APY Update: ಹೂಡಿಕೆ ಕೇವಲ 42 ರೂ, ಆದರೆ ಪಿಂಚಣಿ ಭರ್ಜರಿ 12000 ರೂ, ಕೇಂದ್ರದ ಯೋಜನೆಗೆ ಜನರು ಫಿದಾ.

ಕೇಂದ್ರ ಸರ್ಕಾರದ ಈ ಯೋಜನೆಯಡಿ ಕೇವಲ 42 ರೂ ಹೂಡಿಕೆ ಮಾಡುವ ಮೂಲಕ ಭರ್ಜರಿ ಪಿಂಚಣಿಯನ್ನು ಪಡೆಯಬಹುದು

Atal Pension Investment: ಜನರ ಈ ಅಗತ್ಯವನ್ನು ಪೂರೈಸುವ ಸಲುವಾಗಿ ಸರ್ಕಾರ ಹೂಡಿಕೆಗಾಗಿ ಹೊಸ ಹೊಸ ಯೋಜನೆಯನ್ನು ಪರಿಚಯಿಸುತ್ತಿದೆ. ಅವುಗಳಲ್ಲಿ Atal Pension Scheme ಕೂಡ ಒಂದಾಗಿದೆ. ಈ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಪ್ರಾರಂಭಿಸಿದ್ದಾರೆ.

ಈ ಯೋಜನೆ ಜನರ ಭವಿಷ್ಯಕ್ಕೆ ಆರ್ಥಿಕವಾಗಿ ಸಹಾಯವಾಗಲಿದೆ. ನೀವು ನಿವೃತ್ತಿಯ ನಂತರದ ಜೀವನಕ್ಕಾಗಿ APY ನಲ್ಲಿ ಹೂಡಿಕೆ ಮಾಡುವುದು ಉತ್ತಮ. ಈಗಾಗಲೇ ಸಾಕಷ್ಟು ಜನರು ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾ ಪಿಂಚಣಿಯ ಹಣವನ್ನು ಪಡೆಯುತ್ತಿದ್ದಾರೆ.

Atal Pension Yojana Latest
Image Credit: The Economic Times

ಕೇಂದ್ರದ ಬೆಸ್ಟ್ ಪೆನ್ಶನ್ ಸ್ಕೀಮ್ ಗೆ ಇಂದೇ ಅರ್ಜಿ ಸಲ್ಲಿಸಿ
APY ಕೇಂದ್ರ ಸರ್ಕಾರದ ಬೆಸ್ಟ್ ಯೋಜನೆಯಾಗಿದೆ. Atal Pension ಯೋಜನೆಯ ಅಡಿಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ ಪಿಂಚಣಿ ಲಭ್ಯವಾಗಲಿದೆ. ನೀವು ಈ ಯೋಜನೆಗಳಲ್ಲಿ ಎಷ್ಟು ಬೇಗ ಹೂಡಿಕೆ ಮಾಡುತ್ತಿರೋ ಅಷ್ಟು ಹೆಚ್ಚು ಹಣವನ್ನು ಪಡೆಯುವ ಅವಕಾಶ ಇರುತ್ತದೆ.

ಈ ಯೋಜನೆಯಲ್ಲಿ ಹೂಡಿಕೆದಾರರು 60 ವರ್ಷ ವಯಸ್ಸಿನವರಾದಾಗ ಪ್ರತಿ ತಿಂಗಳು 1,000 ರೂ. ನಿಂದ 5,000 ರೂ.ವರೆಗೆ ಪಿಂಚಣಿ ಪಡೆಯಬಹುದಾಗಿದೆ. ಈ ಯೋಜನೆಯು 22 ವರ್ಷಗಳ ಹೂಡಿಕೆಯ ಅವಧಿಯನ್ನು ಪಡೆದುಕೊಂಡಿದೆ. ಅಟಲ್ ಪಿಂಚಣಿ ಯೋಜನೆಯಲ್ಲಿ 18 ರಿಂದ 42 ವರ್ಷದೊಳಗಿನವರು ಹೂಡಿಕೆ ಮಾಡಬಹುದಾಗಿದೆ.

Atal Pension Investment
Image Credit: business-standard

ಹೂಡಿಕೆ ಕೇವಲ 42 ರೂ, ಆದರೆ ತಿಂಗಳ ಪಿಂಚಣಿ ಭರ್ಜರಿ 12000 ರೂ.
ಪ್ರತಿ ತಿಂಗಳು ಕೇವಲ 210 ರೂಪಾಯಿಗಳನ್ನು ಠೇವಣಿ ಮಾಡುವ ಮೂಲಕ, ನೀವು ನಿವೃತ್ತಿಯ ನಂತರ ಅಂದರೆ 60 ವರ್ಷಗಳ ನಂತರ ಪ್ರತಿ ತಿಂಗಳು ಗರಿಷ್ಠ 5,000 ರೂಪಾಯಿಗಳ ಪಿಂಚಣಿ ಪಡೆಯಬಹುದು. ನಿಯಮಗಳ ಪ್ರಕಾರ, 18 ವರ್ಷ ವಯಸ್ಸಿನಲ್ಲಿ ಮಾಸಿಕ ಪಿಂಚಣಿಗೆ ಗರಿಷ್ಠ 5,000 ರೂ.ಗಳನ್ನು ಸೇರಿಸಿದರೆ ನೀವು ಪ್ರತಿ ತಿಂಗಳು 210 ರೂ. ಹೂಡಿಕೆ ಮಾಡಬೇಕಾಗುತ್ತದೆ.

Join Nadunudi News WhatsApp Group

ಪ್ರತಿ ಮೂರು ತಿಂಗಳಿಗೊಮ್ಮೆ ಇದೇ ಮೊತ್ತವನ್ನು ಪಾವತಿಸಿದರೆ 626 ರೂ. ಆಗುತ್ತದೆ. ಆರು ತಿಂಗಳಿಗೊಮ್ಮೆ ಪಾವತಿಸಿದರೆ 1,239 ರೂ. ಆಗುತ್ತದೆ. ತಿಂಗಳಿಗೆ 1,000 ರೂಪಾಯಿ ಪಿಂಚಣಿ ಪಡೆಯಲು, ನೀವು 18 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಿದರೆ, ನೀವು ತಿಂಗಳಿಗೆ 42 ರೂ. ಹೂಡಿಕೆ ಮಾಡಬೇಕಾಗುತ್ತದೆ.ಈ ಹೂಡಿಕೆಯು ನಿಮಗೆ ಮಾಸಿಕ 1000 ರೂ. ಪಿಂಚಣಿ ಸಿಗುತ್ತದೆ. ಇದರಿಂದಾಗಿ ವಾರ್ಷಿಕವಾಗಿ ನೀವು APY ಯಲ್ಲಿ 12000 ಪಿಂಚಣಿಯ ಲಾಭವನ್ನು ಪಡೆಯಬಹುದು.

Join Nadunudi News WhatsApp Group