Anna Bhagya: ಈ ಕುಟುಂಬದ ಜನರ ಖಾತೆಗೆ ಫೆಬ್ರವರಿ ತಿಂಗಳ ಅನ್ನಭಾಗ್ಯ ಹಣ ಜಮಾ, ಈ ರೀತಿಯಲ್ಲಿ ಚೆಕ್ ಮಾಡಿಕೊಳ್ಳಿ

ಅನ್ನ ಭಾಗ್ಯ ಹಣ ಖಾತೆಗೆ ಜಮಾ ಆಗಿದೆಯಾ ಎಂದು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ

Anna Bhagya Yojana February Money Credit: ರಾಜ್ಯದಲ್ಲಿ Congress ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ ಲಾಭವನ್ನು ಅರ್ಹರು ಪಡೆಯುತ್ತಿದ್ದಾರೆ. ಇನ್ನು ಶಕ್ತಿ ಯೋಜನೆ, ಗೃಹ ಜ್ಯೋತಿ, ಯುವ ನಿಧಿ ಯೋಜನೆಯು ರಾಜ್ಯದ ಎಲ್ಲ ಅರ್ಹರಿಗೆ ತಲುಪಿದೆ ಎನ್ನಬಹುದು. ಆದರೆ ಗೃಹ ಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಗಳ ಲಾಭ ಸಂಪೂರ್ಣ ಅರ್ಹರಿಗೆ ತಲುಪಿಲ್ಲ. ಎಲ್ಲ ಅರ್ಹರಿಗೆ ಯೋಜನೆಯ ಲಾಭವನ್ನು ನೀಡಲು ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ.

Anna Bhagya Latest Update
Image Credit: KP News 24×7

ಫೆಬ್ರವರಿ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆ
ಸದ್ಯ ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ ಅರ್ಹರಿಗೆ 5 ಕೆಜಿ ಅಕ್ಕು ಹಾಗೂ 5 ಕೆಜಿ ಅಕ್ಕಿಯ ಬದಲಾಗಿ ಕೆಜಿ 34 ರೂ. ಗಳಂತೆ 170 ರೂ. ಗಳನ್ನೂ ನೀಡುತ್ತಿದೆ. ಹೆಚ್ಚುವರಿ ಅಕ್ಕಿಯ ಹಣವು DBT ಮೂಲಕ ನೇರವಾಗಿ ಅರ್ಹರ ಖಾತೆಗೆ ಜಮಾ ಆಗುತ್ತಿದೆ. ಸದ್ಯ ರಾಜ್ಯ ಸರ್ಕಾರ ಫೆಬ್ರವರಿ ತಿಂಗಳ ಅನ್ನ ಭಾಗ್ಯ ಹಣವನ್ನು ಬಿಡುಗಡೆ ಮಾಡಿದೆ.

ಇನ್ನು ಫಲಾನುಭವಿಗಳು ಮುಖ್ಯವಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಸಮಸ್ಯೆಯನ್ನು ಬಗೆಹರಿಸಿಕೊಂಡರೆ ಅನ್ನ ಭಾಗ್ಯ ಹಣ ನಿಮ್ಮ ಖಾತೆಗೆ ಯಾವುದೇ ತೊಂದರೆ ಇಲ್ಲದೆ ಜಮಾ ಆಗುತ್ತದೆ. ಇನ್ನು ನೀವು ಫೆಬ್ರವರಿ ತಿಂಗಳ Anna Bhagya Money ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎನ್ನುವುದನ್ನು ತಿಳಿಯಲು ಈ ಕೆಳಗಿನ ಹಂತವನ್ನು ಅನುಸರಿಸಬಹುದು.

Anna Bhagya Money Status Check
Image Credit: Original Source

ಅನ್ನ ಭಾಗ್ಯ ಹಣ ಖಾತೆಗೆ ಜಮಾ ಆಗಿದೆಯಾ ಎಂದು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ
•ಅನ್ನಭಾಗ್ಯ ಯೋಜನೆಯ ಹಣ ಬಂದಿದೀಯ ಎಂದು ಚೆಕ್ ಮಾಡಿಕೊಳ್ಳಲು ಮೊದಲು ಆಹಾರ ಇಲಾಖೆಯ ಅಧಿಕೃತ Website https://ahara.kar.nic.in/Home/EServices ಭೇಟಿ ನೀಡಬೇಕು.

•ನಂತರ ಎಡ ಭಾಗದಲ್ಲಿ ಕಾಣುವ ಮೂರೂ ಲೈನ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಸ್ಥಿತಿ ಎನ್ನುವ ಆಯ್ಕೆ ಕಾಣುತ್ತದೆ.

Join Nadunudi News WhatsApp Group

•ಸ್ಥಿತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಮೂರೂ ಲಿಂಕ್ ಗಳು ಕಾಣುತ್ತದೆ, ಅದರ ಕೆಳಗೆ ಇರುವ ಜಿಲ್ಲೆಗಳ ಪಟ್ಟಿಯಲ್ಲಿ ನಿಮ್ಮ ಜಿಲ್ಲೆ ಯಾವುದು ಎಂದು ಆಯ್ಕೆ ಮಾಡಿ.

•ನಂತರ ಇನ್ನೊಂದು Page Open ಆಗುತ್ತದೆ DBT Status ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ,

•ನಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಗು ಯಾವ ತಿಂಗಳ ಹಣ ಚೆಕ್ ಮಾಡಬೇಕು ಎನ್ನುವ ಕ್ಯಾಪ್ಚ್ ಸಂಖ್ಯೆಯನ್ನು ನಮೂದಿಸಿ. ನಂತರ ನಿಮ್ಮ ಖಾತೆಗೆ ಹಣ ಜಮೆ ಆಗಿರುವ ಕುರಿತು ಸಂಪೂರ್ಣ ಮಾಹಿತಿ ನಿಮಗೆ ಪರದೆಯ ಮೇಲೆ ಕಾಣಸಿಗುತ್ತದೆ.

Join Nadunudi News WhatsApp Group