KASS: ಸರ್ಕಾರೀ ನೌಕರರು ನಗದು ರಹಿತ ಚಿಕಿತ್ಸೆ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ, ಸರ್ಕಾರದ ಆದೇಶ

ನಗದು ರಹಿತ ಚಿಕಿತ್ಸೆ ಗೆ ಒಳಪಡುವ ಎಲ್ಲ ಸರ್ಕಾರೀ ನೌಕರರು ಈ ಕೆಲಸ ಮಾಡುದು ಕಡ್ಡಾಯವಾಗಿದೆ.

Karnataka Arogya Sanjeevini Scheme: ದೇಶದಲ್ಲಿ ಸರ್ಕಾರೀ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಹಾಗೂ ಹಳೆಯ ಪಿಂಚಣಿ ಯೋಜನೆಯ ಅನುಷ್ಠಾನದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ತುಟ್ಟಿಭತ್ಯೆ ಹೆಚ್ಚಳದ ಖುಷಿಯಲ್ಲಿದ್ದ ಸರ್ಕಾರೀ ನೌಕರರು ಇನ್ನೇನು ಸದ್ಯದಲ್ಲೆ ಹಳೇ ಪಿಂಚಣಿ ವಿಷಯವಾಗಿ ಕೂಡ ಸಿಹಿಸುದ್ದಿ ಪಡೆಯಬಹುದು.

ಸದ್ಯ ಸರ್ಕಾರೀ ನೌಕರರಿಗೆ ಹೊಸ ಆರೋಗ್ಯ ಯೋಜನೆ ಜಾರಿಗೊಳಿಸುವ ಕುರಿತು ಘೋಷಣೆ ಹೊರಡಿಸಿದ್ದಾರೆ. ಈ ಹೊಸ ಯೋಜನೆಯು ರಾಜ್ಯದ ಸರ್ಕಾರೀ ನೌಕರರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ಸರ್ಕಾರೀ ನೌಕರರು ಈ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಈ ಕೆಲಸವನ್ನು ಮಾಡುವುದು ಕಡ್ಡಾಯವಾಗಿದೆ.

Karnataka Arogya Sanjeevini Scheme
Image Credit: Sarkari Yojanas

Karnataka Arogya Sanjeevini Scheme
ರಾಜ್ಯ ಸರ್ಕಾರ ಸರ್ಕಾರೀ ನೌಕರಿಗಾಗಿ Karnataka Arogya Sanjeevini Scheme (KASS ) ಅನ್ನು ಪರಿಚಯಿಸಿದೆ. ಕರ್ನಾಟಕ ರಾಜ್ಯ ಸರಕಾರಿ ನೌಕರರು(State Government Employees) ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ರಾಜ್ಯ ಸರ್ಕಾರವು ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ರೂಪಿಸಿದೆ.

ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಸೇವೆಯನ್ನು ಜಾರಿಗೆ ತರಲು ಖಾಸಗಿ ಆಸ್ಪತ್ರೆಗಳ ಜೊತೆ ನೂತನವಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ನಗದು ರಹಿತ ಆರೋಗ್ಯ ಸೇವೆಯಿಂದ ರಾಜ್ಯದ ಅಂದಾಜು 5 ಲಕ್ಷಕ್ಕೂ ಹೆಚ್ಚಿನ ಸರ್ಕಾರೀ ನೌಕರರು ಲಾಭವನ್ನು ಪಡೆಯಬಹುದು.

Arogya Sanjeevini Scheme In Karnataka
Image Credit: Original Source

ನಗದು ರಹಿತ ಚಿಕಿತ್ಸೆ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲು ನೂತನ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಲು, ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರನ್ನು ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳಲು ಎಚ್‌ ಆರ್‌ ಎಂಎಸ್‌ 1.0 ತಂತ್ರಜ್ಞಾನದಲ್ಲಿ https://hrms.karnataka .gov.in ಯುಆರ್ ಎಲ್ ಮೂಲಕ ಹಾಗೂ ಮೊಬೈಲ್ ಅಪ್ಲಿಕೇಶನ್ ನಲ್ಲಿ https://hrmsenroll.karnataka.gov.in ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ.

Join Nadunudi News WhatsApp Group

ವೈದ್ಯಕೀಯ ಹಾಜರಾತಿ ನಿಯಮಗಳ ಪ್ರಕಾರ ವಿತರಣಾ ಅಧಿಕಾರಿಗಳು ಪ್ರತಿ ಫಲಾನುಭವಿಯ ಡೇಟಾವನ್ನು ಪರಿಶೀಲಿಸಬೇಕು ಮತ್ತು ಅದನ್ನು ಸಾಫ್ಟ್‌ವೇರ್‌ನಲ್ಲಿ ಅನುಮೋದಿಸಬೇಕು. ನಂತರ ಅವರು ಚಿಕಿತ್ಸೆಗೆ ಅರ್ಹರಾಗುತ್ತಾರೆ. ಈ ಯೋಜನೆಗೆ ಒಳಪಡುವ ಎಲ್ಲಾ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) ಸಾಫ್ಟ್‌ ವೇರ್‌ ನಲ್ಲಿ ಮಾಹಿತಿಯನ್ನು ನಮೂದಿಸಬೇಕು ಎಂದು ಬೆಂಗಳೂರು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Nadunudi News WhatsApp Group