Anant Ambani: 18 ತಿಂಗಳಲ್ಲಿ 108 ಕೆಜಿ ತೂಕ ಇಳಿಸಲು ಅಂಬಾನಿ ಮಗ ಮಾಡಿದ್ದೇನು ಗೊತ್ತಾ….? ಮತ್ತೆ ಹೆಚ್ಚಾದ ತೂಕ.

ತೂಕ ಕಡಿಮೆ ಮಾಡಲು ಅನಂತ್ ಅಂಬಾನಿ ಮಾಡಿದ ಡಯೆಟ್ ಹೇಗಿದೆ ಗೊತ್ತಾ..?

Anant Ambani Weight Loss Journey: ದೇಶದ ಶ್ರೀಮಂತ ವ್ಯಕ್ತಿ Mukesh Ambani ಅವರ ಬಗ್ಗೆ ಎಲ್ಲರಿಗು ತಿಳಿದೇ. ತಮ್ಮ ವ್ಯವಹಾರ ಹಾಗೂ ಐಷಾರಾಮಿ ಜೀವನದ ವಿಚಾರವಾಗಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇನ್ನು Mukesh Aambani ಅವರ ಕುಟುಂಬದ ಬಗ್ಗೆ ಕೂಡ ಸಾಕಷ್ಟು ಬಾರಿ ಸುದ್ದಿಗಳು ವೈರಲ್ ಆಗಿದ್ದವು.

2023 ರ ಜನವರಿಯಲ್ಲಿ ಮುಕೇಶ್ ಅಂಬಾನಿ ಅವರ ಪುತ್ರ Anant Ambani ಅವರ ನಿಶ್ಚಿತಾರ್ಥ ಬಹಳ ಅದ್ದೂರಿಯಾಗಿ ನೆರವೇರಿತ್ತು. ಮುಕೇಶ್ ಅಂಬಾನಿ ತಮ್ಮ ಮಗನ ನಿಶ್ಚಿತಾರ್ಥದ ಸಮಯದಲ್ಲಿ ಮಾಡಿದ ಖರ್ಚು ವೆಚ್ಚದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಹರಡಿದ್ದವು.

anant ambani weight loss
Image Credit: india

ನಿಶ್ಚಿತಾರ್ಥದ ಸಮಯದಲ್ಲಿ ಮತ್ತೆ ತೂಕ ಹೆಚ್ಚಿಸಿಕೊಂಡಿದ್ದರು Ananth Ambani
ಇನ್ನು ನಿಶ್ಚಿತಾರ್ಥಕ್ಕೂ ಮುನ್ನ ಮುಕೇಶ್ ಅಂಬಾನಿ ಹಾಗೂ Nita Ambani ಅವರ ಪುತ್ರ ಅನಂತ್ ಅಂಬಾನಿ ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡಿದ್ದರು ಎನ್ನುವ ಬಗ್ಗೆ ಸುದ್ದಿ ಹರಿದಾಡಿದ್ದವು. ನಂತರ ನಿಶ್ಚಿತಾರ್ಥದ ಸಮಯದಲ್ಲಿ ಮತ್ತೆ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಇನ್ನು ಅನಂತ್ ಅಂಬಾನಿ ಅವರ ತೂಕ ಮತ್ತೆ ಹೆಚ್ಚಾಗಿದ್ದರ ಬಗ್ಗೆ ಇದೀಗ ಅನಂತ್ ಅಂಬಾನಿ ಅವರ ತಾಯಿ ನೀತಾ ಅಂಬಾನಿ ಮಾಹಿತಿ ನೀಡಿದ್ದಾರೆ.

