ಟ್ರಿಕ್ ಸ್ಕೂಟರ್ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

Ampere Magnus EX Electric Scooter Price
Image Credit: Carandbike

ಕಂಪನಿಯು Ampere Magnus EX Electric Scooter ನಲ್ಲಿ ಉತ್ತಮ ಬ್ರೇಕಿಂಗ್ ಸಿಸ್ಟಮ್ ಜೊತೆಗೆ ಆಧುನಿಕ ಸಸ್ಪೆನ್ಶನ್ ವ್ಯವಸ್ಥೆಯನ್ನು ನೀಡಿದೆ. ಕಂಪನಿಯು ಮಾರುಕಟ್ಟೆಯಲ್ಲಿ 68,999 ಬೆಲೆಯಲ್ಲಿ ಈ EV ಯನ್ನು ಲಾಂಚ್ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೀವು ವಿಶಾಲ ಸೀಟ್, LED ಹೆಡ್‌ ಲೈಟ್, ದೊಡ್ಡ ಲೆಗ್‌ ರೂಮ್ ಸ್ಪೇಸ್, ​​ಕೀಲೆಸ್ ಎಂಟ್ರಿ ಮತ್ತು ಆಂಟಿ-ಥೆಫ್ಟ್ ಅಲಾರಂ ನಂತಹ ಆಧುನಿಕ ವೈಶಿಷ್ಟ್ಯಗಳನ್ನು ನೋಡಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್ ತೆಗೆಯಬಹುದಾದ ಬ್ಯಾಟರಿಯನ್ನುಹೊಂದಿದ್ದು, ನೀವು ಬ್ಯಾಟರಿಯನ್ನು ಸುಲಭವಾಗಿ ತೆಗೆಯುವ ಮೂಲಕ ಮನೆಯಲ್ಲಿಯೇ ಚಾರ್ಜ್ ಮಾಡಿಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group