Arshdeep Singh: ಕ್ರಿಕೆಟ್ ಇತಿಹಾಸದಲ್ಲಿ ಯಾರು ಬರೆಯದ ದಾಖಲೆ ಸೃಷ್ಟಿಮಾಡಿದ ಅರ್ಶದೀಪ್ ಸಿಂಗ್, ಮೆಚ್ಚುಗೆಯ ಮಹಾಪೂರ

ಯಾರು ಮಾಡದ ಸಾಧನೆ ಮಾಡಿದ ವೇಗದ ಬೌಲರ್ ಅರ್ಶದೀಪ್ ಸಿಂಗ್.

Arshdeep Singh World Record In India And South Africa Match: ಕ್ರಿಕೆಟ್ ಅಭಿಮಾನಿಗಳಲ್ಲಿ ಈಗ ಸಧ್ಯಕ್ಕೆ ಅರ್ಶದೀಪ್ ಸಿಂಗ್ (Arshdeep Singh) ಅವರ ಬಗ್ಗೆಯೇ ಮಾತುಕತೆ ಯಾಕೆಂದರೆ ಇವರು ಕ್ರಿಕೆಟ್ ಇತಿಹಾಸದಲ್ಲೇ ಯಾರು ಮಾಡದ ದಾಖಲೆಯನ್ನು ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಟೀಮ್ ಇಂಡಿಯಾದ ವೇಗದ ಬೌಲರ್ ಅರ್ಶದೀಪ್ ಸಿಂಗ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ತಮ್ಮ ವೃತ್ತಿ ಜೀವನದಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

Arshdeep Singh New Updates
Image Credit: Live Mint

ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಅರ್ಶದೀಪ್ ಸಿಂಗ್

ಹೌದು, ಇಲ್ಲಿಯವರೆಗೆ ಯಾರು ಮಾಡದ ಸಾಧನೆ ಮಾಡಿದ ಭಾರತ ತಂಡದ ವೇಗದ ಬೌಲರ್ ಅರ್ಶದೀಪ್ ಸಿಂಗ್ ಅವರು ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಸೈ ಅನ್ನಿಸಿಕೊಂಡರು. ಪಂದ್ಯದಲ್ಲಿ ಅರ್ಶದೀಪ್ ಸಿಂಗ್ 10 ಓವರ್ ಬೌಲ್ ಮಾಡಿ 37 ರನ್ ನೀಡಿ 5 ವಿಕೆಟ್ ಪಡೆದರು. ಇನ್ನು ಅರ್ಶದೀಪ್ ಹೊರತಾಗಿ ಅವೇಶ್ ಖಾನ್ ಕೂಡ ಅದ್ಭುತವಾಗಿ ಬೌಲಿಂಗ್ ಮಾಡಿ 4 ವಿಕೆಟ್ ಪಡೆದರು. ಈ ಮೊದಲು, ದಕ್ಷಿಣ ಆಫ್ರಿಕಾದಲ್ಲಿ ಆಫ್ರಿಕನ್ ತಂಡದ ವಿರುದ್ಧ ಆಡುವಾಗ ಯಾವುದೇ ಭಾರತೀಯ ವೇಗದ ಬೌಲರ್ ಈ ಸಾಧನೆ ಮಾಡಿರಲಿಲ್ಲ.

Arshdeep Singh World Record
Image Credit: Cricinformer

ಅಂತರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಮೊದಲ ಬಾರಿಗೆ 5 ವಿಕೆಟ್ ಪಡೆದ ಸಾಧನೆ

Join Nadunudi News WhatsApp Group

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಭಾರತದ ಏಕೈಕ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಅರ್ಶದೀಪ್ ಪಾತ್ರರಾಗಿದ್ದಾರೆ. ಅರ್ಶದೀಪ್ ದಕ್ಷಿಣ ಆಫ್ರಿಕಾದಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಮೂರನೇ ಬೌಲರ್ ಆಗಿದ್ದಾರೆ.

ಅರ್ಶ್‌ದೀಪ್‌ ಗೂ ಮುನ್ನ ಆಶಿಶ್ ನೆಹ್ರಾ 2003ರ ವಿಶ್ವಕಪ್‌ ನಲ್ಲಿ ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಪಪಡೆದಿದ್ದಾರೆ, 2018 ರಲ್ಲಿ ಯುಜುವೇಂದ್ರ ಚಾಹಲ್ ಸೆಂಚುರಿಯನ್‌’ನಲ್ಲಿ 5 ವಿಕೆಟ್ ಪಡೆದಿದ್ದರು. ಇನ್ನೊಂದೆಡೆ ಅರ್ಶದೀಪ್ ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಮೊದಲ ಬಾರಿಗೆ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಒಟ್ಟಾರೆಯಾಗಿ ಈಗ ಎಲ್ಲಾ ಕಡೆ ಅರ್ಶದೀಪ್ ಸಿಂಗ್ ಅವರ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಗುತ್ತಿದೆ.

Join Nadunudi News WhatsApp Group