Vinod Channa: ಅನಂತ್ ಅಂಬಾನಿ ಫಿಟ್ನೆಸ್ ಟ್ರೈನರ್, ಒಂದು ಸೆಷನ್‌ಗೆ ಇವರು ಮಾಡೋ ಚಾರ್ಜ್‌ ಎಷ್ಟು ಗೊತ್ತಾ..?

ಅನಂತ್ ಅಂಬಾನಿ ಮಾತ್ರವಲ್ಲದೇ ಇತರ ಉದ್ಯಮಿಗಳಿಗೂ ಫಿಟ್ ನೆಸ್ ಟ್ರೈನರ್ ಆಗಿದ್ದ Vinod Channa.

Anant Ambani Fitness Trainer Vinod Channa: ಮುಂಬೈ ಮೂಲದ ಫಿಟ್‌ ನೆಸ್ ತರಬೇತುದಾರರಾಗಿರುವ Vinod Channa ಅವರು ದೇಶದ ಅತೀ ಹೆಚ್ಚು ಬೇಡಿಕೆಯಲ್ಲಿರುವ ಸೆಲೆಬ್ರಿಟಿ ಫಿಟ್‌ನೆಸ್ ತರಬೇತುದಾರರಲ್ಲಿ ಒಬ್ಬರಾಗಿದ್ದಾರೆ.

ಸೆಲೆಬ್ರಿಟಿ ಟ್ರೈನರ್ ಆಗುವ ಮೊದಲು ವಿನೋದ್ ಚನ್ನ ಅವರು ಹೌಸ್ ಕೀಪಿಂಗ್ ಸಿಬ್ಬಂದಿ, ಸೆಕ್ಯೂರಿಟಿ ಗಾರ್ಡ್ ಮುಂತಾದ ಸಣ್ಣ ಪುಟ್ಟ ಕೆಲಸವನ್ನು ಮಾಡಿಕೊಂಡಿದ್ದರು. ಇವರ ಸಾರಥ್ಯದಲ್ಲೇ ಅನಂತ್ ಅಂಬಾನಿ ಅವರ ತಮ್ಮ ದೇಹದ 108 ಕೆಜಿ ತೂಕವನ್ನು ಕೇವಲ 18 ತಿಂಗಳಲ್ಲಿ ಇಳಿಸಿಕೊಂಡಿದ್ದರು.

Anant Ambani Fitness Trainer
Image Credit: Timesnownews

ಅನಂತ್ ಅಂಬಾನಿ ಫಿಟ್ ನೆಸ್ ಟ್ರೈನರ್
ಮುಕೇಶ್ ಅಂಬಾನಿ (Mukesh Ambani) ಪುತ್ರ ಅನಂತ್ ಅಂಬಾನಿ ಅವರ ತೂಕ ಇಳಿಕೆಗೆ ಸಹಾಯ ಮಾಡಿದ್ದು ಸೆಲೆಬ್ರಿಟಿ ಫಿಟ್ ನೆಸ್ ಟ್ರೈನರ್ Vinod Channa ಅವರು. ಅನಂತ್ ಅಂಬಾನಿ ಅವರ ವೈಯಕ್ತಿಕ ಟ್ರೈನರ್ ಆಗಿದ್ದ ವಿನೋದ್ ಚನ್ನ ಅವರು ಸೆಲೆಬ್ರೆಟಿ ಟ್ರೈನರ್ ಆಗುವ ಮೊದಲು ಹೌಸ್ ಕೀಪಿಂಗ್ ಸಿಬ್ಬಂದಿ, ಸೆಕ್ಯೂರಿಟಿ ಗಾರ್ಡ್ ಮುಂತಾದ ಸಣ್ಣ ಪುಟ್ಟ ಕೆಲಸವನ್ನು ಮಾಡಿಕೊಂಡಿದ್ದರು. ಅನಂತ್ ಅಂಬಾನಿಗೆ ವೈಯಕ್ತಿಕ ಫಿಟ್‌ನೆಸ್ ಟ್ರೈನರ್ ಆದ ಬಳಿಕ Vinod Channa ಅವರು ಮತ್ತಷ್ಟು ಫೇಮಸ್ ಆದರೂ. ಈಗ ಅವರ ತಿಂಗಳ ಆದಾಯ ಕೇಳಿದರೆ ನೀವು ಶಾಕ್ ಆಗುತ್ತೀರಿ.

