Election Duty: ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಸರ್ಕಾರೀ ನೌಕರರು ಅರೆಸ್ಟ್, ಹೊಸ ನಿಯಮ.

ಚುನಾವಣಾ ಕರ್ತವ್ಯ ಪಾಲಿಸದ ನೌಕರರನ್ನ ಜೈಲಿಗೆ ಹಾಕಲು ಆದೇಶವನ್ನ ಹೊರಡಿಸಲಾಗಿದೆ.

Assembly Election Duty Rules: ರಾಜ್ಯ ವಿಧಾನಸಭಾ ಚುನಾವಣೆ (Assembly Election) ಹತ್ತಿರವಾಗುತ್ತಿದೆ. ಚುನಾವಣೆ ಹತ್ತಿರಾವಾಗುತ್ತಿದ್ದಂತೆ ಚುನಾವಣಾ ನೀತಿ ಸಂಹಿತೆ ಕೂಡ ಜಾರಿಗೆ ಬಂದಿದೆ. ಇನ್ನು ಚುನಾವಣೆಯ ಕಾರಣ ಸಾಕಷ್ಟು ನಿಯಮಗಳು ಕೂಡ ಜಾರಿಗೆ ಬಂದಿವೆ.

ಇದೀಗ ಸರ್ಕಾರೀ ನೌಕರರಿಗೆ (Government Employee) ಚುನಾವಣೆಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಯಾಗಿದೆ. ಈ ಬಗ್ಗೆ ಮಾಹಿತಿ ತಿಳಿಯೋಣ. ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ನಿಗದಿಯಾಗಿದೆ. ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ.

An order has been issued to imprison employees who do not fulfill their election duties.
Image Credit: outlookindia

ಚುನಾವಣೆ ಹತ್ತಿರವಾಗುತ್ತಿದಂತೆ ರಾಜಕೀಯ ಮುಖಂಡರು ತಮ್ಮ ತಮ್ಮ ಪಕ್ಷದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಚುನಾವಣಾ ಕರ್ತವ್ಯಕ್ಕೆ ಭಾಗಿಯಾಗದ ಸರ್ಕಾರೀ ನೌಕರರಿಗೆ ಚುನಾವಣಾ ಆಯೋಗ ಬಿಗ್ ಶಾಕಿಂಗ್ ನ್ಯೂಸ್ ನೀಡಲಿದೆ.

ಚುನಾವಣಾ ಕರ್ತವ್ಯಕ್ಕೆ ಭಾಗಿಯಾಗದ ಸರ್ಕಾರೀ ನೌಕರರು ಅರೆಸ್ಟ್
ರಾಜ್ಯ ವಿಧಾನಸಭಾ ಚುನಾವಣೆಗೆ ಎಲ್ಲ ಸರ್ಕಾರೀ ನೌಕರರು ಕೂಡ ಹಾಜರಿರಬೇಕು. ಚುನಾವಣಾ ಕರ್ತವ್ಯವನ್ನು ಯಾರು ಕೊಡ ನಿರಾಕರಿಸುವಂತಿಲ್ಲ. ಒಂದು ವೇಳೆ ಚುನಾವಣಾ ಕರ್ತವ್ಯಕ್ಕೆ ಬರದೇ ಇದ್ದರೆ ಪೊಲೀಸರು ಮನೆಗೆ ಬಂದು ಸರ್ಕಾರೀ ನೌಕರರನ್ನು ಅರೆಸ್ಟ್ ಮಾಡಲಾಗುತ್ತದೆ.

An order has been issued to arrest the employees who do not turn up for election duty
Image Credit: theguardian

ಚುನಾವಣಾ ಆಯೋಗಕ್ಕೆ ಈಗಾಗಲೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಯಾವುದೇ ಕಾರಕ್ಕೂ ಸುಳ್ಳು ಹೇಳಿ ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳುವಂತಿಲ್ಲ. ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಂಡರೆ ಎಫ್ ಐಆರ್ ಧಾಖಲಿಸಿ ಅರೆಸ್ಟ್ ಮಾಡಲಾಗುವುದು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

Join Nadunudi News WhatsApp Group

ಚುನಾವಣಾ ಕರ್ತವ್ಯದಿಂದ ದೂರ ಇರಲು ಯಾರಿಗೆ ವಿನಾಯಿತಿ ಇದೆ
ಎಲ್ಲ ಜಿಲ್ಲೆಯ ಚುನಾವಣಾ ಅಧಿಕಾರಿಗಳಿಗೆ ಈ ಬಗ್ಗೆ ಚುನಾವಣಾ ಆಯೋಗವು ಮಾಹಿತಿ ನೀಡಿದೆ. ಹೆರಿಗೆ ಹಂತದಲ್ಲಿರುವ ಗರ್ಭಿಣಿಯರು, 3 ಅಥವಾ 4 ತಿಂಗಳು ಅವಧಿಯ ನಿವೃತ್ತಿ ಅಂಚಿನಲ್ಲಿರುವವರು ಹಾಗೂ ಗಂಭೀರವಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮಾತ್ರ ಚುನಾವಣಾ ಕರ್ತವ್ಯದಿಂದ ರಿಯಾಯಿತಿ ನೀಡಲಾಗುವುದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಚುನಾವಣಾ ಕರ್ತವ್ಯದಿಂದ ದೂರ ಇರಲು ಮೇಲಧಿಕಾರಿಗಳ ಮೂಲಕ ಹೇಳಿಸಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಸದ್ಯ ಸರ್ಕಾರದ ಈ ನಿಯಮ ಕೆಲವು ನೌಕರರ ಗೊಂದಲಕ್ಕೆ ಮತ್ತು ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

Join Nadunudi News WhatsApp Group