Ashraya Yojana: ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್, ಇಂದೇ ಅರ್ಜಿ ಸಲ್ಲಿಸಿ ಸರ್ಕಾರದಿಂದ ಮನೆ ಪಡೆದುಕೊಳ್ಳಿ.

ಆಶ್ರಯ ಯೋಜನೆಯ ಅಡಿಯಲ್ಲಿ ಅರ್ಜಿ ಕರೆದಿದ್ದು ಜನರು ಅರ್ಜಿ ಸಲ್ಲಿಸುವುದರ ಮೂಲಕ ಮನೆ ಪಡೆದುಕೊಳ್ಳಬಹುದು.

Ashraya Yojana Apllication Process: ಇದೀಗ ಮನೆ ನಿರೀಕ್ಷೆಯಲ್ಲಿದ್ದವರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಮನೆ ನಿರೀಕ್ಷೆಯಲ್ಲಿದ್ದವರಿಗೆ ಇದೀಗ ಆಶ್ರಯ ಯೋಜನೆಯಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸಾಕಷ್ಟು ಬಡ ಕುಟುಂಬಗಳು ಈಗಲೂ ಸಹ ಮನೆ ಇಲ್ಲದೆ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಇಂತಹವರಿಗೆ ಸರ್ಕಾರ ಮನೆಯ ಸೌಲಭ್ಯ ಒದಗಿಸಿಕೊಡುವುದಾಗಿ ಹೇಳಿದೆ.

ಮನೆ ಇಲ್ಲದಿರುವವರಿಗೆ ಅರ್ಜಿ ಸಲ್ಲಿಸಲು ಹೊಸ ಸುದ್ದಿ
ಇದೀಗ ಶಿವಮೊಗ್ಗ ಮಹಾನಗರ ಪಾಲಿಕೆಯು ನಗರದ ಗೋಪಿ ಶೆಟ್ಟಿ ಕೊಪ್ಪ ಗ್ರಾಮದ ಒಟ್ಟು 19 .23 ಎಕರೆ ಜಮೀನಿನಲ್ಲಿ ಜಿ + 2 ಮಾದರಿಯ ಮನೆಗಳನ್ನು ನಗರದಲ್ಲಿ ಮನೆ ಇಲ್ಲದವರಿಗೆ ಹಂಚುವ ಸಲುವಾಗಿ ಹೊಸದಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಅರ್ಜಿ ಆಹ್ವಾನಿಸಿದೆ. ಇದಕ್ಕೆ ಅರ್ಜಿ ಸಲ್ಲಿಸುವವರು ಶಿವಮೊಗ್ಗ ನಗರ ಪ್ರದೇಶದಲ್ಲಿ ವಾಸವಾಗಿರಬೇಕು. ಬಿ.ಪಿ. ಎಲ್ ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರಬೇಕು.

Call for applications under Ashray Scheme.
Image Credit: Ashraya.Karnataka.Gov

ಅರ್ಜಿದಾರರಿಗೆ ಇರಬೇಕಾದ ನಿಯಮಗಳು
ಅರ್ಜಿದಾರರು ಅಥವಾ ಅವರ ಕುಟುಂಬದವರು ಸ್ವಂತ ಮನೆಯನ್ನು ಹೊಂದಿರಬಾರದು. ಅರ್ಜಿಯನ್ನು ಮಹಿಳಾ ಫಲಾನುಭವಿಯ ಹೆಸರಿನಲ್ಲಿಯೇ ಸಲ್ಲಿಸುವುದು. ಇನ್ನು ಅರ್ಜಿದಾರರು ಪುರುಷ ಸೈನಿಕರಾಗಿದ್ದರೆ ಅವರು ಮಾಜಿ ಸೈನಿಕ, ವಿಕಲಚೇತನ, ಸ್ವಾತಂತ್ರ್ಯ ಯೋಧ, ವಿಧುರ ಹಾಗು ಹಿರಿಯ ನಾಗರೀಕರಾಗಿರಬೇಕು.

ಅಲ್ಲದೆ ಬೇರೆ ಯಾವುದೇ ಯೋಜನೆಯಡಿಯಲ್ಲಿ ಮನೆಯ ಸೌಲಭ್ಯವನ್ನು ಪಡೆದಿರಬಾರದು ಹಾಗು ಈ ಹಿಂದೆ ಯಾವುದಾದರೂ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ವಿವರ ನೀಡುವುದು ಅವಶ್ಯಕವಾಗಿದೆ. ಇನ್ನು ವಾರ್ಷಿಕವಾಗಿ 86,700 ರೂಪಾಯಿಯ ಆದಾಯ ಹೊಂದಿರಬೇಕು.

Call for applications under Ashray Scheme.
Image Credit: Ashraya.Karnataka.Gov

ಅರ್ಜಿ ಸಲ್ಲಿಸುವವರು ಪಾಲಿಕೆ ವೆಬ್ ಸೈಟ್ shivamoggacitycorp.org ಆಶ್ರಯ ಯೋಜನೆ ಅಪ್ಲಿಕೇಶನ್ ನಲ್ಲಿ ಸೆಪ್ಟೆಂಬರ್ 30 ರೊಳಗೆ ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 07 ರೊಳಗಾಗಿ ಬ್ಯಾಂಕ್ ಮೂಲಕ ನಿಗದಿತ ಶುಲ್ಕವನ್ನು ಪಾವತಿಸುವಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Join Nadunudi News WhatsApp Group

Join Nadunudi News WhatsApp Group