Master Anand: ಮನೆ ಖರೀದಿ ಮಾಡುವಲ್ಲಿ ವಂಚನೆಗೆ ಒಳಗಾದ ನಟ ಮಾಸ್ಟರ್ ಆನಂದ್.

ಮಾಸ್ಟರ್ ಆನಂದ್ ಗೆ ವಂಚನೆ ಮಾಡಿದ ರಿಯಲ್ ಎಸ್ಟೇಟ್ ಸಂಸ್ಥೆ.

Anchor Master Anand: ಸಣ್ಣ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದು ನಟನೆಯಲ್ಲಿ ಎಲ್ಲರ ಮನ ಗೆದ್ದ ನಟ ಮಾಸ್ಟರ್ ಆನಂದ್ (Master Anand) ಇದೀಗ ಸುದ್ದಿಯಲ್ಲಿದ್ದಾರೆ. ಮಾಸ್ಟರ್ ಆನಂದ್ (Master Anand) ಎಂದರೆ ಈಗ ಎಲ್ಲರಿಗೂ ಗೊತ್ತು. ಅಷ್ಟು ಫೇಮಸ್ ಆಗಿರುವ ನಟ.

ಮಾಸ್ಟರ್ ಆನಂದ್ ನಟನೆಗಿಂತ ಹೆಚ್ಚಾಗಿ ನಿರೂಪಕರಾಗಿಯೇ ಜನಪ್ರಿಯತೆ ಪಡೆದಿದ್ದಾರೆ ಎನ್ನಬಹುದು. ಮಾಸ್ಟರ್ ಆನಂದ್ ನಿರೂಪಣೆಯಲ್ಲಿ ರಾಕಿಂಗ್ ಆಂಕರ್ ಎನ್ನುವ ಅವಾರ್ಡ್ ಅನ್ನು ಸಹ ಪಡೆದುಕೊಂಡಿದ್ದಾರೆ. ಜೀ ಕುಟುಂಬ ಅವಾರ್ಡ್ ಪಂಕ್ಷನ್ ನಲ್ಲಿ ಅವರಿಗೆ ಈ ಆವಾರ್ಡ್ ಲಭಿಸಿದೆ.

Anchor Master Anand latest news
Image Credit: Wikipedia

ವಂಚನೆಗೆ ಒಳಗಾದ ನಟ ಮಾಸ್ಟರ್ ಆನಂದ್
ಇದೀಗ ನಟ ಹಾಗು ನಿರೂಪಕ ಮಾಸ್ಟರ್ ಆನಂದ್ ಅವರು ವಂಚಕರಿಂದ ವಂಚನೆಗೆ ಒಳಗಾಗಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಮಾಸ್ಟರ್ ಆನಂದ್ ಅವರ ಲಕ್ಷ ಲಕ್ಷ ರೂಪಾಯಿ ವಂಚಕರ ಪಾಲಾಗಿದೆ ಎನ್ನಲಾಗುತ್ತಿದೆ. ಮಾಸ್ಟರ್ ಆನಂದ್ ಮನೆ ಖರೀದಿಸಲು ಹಣ ಹೂಡಿಕೆ ಮಾಡಿದ್ದಾರೆ, ಆದರೆ ಇವರು ಹೂಡಿಕೆ ಮಾಡಿರುವ ಸಂಸ್ಥೆ ಆನಂದ್ ಗೆ ಮೋಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ನಟ ಆನಂದ್ ವಂಚಕರ ವಿರುದ್ಧ ದೂರ ನೀಡಿದ್ದಾರಂತೆ.

ಮನೆ ಖರೀದಿ ಮಾಡುವಲ್ಲಿ ವಂಚನೆಗೆ ಒಳಗಾದ ನಟ
ಮಾಸ್ಟರ್ ಆನಂದ್ ಗೆ 18.50 ಲಕ್ಷ ವಂಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಮಾಸ್ಟರ್ ಆನಂದ್ ಮಲ್ಟಿ ವೆಂಚರ್ಸ್ ಕಂಪನಿ ವಿರುದ್ಧ ಚಂದ್ರಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೊಮ್ಮಘಟ್ಟದ ರಾಮಸಂದ್ರ ಗ್ರಾಮದಲ್ಲಿ ಮನೆ ಖರೀದಿಸಲು ಮಾಸ್ಟರ್ ಆನಂದ್ ಮೊದಲು ಮನೆ ಸಹ ನೋಡಿದ್ದಾರೆ. ಮನೆ ಇಷ್ಟವಾದ ಬಳಿಕ ಖರೀದಿಸಲು ಮುಂದಾಗಿದ್ದಾರೆ. ನಂತರ ಮಲ್ಟಿ ಲೀಪ್ ವೆಂಚರ್ಸ್ ರಾಮಸಂದ್ರದ 200 ಅಡಿ ವಿಸ್ತೀರ್ಣದ ಮನೆಯನ್ನು ತೋರಿದ್ದಾರೆ. 70 ಲಕ್ಷಕ್ಕೆ ಮನೆ ಒಪ್ಪಂದವಾಗಿ ಆನಂದ್ ಹಂತ ಹಂತವಾಗಿ 18.5 ಲಕ್ಷ ಮುಂಗಡ ಹಣ ನೀಡಿದ್ದಾರೆ.

Anchor Master Anand latest news
Image Credit: Vodapav

ಕಂಪನಿ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಹೆಸರಲ್ಲಿ ಖರೀದಿ ಖರಾರು ಪತ್ರ ಮಾಡಿಕೊಟ್ಟಿತ್ತು. ಆದರೆ ಈ ನಡುವೆ ಅದೇ ಮನೆಯನ್ನು ಬೇರೆಯವರಿಗೆ ಮಾರಾಟ ಮಾಡಿದೆ. ಈ ಬಗ್ಗೆ ಆನಂದ್​ ವಿಚಾರಿಸಿದಾಗ ಸರಿಯಾಗಿ ಸ್ಪಂದಿಸಿಲ್ಲ. ಮುಂಗಡ ಹಣ ಸಹ ವಾಪಸ್ ನೀಡಿಲ್ಲ. ಹೀಗಾಗಿ ಮಾಸ್ಟರ್ ಆನಂದ್ ಚಂದ್ರಲೇಔಟ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ದ ಎಫ್ ಐ ಆರ್ ಕೂಡ ದಾಖಲಾಗಿದೆ.

Join Nadunudi News WhatsApp Group

Join Nadunudi News WhatsApp Group