ಸೆಲೆಬ್ರಿಟಿ ಫಿಟ್ ನೆಸ್ ಟ್ರೈನರ್ ವಿನೋದ್ ಚನ್ನಾ
ಈಗ ಫಿಟ್ ನೆಸ್ ಟ್ರೈನರ್ ಆಗಿರುವ Vinod Channa ಅವರು ಕೂಡ ಒಂದು ಕಾಲದಲ್ಲಿ ದಪ್ಪಗೆ ಇದ್ದರಂತೆ, ಇವರು ದಪ್ಪಗೆ ಇದಿದ್ದರಿಂದ ಜನ ಇವರನ್ನು ಹಂಗಿಸುತಿದ್ದರು. ಹಾಗಾಗಿ ಇವರು ಅಪೌಷ್ಟಿಕತೆ ಇಂದ ಬಳಲುತ್ತಿದ್ದರು ಊಟವನ್ನು ಬಿಡುತ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಒಂದು ದಿನ ಹೀಗೆ ಇದ್ದರೆ ಸರಿ ಹೋಗುವುದಿಲ್ಲ ಎಂದು ಜಿಮ್ ಗೆ ಸೇರಲು ನಿರ್ಧರಿಸಿದರು.

Fitness trainer vinod channa
Image Credit: Realreviews

ಬ್ಯುಸಿನೆಸ್ ಇನ್‌ಸೈಡರ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಅನಂತ್ ಅಂಬಾನಿ ಬಗ್ಗೆ ಮಾತನಾಡಿದ Vinod Channa ಅವರು, Anant Ambani ಒಮ್ಮೆ ತೂಕದ ಇಳಿಕೆಗೆ ನಿರ್ಧಾರ ಮಾಡಿದ್ದರು, ಆದರೆ ಅವರು ಜಂಕ್‌ಫುಡ್‌ನ್ನು ತುಂಬಾ ಇಷ್ಟಪಟ್ಟು ತಿನ್ನುತಿದ್ದರು. ಹೀಗಾಗಿ ಅವರಿಗೆ ತೂಕ ಇಳಿಕೆ ಕೆಲಸ ದೊಡ್ಡ ಸಾಹಸವೇ ಆಗಿತ್ತು. ಪ್ರೋಟೀನ್ ಹಾಗೂ ಕಡಿಮೆ ಕಾರ್ಬೋಹೈಡ್ರೆಟ್ ಹಾಗೂ ಫೈಬರ್ ಒಳಗೊಂಡಿರುವ ಆಹಾರವನ್ನೇ ಅನಂತ್ ಅಂಬಾನಿಗೆ ನೀಡುವ ಬಗ್ಗೆ ನಿರ್ಧಾರ ಮಾಡಲಾಯಿತು ಎಂದು ಹೇಳಿಕೊಂಡಿದ್ದಾರೆ.

Join Nadunudi News WhatsApp Group

ಇತರ ಉದ್ಯಮಿಗಳಿಗೂ Vinod Channa ಫಿಟ್ ನೆಸ್ ಟ್ರೈನರ್ ಆಗಿದ್ದರು
ವಿನೋದ್ ಚನ್ನ ಅವರು ಕೇವಲ Anant Ambani ಮಾತ್ರವಲ್ಲದೇ ಇತರ ಉದ್ಯಮಿಗಳಾದ ನೀತಾ ಅಂಬಾನಿ, ಕುಮಾರ್ ಮಂಗಲಮ್‌ ಬಿರ್ಲಾ, ಅನನ್ಯಾ ಬಿರ್ಲಾ ಹಾಗೆ ಬಾಲಿವುಡ್ ಸೆಲೆಬ್ರಿಟಿಗಳಾದ ಜಾನ್ ಅಬ್ರಹಾಂ, ಶಿಲ್ಪಾ ಶೆಟ್ಟಿ, ಹರ್ಷವರ್ಧನ್ ರಾಣೆ, ವಿವೇಕ್ ಒಬೇರಾಯ್, ಅರ್ಜುನ್ ರಾಮ್‌ಪಾಲ್‌ ಮುಂತಾದವರಿಗೆ ಫಿಟ್‌ನೆಸ್‌ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.

Anant Ambani Personal Fitness Trainer Vinod Channa
Image Credit: Asianetnews

Vinod Channa ಒಂದು ಸೆಷನ್‌ಗೆ ಮಾಡೋ ಚಾರ್ಜ್‌ ಎಷ್ಟು ಗೊತ್ತಾ…?

Anant Ambani ವೈಯಕ್ತಿಕ ಫಿಟ್‌ನೆಸ್ ಟ್ರೈನರ್ ಆದ ಬಳಿಕ Vinod Channa ಅವರು ಮತ್ತಷ್ಟು ಫೇಮಸ್ ಆದರೂ. ಇವರ ಫಿಟ್‌ ನೆಸ್‌ನ 12 ಸೆಷನ್‌ಗಾಗಿ 1.5 ಲಕ್ಷ ರೂಪಾಯಿ ಶುಲ್ಕವನ್ನು ವಸೂಲಿ ಮಾಡುತ್ತಾರೆ. ಅಂದರೆ ಒಂದು ಸೆಷನ್‌ಗೆ 12,500 ರೂ ಶುಲ್ಕ ವಿಧಿಸುತ್ತಾರೆ.

Join Nadunudi News WhatsApp Group