ಅನಂತ್ ಅಂಬಾನಿ ಹೇಗೆ ತೂಕ ಇಳಿಸಿಕೊಂಡಿದ್ದರು ಗೊತ್ತಾ..?
2016 ರಲ್ಲಿ ಅನಂತ್ ಅಂಬಾನಿ 18 ತಿಂಗಳಲ್ಲಿ 108 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದರು. ಅನಂತ್ ಪ್ರತಿದಿನ 5 -6 ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದರು. ಯೋಗ ಮತ್ತು ಹೆಚ್ಚಿನ ತೀವ್ರತೆಯ ಕಾರ್ಡಿಯೋ ವ್ಯಾಯಾಮಗಳ ನಂತರ ವಾಕಿಂಗ್ ಅನ್ನು ಮಾಡುವ ಮೂಲಕ ಅನಂತ್ ಅಂಬಾನಿ ಅವರು ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡಿದ್ದರು. ಪ್ರತಿ ದಿನ 21 ಕಿಲೋಮೀಟರ್ ನಡೆಯುತ್ತಿದ್ದರಂತೆ.

anant ambani weight loss process
Image Credit: bollywoodshaadis

ತೂಕ ಕಡಿಮೆ ಮಾಡಲು ಅನಂತ್ ಅಂಬಾನಿ ಮಾಡಿದ ಡಯೆಟ್
ತೂಕವನ್ನು ಕಡಿಮೆ ಮಾಡಿಕೊಳ್ಳಲು Ananth Ambani ಶುಗರ್ ಲೆಸ್ ಆಹಾರ, ಕೊಬ್ಬಿನಾಂಶ ಕಡಿಮೆ ಇರುವ ಆಹಾರ, ಕಾರ್ಬೋಹೈಡ್ರೇಟ್ ಕಡಿಮೆ ಇರುವ ಆಹಾರವನ್ನು ಸೇವಿಸುತ್ತಿದ್ದರು. ಜಂಕ್ ಫುಡ್ ಗಳನ್ನೂ ಸಂಪೂರ್ಣವಾಗಿ ತ್ಯಜಿಸಿ ಕೇವಲ 18 ತಿಂಗಳಲ್ಲಿ ಬರೋಬ್ಬರಿ 108 KG ತೂಕವನ್ನು ಕಡಿಮೆ ಮಾಡಿಕೊಂಡಿದ್ದರು. ಆದರೆ ಒಂದೂವರೆ ವರ್ಷದಲ್ಲಿ ತೂಕ ಕಡಿಮೆ ಮಾಡಿಕೊಂಡ ಅನಂತ್ ಅಂಬಾನಿ ಮತ್ತೆ ಹೆಚ್ಚು ದಪ್ಪವಾಗಿದ್ದರು ಅನಂತ್ ಅಂಬಾನಿ ಅವರ ಕೆಲವು ಹಾರ್ಮೋನುಗಳ ಅಸಮತೋಲನವೇ ತೂಕ ಹೆಚ್ಚಳಕ್ಕೆ ಕಾರಣ ಎಂದು ತಿಳಿದುಬಂದಿದೆ.

Join Nadunudi News WhatsApp Group

ಮಗನ ತೂಕದ ಹೆಚ್ಚಳದ ಕಾರಣ ತಿಳಿಸಿದ ನೀತಾ ಅಂಬಾನಿ
ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ತಮ್ಮ ಮಗ ಅನಂತ್ ಅಂಬಾನಿ ತೂಕ ಹೆಚ್ಚಳದ ಕಾರಣವನ್ನು ರಿವೀಲ್ ಮಾಡಿದ್ದಾರೆ. ‘ತಮ್ಮ ಮಗ ತೀವ್ರವಾದ ಅಸ್ತಮಾದಿಂದ ಬಳಲುತ್ತಿದ್ದಾನೆ ಮತ್ತು ಅದಕ್ಕಾಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾನೆ. ಅನಂತ್ ಅಸ್ತಮಾ ರೋಗಿ. ಆದ್ದರಿಂದ ಅವರಿಗೆ ಸಾಕಷ್ಟು ಸ್ಟಿರಾಯ್ಡ್ ಗಳನ್ನೂ ನೀಡಬೇಕಾಯಿತು. ಅದು ಆತನ ತೂಕ ಮತ್ತೆ ಹೆಚ್ಚಾಗಲು ಕಾರಣವಾಯ್ತು’ ಎಂದು ನೀತಾ ಅಂಬಾನಿ ಅವರು ಹೇಳಿದ್ದಾರೆ.

Join Nadunudi News WhatsApp Group