Anant Ambani: ಮಗನ ಮದುವೆಗೆ ಅಂಬಾನಿ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ…? ಇದೊಂದು ದುಬಾರಿ ಮದುವೆ.

ಮಗನ ಮದುವೆಗೆ ಅಂಬಾನಿ ಮಾಡುತ್ತಿರುವ ಒಟ್ಟು ಖರ್ಚು ಎಷ್ಟು ಗೊತ್ತಾ

Anant Ambani Marriage Expenses: ಸದ್ಯ ದೇಶದ ಶ್ರೀಮಂತ ವ್ಯಕ್ತಿಯಾಗಿರುವ Mukesh Ambani ಅವರ ಕೊನೆಯ ಮಗ Anant ಅಂಬಾನಿ ಅವರ ಮದುವೆಯ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದೆ. ದೇಶದ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಮುಕೇಶ್ ಅಂಬಾನಿ ಅವರು ತಮ್ಮ ಕಿರಿಯ ಮಗನ ಮದುವೆಯನ್ನು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಲಿದ್ದಾರೆ. ಈಗಾಗಲೇ ಅಂಬಾನಿ ಪುತ್ರನ ಮದುವೆಯ ಪೂರ್ವ ಕಾರ್ಯಕ್ರಮಗಳು ಅದ್ದೂರಿಯಾಗಿಯೇ ನೆರವೇರುತ್ತಿದೆ.

ಸದ್ಯ ಅನಂತ್ ಅಂಬಾನಿ ಮದುವೆಯ ದಿನಾಂಕ ಹತ್ತಿರವಾಗುತ್ತಿರುವ ಕಾರಣ ಮದುವೆಯ ಬಗ್ಗೆ ಅನೇಕ ವಿಷಯಗಳ ಖರ್ಚು ನಡೆಯುತ್ತಿದೆ. ಮುಖ್ಯವಾಗಿ ಅಂಬಾನಿ ಪುತ್ರನ ಮದುವೆಗೆ ಎಷ್ಟು ಹಣ ಖರ್ಚು ಮಾಡಲಿದ್ದಾರೆ ಎನ್ನುವ ಬಗ್ಗೆ ಎಲ್ಲರಲ್ಲೂ ಪ್ರಶ್ನೆ ಮೂಡಿತ್ತಿದೆ. ಇದೀಗ ನಾವು ಅಂಬಾನಿ ಅವರು ತಮ್ಮ ಕೊನೆಯ ಮಗನ ಮದುವೆಗೆ ಎಷ್ಟು ಹಣ ಖರ್ಚು ಮಾಡಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

details about anant ambani marriage expense
Image Credit: Original Source

ಭರ್ಜರಿಯಾಗಿ ನಡೆಯುತ್ತಿದೆ ಅಂಬಾನಿ ಪುತ್ರನ ಮದುವೆಯ ಸಿದ್ಧತೆ
ಮುಕೇಶ್ ಅಂಬಾನಿ ಅವರ ಪುತ್ರ ಅಂನತ್ ಅಂಬಾನಿ ಅವರ ಮದುವೆ ರಾಧಿಕಾ ಮರ್ಚೆಂಟ್ ಅವರ ಜೊತೆ ನೆರವೇರಲಿದೆ. ಜುಲೈ 12 ರಂದು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಹಸೆಮಣೆ ಏರಲಿದ್ದಾರೆ. ಅಂಬಾನಿ ಕುಟುಂಬವು ಮದುವೆಯ ಸಿದ್ದತೆಯಲ್ಲಿ ತೊಡಗಿಕೊಂಡಿದೆ. ಮದುವೆಯ ಪೂರ್ವ ಕಾರ್ಯಕ್ರಮಕ್ಕೆ ಬಾಲಿವುಡ್, ರಾಜಕೀಯ, ಕ್ರಿಕೆಟ್, ಉದ್ಯಮ ವಲಯದ ಗಣ್ಯರು ಈಗಾಗಲೇ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಐಷಾರಾಮಿ ಕಾರು, ವಸತಿ ಸೇರಿದಂತೆ ಎಲ್ಲವನ್ನೂ ಅಂಬಾನಿ ಕುಟುಂಬ ವ್ಯವಸ್ಥೆ ಮಾಡಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್, ಶಾರುಖ್ ಖಾನ್ ಕುಟುಂಬ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಮದುವೆಯ ಪೂರ್ವ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಇವರೆಲ್ಲರಿಗೂ ಕೋಟಿಗಟ್ಟಲೆ ಮೌಲ್ಯದ ರೋಲ್ಸ್ ರಾಯ್ಸ್, ಬಿಎಂಡಬ್ಲ್ಯು ಕಾರುಗಳ ವ್ಯವಸ್ಥೆ ಮಾಡಲಾಗಿದೆ. ಮದುವೆಗೂ ಮುನ್ನ ಅಂಬಾನಿ ಕುಟುಂಬದವರು ಸಾಂಪ್ರದಾಯಿಕವಾಗಿ ತಮ್ಮ ಗ್ರಾಮಸ್ಥರಿಗೆ ಊಟ ಹಾಕಿದರು. ಈ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಜನರಿಗೆ ಭೋಜನ ನೀಡಲಾಯಿತು.

anant ambani total marriage expense
Image Credit: Original Source

ಮಗನ ಮದುವೆಗೆ ಅಂಬಾನಿ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ…?
ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಅವರಿಗೆ ಹಣಕ್ಕೆ ಯಾವುದೇ ಕೊರತೆ ಇಲ್ಲ ಎನ್ನಬಹುದು. ಹಲವು ಉದ್ಯಮಗಳನ್ನು ಹೊಂದಿರುವ ಮುಕೇಶ್ ಅಂಬಾನಿ ಅವರು ಸಾಕಷ್ಟು ಆಸ್ತಿಯನ್ನು ಹೊಂದಿದ್ದಾರೆ. ದೇಶದ ಅತಿ ದೊಡ್ಡ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ತಮ್ಮ ಮಗನ ಮದುವೆಯನ್ನು ಭರ್ಜರಿಯಾಗಿಯೇ ನೆರವೇರಿಸಲಿದ್ದಾರೆ.

Join Nadunudi News WhatsApp Group

ಅಂಬಾನಿ ಮಕ್ಕಳಲ್ಲಿ ಅಂನತ್ ಅಂಬಾನಿ ಕೊನೆಯ ಮಗ ಆದ್ದರಿಂದ ಅವರ ಕುಟುಂಬದಲ್ಲಿ ಇದು ಕೊನೆಯ ಮದುವೆಯಾಗಿದೆ. ಹೀಗಾಗಿ ದುಬಾರಿ ವೆಚ್ಚದಲ್ಲಿ ಮದುವೆ ನೆರವೇರಲಿದೆ. ಇನ್ನು ಇನ್ನು ಅಂಬಾನಿ ಅವರು ತಮ್ಮ ಮಗನ ಮದುವೆಗೆ ಸರಿಸುಮಾರು 1000 ಕೋಟಿ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ. ಈಗಾಗಲೇ ಮದುವೆಯ ಪೂರ್ವ ಕಾರ್ಯಕ್ರಮಗಳಿಗೆ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿರುವ ಅಂಬಾನಿ ಮಗನ ಮದುವೆಯನ್ನು ಯಾವ ರೀತಿ ಮಾಡಲಿದ್ದಾರೆ ಎನ್ನುವುದನ್ನು ತಿಳಿಯಲು ಜನರು ಕುತೂಹಲರಾಗಿದ್ದಾರೆ.

Join Nadunudi News WhatsApp Group