April Holiday: ಏಪ್ರಿಲ್ ತಿಂಗಳಿನಲ್ಲಿ 14 ದಿನ ಬ್ಯಾಂಕ್ ಬಂದ್, ಬೇಗ ನಿಮ್ಮ ವ್ಯವಹಾರ ಮುಗಿಸಿಕೊಳ್ಳಿ

ಏಪ್ರಿಲ್ ತಿಂಗಳಿನಲ್ಲಿ 14 ದಿನಗಳ ಕಾಲ ಬ್ಯಾಂಕ್ ಬಂದ್.

April 2024 Holiday: ಪ್ರಸ್ತುತ 2024 ರ ಮಾರ್ಚ್ ತಿಂಗಳು ಮುಗಿದು April ತಿಂಗಳು ಆರಂಭವಾಗಲು ಇನ್ನೇನು ಕೇವಲ 4 ದಿನಗಳು ಬಾಕಿ ಇವೆ. 2024 ರ ಹೊಸ ಏಪ್ರಿಲ್ ತಿಂಗಳ ಆರಂಭವು ಹೊಸ ಹಣಕಾಸು ವರ್ಷದ ಆರಂಭ ಕೂಡ ಆಗಿದೆ. 2024 -25 ರ ಹಣಕಾಸು ವರ್ಷ ಏಪ್ರಿಲ್ 1 ರಿಂದ ಆರಂಭವಾಗುತ್ತದೆ. ಹೊಸ ಹಣಕಾಸು ವರ್ಷದ ಆರಂಭದಿಂದ ಅನೇಕ ನಿಯಮಗಳು ಬದಲಾಗಲಿವೆ.

ಸದ್ಯ RBI ಏಪ್ರಿಲ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. RBI ರಜಾ ದಿನದ ವೇಳಾಪಟ್ಟಿಯ ಪ್ರಕಾರ ಏಪ್ರಿಲ್ ತಿಂಗಳಿನಲ್ಲಿ ಸುಮಾರು 14 ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರಲಿದೆ. ತಿಂಗಳ ಪ್ರತಿ ಭಾನುವಾರ ಬ್ಯಾಂಕ್ ಗೆ ರಜೆ ಇರುವುದು ಸಾಮಾನ್ಯವಾದ ವಿಷಯ. ಹಾಗೆಯೇ ಎರಡನೇ ಮತ್ತು ನಾಲ್ಕನೇ ಶನಿವಾರ ಸೇರಿದಂತೆ ಏಪ್ರಿಲ್ ತಿಂಗಳಿನಲ್ಲಿ ಒಟ್ಟು 14 ದಿನಗಳು ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಬ್ಯಾಂಕ್ ರಜಾ ದಿನಗಳ ಸಮಯದಲ್ಲಿ ಗ್ರಾಹಕರು Online Banking ಸೇವೆಯನ್ನು ಪಡೆಯಬಹುದು.

April 2024 Bank Holiday
Image Credit: Zeebiz

ಏಪ್ರಿಲ್ ತಿಂಗಳಿನಲ್ಲಿ 14 ದಿನ ಬ್ಯಾಂಕ್ ಬಂದ್
April 1: ವಾರ್ಷಿಕ ಖಾತೆಗಳನ್ನು ಮುಚ್ಚುವ ಖಾತೆಯಲ್ಲಿ ರಜೆ.

April 5: ಬಾಬು ಜಗಜೀವನ್ ರಾಮ್ ಜನ್ಮದಿನ/ಜುಮಾತ್-ಉಲ್-ವಿದಾ

April 7: ಭಾನುವಾರ ದೇಶದಾದ್ಯಂತ ಬ್ಯಾಂಕ್ ರಜೆ.

Join Nadunudi News WhatsApp Group

April 9: ಗುಡಿ ಪಾಡ್ವಾ/ಯುಗಾದಿ ಹಬ್ಬ/ತೆಲುಗು ಹೊಸ ವರ್ಷದ ದಿನ/ಮೊದಲ ನವರಾತ್ರಿ

April 10: ರಂಜಾನ್-ಈದ್ (ಈದ್-ಉಲ್-ಫಿತರ್)

April 11: ರಂಜಾನ್-ಈದ್ (ಈದ್-ಉಲ್-ಫಿತರ್)

April 13: ಬೊಹಾಗ್ ಬಿಹು/ಚೆರೋಬಾ/ಬೈಸಾಕಿ/ಬಿಜು ಹಬ್ಬ

Bank Holidays in April 2024
Image Credit: Newsnext

April14: ಭಾನುವಾರ ದೇಶದಾದ್ಯಂತ ಬ್ಯಾಂಕ್ ರಜೆ.

April 15: ಬೋಹಾಗ್ ಬಿಹು/ಹಿಮಾಚಲ ದಿನ

April 17: ಶ್ರೀ ರಾಮ ನವಮಿ (ಚೈತೆ ದಾಸೈನ್)

April 20: ಗರಿಯಾ ಪೂಜೆ

April 21: ಭಾನುವಾರ ದೇಶದಾದ್ಯಂತ ಬ್ಯಾಂಕ್ ರಜೆ.

April 27: ನಾಲ್ಕನೇ ಶನಿವಾರ

April 28: ಭಾನುವಾರ ದೇಶದಾದ್ಯಂತ ಬ್ಯಾಂಕ್ ರಜೆ.

April 2024 Holiday
Image Credit: Business League

Join Nadunudi News WhatsApp Group