Aprilia Bike: ಯುವಕರೇ ಮಾರುಕಟ್ಟೆ ಬಂತು ಇನ್ನೊಂದು ಸ್ಪೋರ್ಟ್ ಬೈಕ್, ಈ ಬೈಕ್ ಮುಂದೆ KTM ಕೂಡ ಸೋತಿದೆ

ಸ್ಪೋರ್ಟ್ಸ್ ಬೈಕ್ ಲುಕ್ ಇರುವ ಹಾಗು ಬಹಳ ವಿಶೇಶತೆಯಿಂದ ಕೂಡಿರುವ ಹೊಸ ಬೈಕ್ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ, ಈ ಬೈಕ್ ಅನ್ನು ಇಂದೇ ಬುಕ್ ಮಾಡಿ

Aprilia RS 457 Bike: ಭಾರತೀಯ ಮಾರುಕಟ್ಟೆಯಲ್ಲಿ ಇಟಾಲಿಯನ್ ವಾಹನ ಕಂಪನಿಯ ಬೈಕ್ ಗಳು ಬಿಡುಗಡೆಗೊಳ್ಳಲಿದೆ. ಈ ಕಂಪನಿಯ ಬೈಕ್ ಭಾರತದಲ್ಲಿ ಬಹುಬೇಡಿಕೆ ಪಡೆಯುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಬಹುದು. ಇಟಾಲಿಯನ್ ವಾಹನ ತಯಾರಕ ಎಪ್ರಿಲಿಯಾ ತನ್ನ ಬಹುನಿರೀಕ್ಷಿತ ಎಪ್ರಿಲಿಯಾ RS 457 (Aprilia RS 457) ಬೈಕ್ ಅನ್ನು 2023ರ ಇಂಡಿಯಾ ಬೈಕ್ ವೀಕ್‌ನಲ್ಲಿ ಬಿಡುಗಡೆಗೊಳಿಸಿದೆ.

ಪಿಯಾಜಿಯೊ ಗ್ರೂಪ್‌ನ ಭಾಗವಾಗಿರುವ ಇಟಾಲಿಯನ್ ಸ್ಪೋರ್ಟ್ಸ್ ಬೈಕ್ (Sports Bike)ತಯಾರಕರು ಸೆಪ್ಟೆಂಬರ್‌ನಲ್ಲಿ ಸ್ಯಾನ್ ಮರಿನೋ ಮೋಟೋ ಜಿಪಿ ರೇಸ್‌ಗೆ ಮುನ್ನ ಮಿಸಾನೊ ರೇಸ್ ಟ್ರ್ಯಾಕ್‌ನಲ್ಲಿ ಆರ್‌ಎಸ್ 457 ಅನ್ನು ಆನಾವರಣಗೊಳಿಸಿದ್ದರು. ಎಪ್ರಿಲಿಯಾ RS 457 ಬೈಕನ್ನು ಇಟಲಿಯಲ್ಲಿ ವಿನ್ಯಾಸಗೊಳಿಸಿದ್ದರೆ, ಇದನ್ನು ಮಹಾರಾಷ್ಟ್ರದ ಎಪ್ರಿಲಿಯಾದ ಬಾರಾಮತಿ ಘಟಕದಲ್ಲಿ ಉತ್ಪಾದಿಸಲಾಗುತ್ತದೆ.

