Apple Watch: ಇನ್ಮುಂದೆ ಆಪಲ್ ವಾಚ್ ನಲ್ಲಿ ಇರಲ್ಲ ಈ ಫೀಚರ್, ಆಪಲ್ ವಾಚ್ ಬಳಸುವವರಿಗೆ ಬಿಗ್ ಅಪ್ಡೇಟ್

ಇನ್ನುಮುಂದೆ Apple Smart Watch ನಲ್ಲಿ ಈ ಫೀಚರ್ ಲಭ್ಯವಾಗುವುದಿಲ್ಲ

Apple Smart Watch Feature Removed: ಸದ್ಯ ದೇಶಿಯ ಮಾರುಕಟ್ಟೆಯಲ್ಲಿ Apple ಉತ್ಪನ್ನಗಳು ಬಾರಿ ಬೇಡಿಕೆಯನ್ನು ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ Apple ಕಂಪನಿಯು ಐಫೋನ್, ಐಪ್ಯಾಡ್ ಸೇರಿದಂತೆ ಸ್ಮಾರ್ಟ್ ವಾಚ್ ಗಳನ್ನೂ ಕೂಡ ಪರಿಚಯಿಸಿದೆ.

ಮಾರುಕಟ್ಟೆಯಲ್ಲಿ ಐಫೋನ್ ಗಳಷ್ಟೇ Apple Smart Watch ಗಳು ಕೂಡ ಬೇಡಿಕೆಯನ್ನು ಪಡೆದುಕೊಂಡಿದೆ. ವಿವಿಧ ಮಾದರಿಯ ಸ್ಮಾರ್ಟ್ ವಾಚ್ ಗಳು ವಿಭಿನ್ನ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಆಪಲ್ ಸ್ಮಾರ್ಟ್ ವಾಚ್ ಬಳಕೆದಾರರಿಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಹೌದು ಇನ್ನುಮುಂದೆ Apple Smart Watch ನಲ್ಲಿ ಈ ಬೆಸ್ಟ್ ಫೀಚರ್ ಲಭ್ಯವಾಗುವುದಿಲ್ಲ.

Apple Smart Watch Update
Image Credit: Indiamart

ಇನ್ನುಮುಂದೆ Apple Smart Watch ನಲ್ಲಿ ಇರಲ್ಲ ಈ ಫೀಚರ್
US ನಲ್ಲಿ ತನ್ನ ಇತ್ತೀಚಿನ ಸ್ಮಾರ್ಟ್‌ ವಾಚ್‌ ಗಳ ಸರಣಿ 9 ಮತ್ತು ಅಲ್ಟ್ರಾ 2 ಮೇಲಿನ Sales Ban ಅನ್ನು ತಪ್ಪಿಸುವ ಪ್ರಯತ್ನದಲ್ಲಿ, ಆಪಲ್ ತನ್ನ ಎರಡು ವಾಚ್ ಮಾಡೆಲ್‌ ಗಳಿಂದ ವಿವಾದಾತ್ಮಕ Blood Oxygen Monitoring Tool ಅನ್ನು ತೆಗೆದುಹಾಕಲು ನಿರ್ಧರಿಸಿದೆ. ಇನ್ನುಮುಂದೆ Apple Smart Watch ಬಳಕೆದಾರರು Blood Oxygen Monitoring Tool ಫೀಚರ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ.

ಡಿವೈಸ್ ಗಳ ಪಲ್ಸ್ ಆಕ್ಸಿಮೀಟರ್ ವೈಶಿಷ್ಟ್ಯದ ಮೇಲಿನ ಪೇಟೆಂಟ್ ವಿವಾದದಿಂದಾಗಿ ಆಪಲ್ ವಾಚ್ ಉತ್ಪನ್ನಗಳ ಮಾರಾಟವನ್ನು ಹಿಂದೆ US ನಲ್ಲಿ ನಿಲ್ಲಿಸಲಾಗಿತ್ತು. ಅಂತೆಯೇ, ನಿಷೇಧವು ಆಪಲ್‌ ನ ಇತ್ತೀಚಿನ ಸ್ಮಾರ್ಟ್‌ ವಾಚ್‌ ಗಳಾದ ಸರಣಿ 9 ಮತ್ತು ಆಪಲ್ ವಾಚ್ ಅಲ್ಟ್ರಾ 2 ಗಳಿಗೆ ಅನ್ವಯಿಸುತ್ತದೆ ಮತ್ತು ಕಂಪನಿಯ ಹಳೆಯ ವಾಚ್ ಮಾಡೆಲ್‌ ಗಳಿಗೆ ಅಲ್ಲ ಎಂದು ಉಲ್ಲೇಖಿಸಲಾಗಿದೆ.

Apple Smart Watch Feature
Image Credit: zdnet

ಈ ಫೀಚರ್ ನ ಉಪಯೋಗವೇನು..?
Blood Oxygen Monitoring Tool ರಕ್ತದ ಆಮ್ಲಜನಕದ ಮಟ್ಟವನ್ನು ಅಳೆಯಲು ಸಹಾಯ ಮಾಡುತ್ತದೆ. ಕಡಿಮೆ ಆಮ್ಲಜನಕದ ಮಟ್ಟವು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ರಕ್ತದ ಆಮ್ಲಜನಕದ ಮಟ್ಟವು ನಿಮ್ಮ ಕೆಂಪು ರಕ್ತ ಕಣಗಳು ನಿಮ್ಮ ಶ್ವಾಸಕೋಶದಿಂದ ನಿಮ್ಮ ದೇಹದ ಉಳಿದ ಭಾಗಗಳಿಗೆ ಸಾಗಿಸುವ ಆಮ್ಲಜನಕದ ಶೇಕಡಾವಾರು ಪ್ರಮಾಣವನ್ನು ಪ್ರತಿನಿಧಿಸುತ್ತದೆ.

Join Nadunudi News WhatsApp Group

ನಿಮ್ಮ ರಕ್ತವು ಈ ಪ್ರಮುಖ ಕಾರ್ಯವನ್ನು ಎಷ್ಟು ಚೆನ್ನಾಗಿ ನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ನಿಮ್ಮ ಆರೋಗ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಉಪಕರಣವು ಅದೇ ಕೆಲಸವನ್ನು ಮಾಡುತ್ತದೆ. ಆದರೆ ವೈದ್ಯಕೀಯ ತಂತ್ರಜ್ಞಾನ ಕಂಪನಿ ಮಾಸ್ಸಿಮೊ, ಆಪಲ್ ಕಾನೂನು ಬಾಹಿರವಾಗಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ ಎಂದು ಐಟಿಸಿ ತೀರ್ಪು ನೀಡಿದೆ. ಈ ಕಾರಣಕ್ಕಾಗಿ ಆಪಲ್ ತನ್ನ ಮುಂಬರುವ ವಾಚ್ ಸರಣಿ 9 ಮತ್ತು ಆಪಲ್ ವಾಚ್ ಅಲ್ಟ್ರಾ 2 ನಿಂದ ಈ ಫೀಚರ್ ಅನ್ನು ತೆಗೆದುಹಾಕಲಿದೆ ಎಂದು ವರದಿಯಾಗಿದೆ.

Join Nadunudi News WhatsApp Group