Aprilia SR 160: ಎಲೆಕ್ಟ್ರಿಕ್ ಕ್ಷೇತ್ರದಲ್ಲಿ ಇನ್ನೊಂದು ಆವಿಷ್ಕಾರ, ಬಂತು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಎರಡು ಇರುವ ಸ್ಕೂಟರ್.

ಶೀಘ್ರದಲ್ಲೇ ಲಾಂಚ್ ಆಗಲಿದೆ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಎರಡು ಇರುವ ಸ್ಕೂಟರ್

Aprilia SR 160 Electric Scooter: ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ಹೆಚ್ಚಿದೆ ಎನ್ನಬಹುದು. ದೇಶದ ವಿವಿಧ ಜನಪ್ರಿಯ ಕಂಪನಿಗಳು ನೂತನ ಮಾದರಿಯ ಎಲೆಕ್ಟ್ರಿಕ್ ವಾಹನವನ್ನು ಪರಿಚಯಿಸಲು ಮುಂದಾಗುತ್ತಿದೆ.

ಇನ್ನು ಕಚ್ಚಾ ತೈಲಗಳ ಬೆಲೆಯ ಏರಿಕೆಯ ಕಾರಣ ಜನರು ಹೆಚ್ಚುತ್ Electric scooter ಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಇನ್ನು ನೀವು ಈಗ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಯೋಜಿಸುತ್ತಿದ್ದೀರಾ…? ಹಾಗಾದರೆ ಸ್ವಲ್ಪ ಸಮಯ ಕಾಯುವುದು ಉತ್ತಮ. ಏಕೆಂದರೆ ಈ ಕಂಪನಿಯು ಶೀಘ್ರದಲ್ಲೇ ನಿಮಗಾಗಿ ಬೆಸ್ಟ್ Electric Scooter ಅನ್ನು ಲಾಂಚ್ ಮಾಡಲಿದೆ.

Aprilia SR 160 Electric Scooter
Image Credit: Financialexpress

ಎಲೆಕ್ಟ್ರಿಕ್ ಕ್ಷೇತ್ರದಲ್ಲಿ ಇನ್ನೊಂದು ಆವಿಷ್ಕಾರ
ಇಟಲಿಯ ಪ್ರಸಿದ್ಧ ಕಂಪನಿ ಎಪ್ರಿಲಿಯಾ ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಸ್ಪ್ಲಾಶ್ ಮಾಡಲು ಹೊರಟಿದೆ. ಇಟಲಿಯ ಕಂಪನಿಯು ಬಿಡುಗಡೆಗೊಳಿಸಲಿರುವ ಸ್ಕೂಟರ್ ನ ಹೆಸರು ಎಪ್ರಿಲಿಯಾ ಪೆಟ್ರೋಲ್ ಸ್ಕೂಟರ್ SR 160 (Aprilia SR 160) ಆಗಿದೆ. ಪ್ರಸ್ತುತ, Aprilia SR 160 ರ ಪೆಟ್ರೋಲ್ ರೂಪಾಂತರ ಮಾತ್ರ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಅದಾಗ್ಯೂ, ಕಂಪನಿಯು 2026 ರ ವೇಳೆಗೆ ಇದನ್ನು ಪ್ರಾರಂಭಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಬಂತು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಎರಡು ಇರುವ ಸ್ಕೂಟರ್
ಎಪ್ರಿಲಿಯಾ ಎಸ್‌ಆರ್ 160 160 ಸಿಸಿ ಏರ್ ಕೂಲ್ಡ್, 3-ವಾಲ್ವ್ ಎಂಜಿನ್‌ ನೊಂದಿಗೆ ಬರುತ್ತದೆ. ಈ ಎಂಜಿನ್ 7600 rpm ನಲ್ಲಿ 10.84 bhp ಮತ್ತು 6000 rpm ನಲ್ಲಿ 11.6 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸ್ಕೂಟರ್‌ ನಲ್ಲಿ ಸಿವಿಟಿ ಗೇರ್‌ ಬಾಕ್ಸ್ ಅಳವಡಿಸಲಾಗಿದೆ. ಈ ಸ್ಕೂಟರ್ ಪ್ರತಿ ಲೀಟರ್‌ ಗೆ 35 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಗರಿಷ್ಠ ವೇಗ ಗಂಟೆಗೆ 90 ಕಿಲೋಮೀಟರ್ ಎಂದು ಹೇಳಲಾಗುತ್ತದೆ. ಈ ಸ್ಕೂಟರ್ ನ ಮೂಲಕ ನೀವು ದೀರ್ಘ ಪ್ರಯಾಣವನ್ನು ಕೂಡ ಮಾಡಬಹುದು. ನೀವು Aprilia SR 160 ಸ್ಕೂಟರ್ ಅನ್ನು ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ನ ಎರಡು ಮಾದರಿಯನ್ನು ಕೂಡ ಖರೀದಿಸಬಹುದು.

Aprilia SR 160 Electric Scooter Price
Image Credit: Overdrive

ಎಪ್ರಿಲಿಯಾ SR 160 ಗೆ ಸ್ಪೋರ್ಟಿ ವಿನ್ಯಾಸವನ್ನು ನೀಡಲಾಗಿದೆ. ಇದು ಎಲ್ಇಡಿ ಹೆಡ್ಲೈಟ್, ಟೈಲ್ಲೈಟ್ ಮತ್ತು ಡಿಆರ್ಎಲ್ಗಳನ್ನು ಹೊಂದಿದೆ. ಇದಲ್ಲದೆ, ಇದು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೊಂದಾಣಿಕೆಯ ಸಸ್ಪೆನ್ಷನ್ ಮತ್ತು ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ಗಳನ್ನು ಹೊಂದಿದೆ. ಏಪ್ರಿಲಿಯಾ SR 160 ಭಾರತೀಯ ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್, ರೇಸ್ ಮತ್ತು ಕಾರ್ಬನ್ ನ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಬೆಲೆ 1.33 ಲಕ್ಷದಿಂದ ಪ್ರಾರಂಭವಾಗಿ 1.43 ಲಕ್ಷಕ್ಕೆ ತಲುಪುತ್ತದೆ. ಬಜೆಟ್ ಬೆಲೆಯಲ್ಲಿ ಸ್ಕೂಟರ್ ಖರೀದಿಗಾಗಿ ಯೋಜಿಸುತ್ತಿರುವವರಿಗೆ ಈ ಬೈಕ್ ಆಯ್ಕೆಗೆ ಸಿಗಲಿದೆ.

Join Nadunudi News WhatsApp Group

Aprilia SR 160 Electric Scooter Mileage
Image Credit: Autocarindia

Join Nadunudi News WhatsApp Group