Ancestral Property: ಹೆಣ್ಣು ಮಕ್ಕಳಿಗೆ ಪೂರ್ವಜರ ಆಸ್ತಿಯಲ್ಲಿ ಎಷ್ಟು ಪಾಲಿದೆ, ಭಾರತೀಯ ಕಾನೂನು ಹೇಳುವುದೇನು.

ಪೂರ್ವಜರ ಆಸ್ತಿ ಹಂಚಿಕೆಯ ಕುರಿತು ಭಾರತೀಯ ಕಾನೂನು ಹೇಳಿದ ಬಗ್ಗೆ ಮಾಹಿತಿ ತಿಳಿಯಿರಿ.

Ancestral Property Right: ಪೂರ್ವಿಕರ ಆಸ್ತಿಗೆ ಕಾನೂನುಬದ್ದ ಉತ್ತರಾಧಿಕಾರಿಗಳು ಯಾರು ಎನ್ನುವ ಕುರಿತು ಸಾಕಷ್ಟು ಗೊಂದಲಗಳು ಏರ್ಪಡುತ್ತವೆ. ಇನ್ನು ಮಗ ಹಾಗೂ ಮಗಳು ಪೂರ್ವಿಕರ ಆಸ್ತಿಯ ಮೇಲೆ ಕಾನೂನುಬದ್ಧವಾಗಿ ಸಮಾನ ಅಧಿಕಾರವನ್ನು ಹೊಂದಿರುತ್ತಾರೆ. ಇನ್ನು ದೇಶದಲ್ಲಿ ಆಸ್ತಿಯ (Property) ವಿಚಾರವಾಗಿ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತದೆ.

ಆಸ್ತಿಯ ವಿಚಾರವಾಗಿ ರಕ್ತ ಸಂಬಂಧಗಳ ನಡುವೆಯೇ ಜಗಳ ಪ್ರಾರಂಭವಾಗುತ್ತದೆ. ಆಸ್ತಿ ಹಂಚಿಕೆಯಲ್ಲಿ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳಿಗೆ ಸಮಾನ ಆಸ್ತಿ ಹಂಚಿಕೆ ಮಾಡಬೇಕು ಎನ್ನುವ ಬಗ್ಗೆ ಈಗಾಗಲೇ ಕಾನೂನು ತೀರ್ಪು ನೀಡಿದೆ. ಪೂರ್ವಜರ ಆಸ್ತಿಯ (Ancestral property) ಹಂಚಿಕೆಯ ಕುರಿತು ಜನಸಾಮಾನ್ಯರಿಗೆ ಸಾಕಷ್ಟು ಗೊಂದಲಗಳಿರುತ್ತದೆ. 

According to Indian law, what is the share of daughters in ancestral property
Image Credit: Livemint

ಪೂರ್ವಜರ ಆಸ್ತಿ ಕುರಿತು ಮಾಹಿತಿ
ನಾಲ್ಕು ತಲೆಮಾರಿನ ಪುರುಷರು ಪಿತ್ರಾರ್ಜಿತವಾಗಿ ಪಡೆದ ಆಸ್ತಿಯನ್ನು ಪೂರ್ವಜರ ಆಸ್ತಿ ಎನ್ನಲಾಗುತ್ತದೆ. ಆಸ್ತಿಯನ್ನು ಮುಖ್ಯವಾಗಿ ಎರಡು ರೀತಿಯಾಗಿ ವಿಂಗಡಿಸಲಾಗುತ್ತದೆ. ಸ್ವ- ಸ್ವಾದೀನ ಆಸ್ತಿ ಮತ್ತು ಪೂರ್ವಜರ ಆಸ್ತಿಯಾಗಿ ವಿಂಗಡಿಸಲಾಗುತ್ತದೆ. ನೀವೇ ಸಂಪಾಧಿಸಿದ ಆಸ್ತಿಯನ್ನು ಸ್ವ- ಸ್ವಾದೀನ ಆಸ್ತಿ ಎನ್ನಲಾಗುತ್ತದೆ. ಇನ್ನು ಹಲವಾರು ತಲೆಮಾರುಗಳಿಂದ ಪಡೆದ ಆಸ್ತಿ ಪೂರ್ವಜರ ಆಸ್ತಿ ಆಗಿರುತ್ತದೆ.

ಭಾರತೀಯ ಕಾನೂನಿನ ಪ್ರಕಾರ ಹೆಣ್ಣು ಮಕ್ಕಳಿಗೆ ಪೂರ್ವಜರ ಆಸ್ತಿಯಲ್ಲಿ ಎಷ್ಟು ಪಾಲಿದೆ
ಪೂರ್ವಜರ ಆಸ್ತಿಯ ಹಂಚಿಕೆಯ ಹಕ್ಕನ್ನು ಎಲ್ಲರು ಹುಟ್ಟಿನಿಂದಲೇ ಪಡೆಯುತ್ತಾರೆ. ಆಸ್ತಿಯ ಮಾಲೀಕರ ಮರಣದ ನಂತರ ಉತ್ತರಾಧಿಕಾರಿಗಳು ಪೂರ್ವಜರ ಆಸ್ತಿಯನ್ನು ಹಂಚಿಕೊಳ್ಳುತ್ತಾರೆ.

ಆಸ್ತಿಯ ಮುಖ್ಯ ಮಾಲೀಕರ ಮಕ್ಕಳನ್ನು ಮೊದಲು ಎಣಿಸಲಾಗುತ್ತದೆ ಮತ್ತು ಅದರ ಆಧಾರದ ಮೇಲೆ ಆಸ್ತಿಯನ್ನು ವಿಂಗಡಿಸಲಾಗುತ್ತದೆ. ಪೂರ್ವಜರ ಆಸ್ತಿಯಲ್ಲಿ ವಿಂಗಡಣೆಯಾದರೆ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಿಗೆ ಸಮಾನ ಹಂಚಿಕೆ ಆಗಬೇಕು ಎಂದು ಕಾನೂನು ತೀರ್ಪನ್ನು ನೀಡಿದೆ.

Join Nadunudi News WhatsApp Group

According to Indian law, what is the share of daughters in ancestral property
Image Credit: Economictimes

ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಪಾಲಿದೆ
ತಂದೆಯ ಆಸ್ತಿಯಲ್ಲಿ ಮಗ ಮತ್ತು ಮಗಳಿಗೆ ಸಮಾನ ಹಕ್ಕು ಇದೆ ಎಂದು ಹೈಕೋರ್ಟ್ ಆದೇಶ ನೀಡಿದೆ. ತಂದೆಯ ಆಸ್ತಿಯಲ್ಲಿ ಮಗ ಎಷ್ಟು ಹಕ್ಕನ್ನು ಹೊಂದಿರುತ್ತಾನೋ ಅಷ್ಟೇ ಹಕ್ಕನ್ನು ಮಗಳು ಕೂಡ ಹೊಂದಿರುತ್ತಾಳೆ. ಮಗ ಮತ್ತು ಮಗಳಿಗೆ ತಂದೆಯ ಆಸ್ತಿಯಲ್ಲಿ ಸಮಾನ ಹಂಚಿಕೆ ಆಗಬೇಕು ಎಂದು ಕೋರ್ಟ್ ಆದೇಶ ಹೊರಡಿಸಿದೆ.

Join Nadunudi News WhatsApp Group