Ashwini Puneeth Rajkumar: ಅಶ್ವಿನಿ ಪುನೀತ್‌ ರಾಜ್‌ ಕುಮಾರ್ ಖರೀದಿಸಿದ ಕಾರಿನ ಬೆಲೆ ಎಷ್ಟು ಗೋತ್ತಾ..? ಐಷಾರಾಮಿ ಕಾರ್

ಐಷಾರಾಮಿ ಕಾರ್ ಖರೀದಿಸಿದ ಅಪ್ಪು ಪತ್ನಿ, ಕಾರಿನ ಬೆಲೆ ಎಷ್ಟು ಗೋತ್ತಾ..?

Ashwini Puneeth Rajkumar New Audi Car: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಪುನೀತ್ ಅವರ ನಿಧನದ ಬಳಿಕ ಅಶ್ವಿನಿ ಅವರು ಪುನೀತ್ ಅವರು ಈ ಹಿಂದೆ ಮಾಡಿಕೊಂಡು ಬಂದಿದ್ದ ಎಲ್ಲ ಕೆಲಸಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಇನ್ನು PRK ಪ್ರೊಡಕ್ಷನ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಹೊಸ ಹೊಸ ಪ್ರತಿಭೆಗಳಿಗೆ ಅವಕಾಶವನ್ನು ನೀಡುತ್ತಿದ್ದಾರೆ.

ಯಶಸ್ವಿ ನಿರ್ಮಾಪಕಿಯಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಗುರುತಿಸಿಕೊಂಡಿದ್ದಾರೆ. ಸದ್ಯ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹೊಸ ಐಷಾರಾಮಿ ಕಾರ್ ಖರೀದಿಸಿರುವ ಬಗ್ಗೆ ಸಿದ್ದು ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅಸ್ವಿನಿ ಪುನೀತ್ ರಾಜ್ ಕುಮಾರ್ ಅವರು ಕಾರ್ ಜೊತೆ ನಿಂತಿರುವ ಫೋಟೋ ಕೂಡ ವೈರಲ್ ಆಗುತ್ತಿದೆ.

Ashwini Puneeth Rajkumar New Car
Image Credit: Vijay Karnataka

ಐಷಾರಾಮಿ ಕಾರ್ ಖರೀದಿಸಿದ ಅಪ್ಪು ಪತ್ನಿ
ಸೆಲೆಬ್ರೆಟಿಗಳು ಸಾಮಾನ್ಯವಾಗಿ ಐಷಾರಾಮಿ ಕಾರ್ ಗಳ ಬಗ್ಗೆ ಹೆಚ್ಚು ಒಲವು ತೋರಿಸುತ್ತಾರೆ. ಪುನೀತ್ ಅವರಿಗೂ ಆಶಾರಾಮಿ ಕಾರ್ ಗಳ ಬಗ್ಗೆ ಒಲವು ಹೆಚ್ಚಿತ್ತು. ಇದೀಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಐಷಾರಾಮಿ ಆಡಿ ಕ್ಯೂ7 ಕಾರನ್ನು ಖರೀದಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊಸ ಕಾರಿನೊಂದಿಗೆ ನಿಂತಿರುವ ಫೋಟೋವನ್ನು ಆಡಿ ಬೆಂಗಳೂರು ಫೇಸ್‌ ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಅಶ್ವಿನಿ ಪುನೀತ್‌ ರಾಜ್‌ ಕುಮಾರ್ ಗ್ರೇ ಬಣ್ಣದ ಆಡಿ ಕ್ಯೂ7 ಕಾರನ್ನು ಖರೀದಿಸಿದ್ದಾರೆ.

ಅಶ್ವಿನಿ ಪುನೀತ್‌ ರಾಜ್‌ ಕುಮಾರ್ ಖರೀದಿಸಿದ ಕಾರಿನ ಬೆಲೆ ಎಷ್ಟು ಗೋತ್ತಾ..?
ಅಶ್ವಿನಿ ಪುನೀತ್‌ ರಾಜ್‌ ಕುಮಾರ್ ಖರೀದಿಸಿದ ಕಾರಿನ ಬೆಲೆ 1.10 ಕೋಟಿಯಿಂದ 1.20 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಅಶ್ವಿನಿ ಅವರು ಆಡಿ ಕ್ಯೂ7 ಟಾಪ್ ಎಂಡ್ ಮಾದರಿಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರ್ ಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.

ಏರ್ ಬ್ಯಾಗ್, ಕ್ಯಾಮೆರಾ, ಎಡಿಎಎಸ್ ತಂತ್ರಜ್ಞಾನ, ರೋಡ್ ಗ್ರಿಪ್, ಪೈಲಟ್ ಸೀಟುಗಳು, ಮಸಾಜರ್ ಇರುವ ಸೀಟುಗಳು, ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಧುನಿಕ ತಂತ್ರಜ್ಞಾನ ಶಾಕ್ ಅಬ್ಸಾರ್ಬರ್‌ಗಳು, ಕಡಿಮೆ ಸೆಕೆಂಡುಗಳಲ್ಲಿ 100 ಕಿಮೀ ವೇಗವನ್ನು ದಾಟುವ ಸಾಮರ್ಥ್ಯವನ್ನು ಈ ಕಾರು ಹೊಂದಿದೆ.

Join Nadunudi News WhatsApp Group

Ashwini Puneeth Rajkumar Luxury Car
Image Credit: News First Live

Join Nadunudi News WhatsApp Group