Anna Bhagya: ಫೆಬ್ರವರಿ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಖಾತೆಗೆ ಜಮಾ, ಈ ರೀತಿ ಖಾತೆ ಚೆಕ್ ಮಾಡಿಕೊಳ್ಳಿ

ಅನ್ನ ಭಾಗ್ಯ ಹಣ ಖಾತೆಗೆ ಜಮಾ ಆಗಿದೆಯಾ ಎಂದು ಈ ರೀತಿಯಾಗಿ ಪರಿಶೀಲಿಸಿಕೊಳ್ಳಿ

Anna Bhagya Status Check: ರಾಜ್ಯದಲ್ಲಿ Congress ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ ಲಾಭವನ್ನು ಅರ್ಹರು ಪಡೆಯುತ್ತಿದ್ದಾರೆ. ಇನ್ನು ಶಕ್ತಿ ಯೋಜನೆ, ಗೃಹ ಜ್ಯೋತಿ, ಯುವ ನಿಧಿ ಯೋಜನೆಯು ರಾಜ್ಯದ ಎಲ್ಲ ಅರ್ಹರಿಗೆ ತಲುಪಿದೆ ಎನ್ನಬಹುದು. ಆದರೆ ಗೃಹ ಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಗಳ ಲಾಭ ಸಂಪೂರ್ಣ ಅರ್ಹರಿಗೆ ತಲುಪಿಲ್ಲ. ಎಲ್ಲ ಅರ್ಹರಿಗೆ ಯೋಜನೆಯ ಲಾಭವನ್ನು ನೀಡಲು ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ.

Anna Bhagya Status Check
Image Credit: Original Source

5KG ಅಕ್ಕಿಯ ಬದಲಾಗಿ ಹಣ ಪಡೆಯುತ್ತಿರುವ ರಾಜ್ಯದ ಜನತೆ
ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಪಡಿತರ ಕಾರ್ಡ್ ದಾರರಿಗೆ ಮಾಸಿಕ ತಲಾ 170 ರೂಪಾಯಿ ನೀಡುವ ಬಗ್ಗೆ ಸರ್ಕಾರ ಘೋಷಣೆ ಹೊರಡಿಸಿತ್ತು. ರಾಜ್ಯದ BPL Card ದಾರರು ಅಕ್ಕಿಯ ಬದಲಾಗಿ ಹಣವನ್ನು ಪಡೆಯುತ್ತಿದ್ದಾರೆ.

ಪ್ರತಿ ತಿಂಗಳು ಪಡಿತರ ಪಡೆಯದ BPL ಕಾರ್ಡ್ ದಾರರಿಗೆ ಅನ್ನ ಭಾಗ್ಯದ ಹಣ ಜಮಾ ಮಾಡಲಾಗುದಿಲ್ಲ ಎಂದು ಸರ್ಕಾರ ಈಗಾಗಲೇ ಹೇಳಿಕೆ ನೀಡಿದೆ. ಹಾಗಾದರೆ ಅನ್ನ ಭಾಗ್ಯದ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ತಿಳಿಯುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Anna Bhagya Money Credit
Image Credit: Karnataka Times

ಅನ್ನ ಭಾಗ್ಯ ಹಣ ಖಾತೆಗೆ ಜಮಾ ಆಗಿದೆಯಾ ಎಂದು ಈ ರೀತಿಯಾಗಿ ಪರಿಶೀಲಿಸಿಕೊಳ್ಳಿ
•ಕರ್ನಾಟಕ ಸರ್ಕಾರದ ಅಧಿಕೃತ Website https://www.karnataka.gov.in/ ಗೆ ಭೇಟಿ ನೀಡಿ.

•E -Services ಟ್ಯಾಬ್ ಮೇಲೆ ಕ್ಲಿಕ್ ಮಾಡಿ

Join Nadunudi News WhatsApp Group

•DBT Status ಲಿಂಕ್ ಅನ್ನು ಕ್ಲಿಕ್ ಮಾಡಿ

•ನೀವು ರೇಷನ್ ಕಾರ್ಡ್ ನಲ್ಲಿ ಯಾವ ಸಮಯದ ಸ್ಟೇಟಸ್ ತಿಳಿಯಲು ಬಯಸುತ್ತೀರಿ ಎನ್ನುವುದನ್ನು ಆಯ್ಕೆ ಮಾಡಿ.

•ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ನಂತರ Continue ಬಟನ್ ಕ್ಲಿಕ್ ಮಾಡಿ.

•ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ ಅನ್ನ ಭಾಗ್ಯ ಯೋಜನೆಯಡಿ ನಿಮಗೆ ಯಾವ ಯಾವ ಕಂತುಗಳ ಹಣ ಜಮಾ ಆಗಿದೆ ಎನ್ನುವುದು ಸ್ಕ್ರೀನ್ ಮೇಲೆ ತೋರುತ್ತದೆ.ರ್ಣ ಮಾಹಿತಿ ನಿಮಗೆ ಪರದೆಯ ಮೇಲೆ ಕಾಣಸಿಗುತ್ತದೆ.

Join Nadunudi News WhatsApp Group