Anant Ambani Wedding: ಅಂಬಾನಿ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡಲು ಶಾರುಖ್ ಖಾನ್, ಸಲ್ಮಾನ್ ಖಾನ್ ಪಡೆದ ಸಂಭಾವನೆ ಎಷ್ಟು ಗೊತ್ತಾ…?

ಅನಂತ್ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡಿದ ಸಿನಿ ತಾರೆಯರು

Anant Ambani Wedding Event Update: ಇದೀಗ ಎಲ್ಲೆಡೆ ದೇಶದ ಶ್ರೀಮಂತ ವ್ಯಕ್ತಿಯಾಗಿರುವ Mukesh Ambani ಅವರ ಕಿರಿಯ ಪುತ್ರ Anant Ambani ಅವರ ಮದುವೆಯ ಬಗ್ಗೆ ಸಾಕಷ್ಟು ಸುದ್ದಿ ವೈರಲ್ ಆಗುತ್ತಿದೆ. ಜುಲೈ 12 ರಂದು ದೇಶದ ಶ್ರೀಮಂತ ವ್ಯಕ್ತಿಯ ಮಗನ ಮದುವೆ ಬಹಳ ಅದ್ದೂರಿಯಾಗಿ ನೆರವೇರಲಿದೆ. ಜುಲೈ 12 ರಂದು ಅನಂತ್ ಅಂಬಾನಿ ತಮ್ಮ ಬಹುಕಾಲದ ಗೆಳತೀ ರಾಧಿಕಾ ಮರ್ಚೆಂಟ್ ಅವರ ಕೈಹಿಡಿಯಲಿದ್ದಾರೆ. ಈ ಅದ್ದೂರಿ ಮದುವೆಯನ್ನು ಕಣ್ತುಂಬಿಕೊಳ್ಲಲು ಸಾಕಷ್ಟು ಜನರು ಕುತೂಹಲರಾಗಿದ್ದಾರೆ.

ಇನ್ನು ಮದುವೆಗೆ ನಾಲ್ಕೈದು ತಿಂಗಳು ಇರುವಾಗಲೇ ಅಂಬಾನಿ ಕುಟುಂಬವು ಮದುವೆಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಮದುವೆಯ ಪೂರ್ವ ಕಾರ್ಯಕ್ರಮಗಳು ನೆರವೇರುತ್ತಿದೆ. ಈ ಕಾರ್ಯಕ್ರಮಕ್ಕೆ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿರ್ ಖಾನ್ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಈ ಟಾಪ್ ಸೆಲೆಬ್ರೆಟಿಗಳು ಅಂಬಾನಿ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡಲು ಎಷ್ಟು ಸಂಭಾವನೆ ಪಡೆದಿರಬಹುದು ಎನ್ನುವ ಬಗ್ಗೆ ಎಲ್ಲಾರಲ್ಲೂ ಪ್ರಶ್ನೆ ಹುಟ್ಟಿರಬಹುದು.

Anant Ambani Wedding Event Update
Image Credit: News 18

ಅಂಬಾನಿ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡಲು ಶಾರುಖ್ ಖಾನ್, ಸಲ್ಮಾನ್ ಖಾನ್ ಪಡೆದ ಸಂಭಾವನೆ ಎಷ್ಟು ಗೊತ್ತಾ…?
ಮದುವೆಯ ಪೂರ್ವ ಕಾರ್ಯಕ್ರಮಕ್ಕೆ ಬಾಲಿವುಡ್, ರಾಜಕೀಯ, ಕ್ರಿಕೆಟ್, ಉದ್ಯಮ ವಲಯದ ಗಣ್ಯರು ಈಗಾಗಲೇ ಆಗಮಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಐಷಾರಾಮಿ ಕಾರು, ವಸತಿ ಸೇರಿದಂತೆ ಎಲ್ಲವನ್ನೂ ಅಂಬಾನಿ ಕುಟುಂಬ ವ್ಯವಸ್ಥೆ ಮಾಡಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್, ಶಾರುಖ್ ಖಾನ್ ಕುಟುಂಬ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಮದುವೆಯ ಪೂರ್ವ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಇವರೆಲ್ಲರಿಗೂ ಕೋಟಿಗಟ್ಟಲೆ ಮೌಲ್ಯದ ರೋಲ್ಸ್ ರಾಯ್ಸ್, ಬಿಎಂಡಬ್ಲ್ಯು ಕಾರುಗಳ ವ್ಯವಸ್ಥೆ ಮಾಡಲಾಗಿದೆ.

SRK, Salman, Aamir Dance At Anant Ambani And Radhika Merchant’s Pre-Wedding Bash
Image Credit: Original Source

ಇನ್ನು ಮದುವೆಯ ಪೂರ್ವ ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿರ್ ಖಾನ್ ಮಾಡಿರುವ ಡ್ಯಾನ್ಸ್ ಎಲ್ಲರ ಗಮನ ಸೆಳೆದಿದೆ. ಖಾನ್ ಕುಟುಂಬದ ಮೂವರು ಭರ್ಜರಿಯಾಗಿ ಸ್ಟೇಜ್ ಮೇಲೆ ಹೆಜ್ಜೆ ಹಾಕಿದ್ದಾರೆ. ಇನ್ನು ಕೋಟ್ಯಾಧಿಪತಿ ಆಗಿರುವ ಅಂಬಾನಿ ಮಗನ ಮದುವೆಯ ಸಂಭ್ರಮಕ್ಕೆ ಮೆರಗು ನೀಡಿದ ಶಾರುಖ್ ಖಾನ್, ಸಲ್ಮಾನ್ ಖಾನ್ ಗೆ ಅಂಬಾನಿ ಬಾರಿ ಸಂಭಾವನೆಯನ್ನೇ ನೀಡಿರುತ್ತಾರೆ ಎನ್ನಲಾಗುತ್ತಿದೆ. ಆದರೆ ಮೂಲಗಳಿಂದ ತಿಳಿದು ಬಂದ ಮಾಹಿತಿಯ ಪ್ರಕಾರ, ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿರ್ ಖಾನ್ ಸ್ಟೇಜ್ ಮೇಲೆ ಪ್ರದರ್ಶನ ನೀಡಲು ಯಾವುದೇ ಸಂಭಾವನೆಯನ್ನು ಪಡೆದುಕೊಂಡಿಲ್ಲ ಎನ್ನಲಾಗುತ್ತಿದೆ.

Join Nadunudi News WhatsApp Group

Join Nadunudi News WhatsApp Group