APAAR ID: ಏನಿದು One Nation One Student ID…? ಈ ID ಕಾರ್ಡಿನಿಂದ ವಿದ್ಯಾರ್ಥಿಗಳಿಗೆ ಏನೇನು ಲಾಭ…?

One Nation One Student ID ಕಾರ್ಡ್ ಅನ್ನು ವಿದ್ಯಾರ್ಥಿಗಳಿಗೆ ಏಕೆ ನೀಡಲಾಗುತ್ತದೆ...? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

One Nation One Student ID: ಸದ್ಯ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಗುರುತಿಗಾಗಿ ವಿಶೇಷ ID ದಾಖಲೆಯನ್ನು ನೀಡಲು ಮುಂದಾಗಿದೆ. ಇದನ್ನು ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರ ಹೊಸ ಯೋಜನೆಯನ್ನೇ ರೂಪಿಸಲು ಸಜ್ಜಾಗಿದೆ.

ಈ ಯೋಜನೆಯನ್ನು ಜಾರಿಗೊಳಿಸುವುದುದರ ಮೂಲಕ ವಿದ್ಯಾರ್ಥಿಗಳಿಗೆ Aadhaar Card ನ ಬದಲಾಗಿ ವಿಶೇಷ ದಾಖಲೆ ನೀಡಲು ಚಿಂತನೆ ನಡೆಸಿದೆ. ಇನ್ನುಮುಂದೆ ವಿದ್ಯಾರ್ಥಿಗಳಿಗೆ ಆಧಾರ್ ರೀತಿಯೇ ಹೊಸ ಗುರುತಿನ ಚೀಟಿ ನೀಡಲು ಸರ್ಕಾರ ನಿರ್ಧರಿಸಿದೆ. ಏಕೀಕೃತ ವಿದ್ಯಾರ್ಥಿ ಗುರುತಿನ ವ್ಯವಸ್ಥೆಯನ್ನು ಸರ್ಕಾರದ ಗುರಿಯಾಗಿದೆ.

APAAR ID Latest News
Image Credit: Oneindia

ಏನಿದು One Nation One Student ID…?
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ರ ಭಾಗವಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಪ್ರತಿ ವಿದ್ಯಾರ್ಥಿಗೆ Automatic Permanent Academic Account Registry (APAAR) ಎಂಬ ‘One Nation, One Student ID’ ರಚಿಸಲು ಯೋಜಿಸಿದೆ ಎನ್ನಲಾಗಿದೆ. ದೇಶದ ವಿದ್ಯಾರ್ಥಿಗಳಿಗೆ ವಿಶಿಷ್ಟ ಗುರುತಿನ ಚೀಟಿ ನೀಡುವುದು ಸರ್ಕಾರದ ಉದ್ದೇಶವಾಗಿದೆ.

APAAR ID, ಎಜುಕೇಶನ್ ಇಕೋಸಿಸ್ಟಮ್ ರಿಜಿಸ್ಟ್ರಿ ಅಥವಾ ಎಜುಲಾಕರ್ ಅನ್ನು ಜೀವಮಾನದ ID ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣ ಮತ್ತು ಸಾಧನೆಗಳನ್ನು ಟ್ರ್ಯಾಕ್ ಮಾಡುತ್ತದೆ. APAAR ID 12 ಅಂಕಿಗಳನ್ನು ಹೊಂದಿದ್ದು, ಪ್ರತಿ ವಿದ್ಯಾರ್ಥಿಯ ಸಂಪೂರ್ಣ ವಿವರವನ್ನು ಡಿಜಿಟಲ್ ರೂಪದಲ್ಲಿ ಇರಿಸಲಾಗುತ್ತದೆ. 12 ಅಂಕಿಯ ಕಾರ್ಡ್ ಸಂಖ್ಯೆಯಲ್ಲಿ QR Code ಕೂಡ ಇರಲಿದೆ. ದೇಶದಾದ್ಯಂತ ಶಾಲಾ ಶಿಕ್ಷಣ ಇಲಾಖೆಯು ದೂರದ ಹಳ್ಳಿಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಬಳಸಿಕೊಂಡು ಸ್ವಯಂಚಾಲಿತ ಶಾಶ್ವತ ಶೈಕ್ಷಣಿಕ ಖಾತೆ ನೋಂದಣಿ ಅನ್ನು ಈಗಾಗಲೇ ಪ್ರರಂಭಿಸಿದೆ.

APAAR ID- One Nation, One Student ID
Image Credit: Bharatexpress

ಈ ID ಕಾರ್ಡಿನಿಂದ ವಿದ್ಯಾರ್ಥಿಗಳಿಗೆ ಏನೇನು ಲಾಭ…?
•ವಿದ್ಯಾರ್ಥಿಯ ಹೆಸರು, ವರ್ಗ, ಶಾಲೆ, ಬ್ಯಾಚ್ ಹಾಗೂ ರಾಜ್ಯದ ಮಾಹಿತಿಯನ್ನು APAAR ID ಯಲ್ಲಿ ನಮೂದಿಸಲಾಗುತ್ತದೆ.

Join Nadunudi News WhatsApp Group

•ಆಧಾರ್ ಕಾರ್ಡ್ ನೋಂದಣಿ ಹಾಗೂ ವಿದ್ಯಾರ್ಥಿಯ ಪೋಷಕರ ಮೊಬೈಲ್ ಸಂಖ್ಯೆ APAAR ID ನೋಂದಣಿಗೆ ಅಗತ್ಯ.

•ಶಿಕ್ಷಣ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿದ್ಯಾರ್ಥಿಗಳಿಗೆ APAAR ID ಗಳನ್ನು ರಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿರ್ದೇಶಿಸಿದೆ.

•APAAR ID ಆಧಾರ್ ರೀತಿಯೇ ಇರಲಿದ್ದು, ಇದು ವಿದ್ಯಾರ್ಥಿಗಳಿಗೆ ಆಧಾರ್ ನ ಪರ್ಯಾಯವಾಗುವುದಿಲ್ಲ. ಆಧಾರ್ ಗೆ ಹೆಚ್ಚುವರಿಯಾಗಿ ವಿದ್ಯಾರ್ಥಿಗಳಿಗೆ ಇದನ್ನು ನೀಡಲಾಗುತ್ತದೆ.

Join Nadunudi News WhatsApp Group