Ration Card Benefits: ಈ ರೇಷನ್ ಕಾರ್ಡ್ ಇದ್ದವರಿಗೆ ಇನ್ಮುಂದೆ ಈ ಎಲ್ಲಾ ರೇಷನ್ ಅಗ್ಗದ ಬೆಲೆಯಲ್ಲಿ ಸಿಗಲಿದೆ, ಸರ್ಕಾರದ ಆದೇಶ

ಈ ಪಡಿತರ ಚೀಟಿಯನ್ನು ಹೊಂದಿರುವವವರು ಅಗ್ಗದ ದರದಲ್ಲಿ ಪಡಿತರನ್ನು ಪಡೆಯಬಹುದು.

Antyodaya Ration Card Benefit: ಮೋದಿ ಸರ್ಕಾರ ಇತ್ತೀಚೆಗಷ್ಟೇ ಅಂತ್ಯೋದಯ ಅನ್ನ ಯೋಜನೆಯಡಿ ಅಂತ್ಯೋದಯ ಪಡಿತರ ಚೀಟಿಯನ್ನು ನೀಡಿತ್ತು. ದೇಶದಲ್ಲಿ ಯಾವುದೇ ಶಾಶ್ವತ ಆದಾಯ ಮೂಲವಿಲ್ಲದ ಬಡ ಜನರಿಗೆ ಸರಕಾರ ಪರಿಚಯಿಸಿರುವ ಅಂತ್ಯೋದಯ ಪಡಿತರ ಚಿಟಿಲಭ್ಯವಾಗುತ್ತದೆ.

ಇನ್ನು ಮೋದಿ ಸಾರ್ಕಾರ ಈ ಯೋಜನೆಯನ್ನು ಇನ್ನೂ ಎರಡಿ ವರ್ಷಗಳವರೆಗೆ ವಿಸ್ತರಿಸುವುದಾಗಿ ಘೋಷಣೆ ಹೊರಡಿಸಿದೆ. ಈ ಅಂತ್ಯೋದಯ ಪಡಿತರ ಚೀಟಿ ಅಂಗವಿಕಲರಿಗೆ ಕೂಡ ಲಭ್ಯವಾಗುತ್ತದೆ. ಸದ್ಯ ಈ ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರುವವವರು ಅಗ್ಗದ ದರದಲ್ಲಿ ಪಡಿತರನ್ನು ಪಡೆಯಬಹುದು.

Antyodaya Ration Card Benefit
Image Credit: The Economic Times

ಈ ಪಡಿತರ ಚೀಟಿ ಇದ್ದರೆ ಅಗ್ಗದ ಬೆಲೆಯಲ್ಲಿ ಸಿಗಲಿದೆ ರೇಷನ್
ಅಂತ್ಯೋದಯ ಅನ್ನ ಯೋಜನೆಯ ಪ್ರಯೋಜನವು ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಮಾತ್ರ ಲಭ್ಯವಿದೆ. ಈ ಪಡಿತರ ಚೀಟಿಯೂ ಗುಲಾಬಿ ಬಣ್ಣದ್ದಾಗಿದ್ದು, ಪ್ರಸ್ತುತ ದೇಶದಲ್ಲಿ ಸುಮಾರು 1.89 ಕೋಟಿ ಕುಟುಂಬಗಳು ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿವೆ. ಅಂತ್ಯೋದಯ ಯೋಜನೆಯಡಿ ಈ ಪಡಿತರ ಚೀಟಿದಾರರಿಗೆ ಅಗ್ಗವಾಗಿ ಗೋಧಿ, ಅಕ್ಕಿ ಮತ್ತು ಸಕ್ಕರೆ ನೀಡಲಾಗುತ್ತದೆ.

ಅಂತ್ಯೋದಯ ಪಡಿತರ ಚೀಟಿಯನ್ನು ಪಡೆಯಲು ಯಾರು ಅರ್ಹರು..?
ಭೂರಹಿತರು, ಕೃಷಿ ಕಾರ್ಮಿಕರು, ಸಣ್ಣ ರೈತರು, ಕಸ ಸಂಗ್ರಹಿಸುವವರು, ರಿಕ್ಷಾ ಚಾಲಕರು ಮತ್ತು ಕೊಳೆಗೇರಿಗಳಲ್ಲಿ ವಾಸಿಸುವ ಜನರು ಸಾಮಾನ್ಯವಾಗಿ ಅಂತ್ಯೋದಯ ಅನ್ನ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಾರೆ. ಯಾವುದೇ ಆದಾಯದ ಮೂಲವಿಲ್ಲದ ಅಥವಾ 60 ವರ್ಷಕ್ಕಿಂತ ಮೇಲ್ಪಟ್ಟ ವಿಧವೆಯರು ಸಹ ಈ ಪಡಿತರ ಚೀಟಿಗೆ ಅರ್ಹರಾಗಿರುತ್ತಾರೆ.

Antyodaya Ration Card
Image Credit: Lennews

ಅಂತ್ಯೋದಯ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ವ್ಯಕ್ತಿಗೆ ಶಾಶ್ವತ ಮನೆ ಇರಬಾರದು ಮತ್ತು ವಾರ್ಷಿಕ ಆದಾಯ ರೂ.20,000 ಮೀರಬಾರದು. ನೀವು ಮೊದಲು ಯಾವುದೇ ಪಡಿತರ ಚೀಟಿಯನ್ನು ಹೊಂದಿರಬಾರದು. ಆಧಾರ್ ಕಾರ್ಡ್, ಪಾಸ್‌ ಪೋರ್ಟ್ ಗಾತ್ರದ ಫೋಟೋ, ನಿವಾಸ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಮೊಬೈಲ್ ಸಂಖ್ಯೆ ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿಯನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

Join Nadunudi News WhatsApp Group