Aprilia RS 457 Bike
Image Credit: Cycleworld

ಎಪ್ರಿಲಿಯಾ RS 457 ಬೈಕ್ ನ ರಚನೆ

Aprilia RS 457 ಬೈಕ್ ಇದರ ಮುಂಭಾಗವು 120 ಎಂಎಂ ಟ್ರ್ಯಾವೆಲ್ ನೊಂದಿಗೆ ಮತ್ತು ಹಿಂಭಾಗವು 130 ಎಂಎಂ ವ್ಹೀಲ್ ಟ್ರಾವೆಲ್ ನೊಂದಿಗೆ ಬರುತ್ತದೆ. ಇನ್ನು ಎಪ್ರಿಲಿಯಾ RS 457 17-ಇಂಚಿನ ಅಲಾಯ್ ವ್ಹೀಲ್ ಗಳಲ್ಲಿ 110-ವಿಭಾಗ (ಮುಂಭಾಗ) ಮತ್ತು 150-ವಿಭಾಗದ (ಹಿಂಭಾಗ) TVS ಯುರೋಗ್ರಿಪ್ ಪ್ರೊಟಾರ್ಕ್ ಎಕ್ಸ್‌ಟ್ರೀಮ್ ಟೈರ್‌ಗಳೊಂದಿಗೆ ಬರುತ್ತದೆ ಹಾಗು ಈ ಬೈಕ್ 4-ಪಿಸ್ಟನ್ ರೇಡಿಯಲ್ ಕ್ಯಾಲಿಪರ್‌ಗಳೊಂದಿಗೆ 320 ಎಂಎಂ ಮುಂಭಾಗದ ಡಿಸ್ಕ್ ಮತ್ತು 2-ಪಿಸ್ಟನ್ ಸ್ಲೈಡಿಂಗ್ ಕ್ಯಾಲಿಪರ್‌ಗಳೊಂದಿಗೆ 220 ಎಂಎಂ ಹಿಂಭಾಗದ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

ಎಪ್ರಿಲಿಯಾ RS 457 (Aprilia RS 457) ಬೈಕ್ ನ ವೈಶಿಷ್ಟತೆಗಳು

Join Nadunudi News WhatsApp Group

ಎಪ್ರಿಲಿಯಾ RS 457 ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿದ್ದು, ರೈಡ್-ಬೈ-ವೈರ್ ಸಿಸ್ಟಮ್ ಹೊಂದಿದೆ. ಆದರೆ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಸವಾರರು ಬದಲಾಯಿಸಬಹುದಾದ ಮೂರು ಮೋಡ್‌ಗಳನ್ನು ಸಹ ನೀಡುತ್ತದೆ. ಇನ್ನು ಎಪ್ರಿಲಿಯಾದಿಂದ ಹೊಸ RS 457 ಫುಲ್ LED ಲೈಟಿಂಗ್ ಸಿಸ್ಟಮ್ ಜೊತೆಗೆ ಆಯ್ಕೆಯ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ 5-ಇಂಚಿನ TFT ಡಿಸ್ ಪ್ಲೇಯನ್ನು ಹೊಂದಿದೆ. ಈ ಹೊಸ ಎಪ್ರಿಲಿಯಾ RS 457 ಬೈಕ್ ಪ್ರಿಸ್ಮಾಟಿಕ್ ಡಾರ್ಕ್, ಓಪಲೆಸೆಂಟ್ ಲೈಟ್ ಮತ್ತು ರೇಸಿಂಗ್ ಸ್ಟ್ರೈಪ್ಸ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.ಇನ್ನು ಈ ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅಸಿಸ್ಟ್ ಅನ್ನು ನೀಡಲಾಗಿದೆ.

Aprilia RS 457 Bike Price
Image Credit: Aprilia

ಎಪ್ರಿಲಿಯಾ RS 457 (Aprilia RS 457) ಬೈಕ್ ನ ಎಂಜಿನ್

ಹೊಸ ಎಪ್ರಿಲಿಯಾ RS 457 ಬೈಕ್ 457cc, ಲಿಕ್ವಿಡ್-ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ DOHC ಎಂಜಿನ್ ಅನ್ನು ಆರು-ವೇಗದ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ 9,400 rpm ನಲ್ಲಿ 46 bhp ಪವರ್ ಮತ್ತು 6,700 rpm ನಲ್ಲಿ 43.5 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಎಪ್ರಿಲಿಯಾ RS 457 (Aprilia RS 457) ಬೈಕ್ ನ ಬೆಲೆ

ಈ ಹೊಸ ಎಪ್ರಿಲಿಯಾ RS 457 ಬೈಕಿನ ಪರಿಚಯಾತ್ಮಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.10 ಲಕ್ಷವಾಗಿದೆ. ಭಾರತದಲ್ಲಿ ತಯಾರಿಸಲಾದ ಎಪ್ರಿಲಿಯಾ RS 457 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ KTM RC390, ಯಮಹಾ R3 ಮತ್ತು ಕವಾಸಕಿ ನಿಂಜಾ 400 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Join Nadunudi News WhatsApp Group