40 ವರ್ಷ ಮೇಲ್ಪಟ್ಟ ಜನರಿಗೆ ಪ್ರತಿ ತಿಂಗಳು ಸಿಗಲಿದೆ 1000 ರೂ, ಇಂದೇ ಅರ್ಜಿ ಸಲ್ಲಿಸಿ, ಹೊಸ ಯೋಜನೆ.

ದೇಶದ ಬಡಜನರ ಅನುಕೂಲದ ಉದ್ದೇಶದಿಂದ ಮತ್ತು ಭವಿಷ್ಯದಲ್ಲಿ 40 ವರ್ಷ ಮೇಲ್ಪಟ್ಟ ಜನರು ಯಾವುದೇ ಸಮಸ್ಯೆಯನ್ನ ಅನುಭವಿಸಬಾರದು ಅನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಈಗಾಗಲೇ ಹಲವು ಯೋಜನೆಯನ್ನ ಜಾರಿಗೆ ತಂದಿದೆ. ಜನರ ಅನುಕೂಲದ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಪಿಂಚಣಿ ಯೋಜನೆಯನ್ನ ಜಾರಿಗೆ ತಂದಿದ್ದು ಅದೆಷ್ಟೋ ಜನರಿಗೆ ಈ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿಯತನಕ ದೊರೆತಿಲ್ಲ. ನಿಮಗೆ 40 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ ನೀವು ಪ್ರತಿ ತಿಂಗಳು ಈ ಪಿಂಚಣಿ ಯೋಜನೆಯ ಅಡಿಯಲ್ಲಿ 1000 ಸಾವಿರ ರೂಪಾಯಿ ಪಿಂಚಣಿ ಹಣವನ್ನ ಪಡೆದುಕೊಳ್ಳಬಹುದು.

ಪ್ರತಿ ತಿಂಗಳು 1000 ರೂಪಾಯಿ ಪಿಂಚಣಿ ಪಡೆಯಲು ಏನು ಮಾಡಬೇಕು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ನೀವು ಈ ಸೌಲಭ್ಯ ಪಡೆಯೋಕೆ ನೀವು ಅಟಲ್ ಪಿಂಚಣಿ ಯೋಜನೆಗೆ ಸೇರಬೇಕು. ಅಟಲ್ ಪಿಂಚಣಿ ಯೋಜನೆಗೆ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ ಎಂದು ಹೇಳಬಹುದು. ಮಾಹಿತಿಯ ಪ್ರಕಾರ, ಸುಮಾರು 4 ಕೋಟಿ ಜನರು ಯೋಜನೆಗೆ ಸೇರಿದ್ದಾರೆ. ಇನ್ನು ಈ ಯೋಜನೆಯಡಿ ವೃದ್ಧಾಪ್ಯ ಪಿಂಚಣಿ ಪಡೆಯಲು, ಅರ್ಜಿದಾರರು ಪ್ರತಿ ತಿಂಗಳು ಹಣ ಠೇವಣಿ ಇಡಬೇಕಾಗುತ್ತೆ. ವಾಸ್ತವವಾಗಿ, ಈ ಯೋಜನೆಗೆ ಸೇರುವ ವಯಸ್ಸು 18 ರಿಂದ 40 ವರ್ಷಗಳು. ಹಾಗಾಗಿ 40 ವರ್ಷಕ್ಕಿಂತ ಮೇಲ್ಪಟ್ಟ ಜನ ಈ ಯೋಜನೆಗೆ ಸೇರಲು ಸಾಧ್ಯವಿಲ್ಲ.

Atal pension news

ಇನ್ನು ಈ ಯೋಜನೆಯಲ್ಲಿ ಪಿಂಚಣಿ ಲಾಭ ಪಡೆಯೋಕೆ ನೀವು ಕನಿಷ್ಠ 20 ವರ್ಷಗಳ ಕಾಲ ಇದರಲ್ಲಿ ಹೂಡಿಕೆ ಮಾಡಬೇಕು ಮತ್ತು ನಿಮಗೆ 60 ವರ್ಷವಾದಾಗ ನೀವು ಈ ಯೋಜನೆಯ ಪ್ರಯೋಜನ ಪಡೆಯಲು ಪ್ರಾರಂಭಿಸುತ್ತೀರಿ. ಅರ್ಜಿದಾರರು ಎಷ್ಟು ಪಿಂಚಣಿ ಹಣವನ್ನ ಪಡೆಯಬಹುದು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಅರ್ಜಿದಾರರ ವಯಸ್ಸು 18 ವರ್ಷತವಾಗಿದ್ದರೆ ಅರ್ಜಿದಾರರು ತಿಂಗಳಿಗೆ ರೂ 210 ಹೂಡಿಕೆ ಮಾಡಬಹುದು. ಅಂತಹವರು 60 ವರ್ಷ ವಯಸ್ಸಿನಿಂದ ತಿಂಗಳಿಗೆ 5,000 ರೂಪಾಯಿ ಪಿಂಚಣಿ ಪಡೆಯುತ್ತಾರೆ.

ಇನ್ನು ಅರ್ಜಿದಾರರು 1,000 ರೂಪಾಯಿ ಪಿಂಚಣಿ ಪಡೆಯಲು ಬಯಸಿದರೆ ಅರ್ಜಿದಾರರು 18 ವರ್ಷ ವಯಸ್ಸಿನಿಂದ ತಿಂಗಳಿಗೆ 42 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಆಕಸ್ಮತ್ ಠೇವಣಿದಾರ ಪತಿ 60 ವರ್ಷಕ್ಕಿಂತ ಮೊದ್ಲೇ ಮರಣ ಹೊಂದಿದರೆ ಈ ಪಿಂಚಣಿಯ ಹಣವನ್ನ ಹೆಂಡತಿಗೆ ನೀಡಲಾಗುತ್ತೆ ಮತ್ತು ಪತಿ ಪತ್ನಿ ಇಬ್ಬರು ಸಾವನ್ನಪ್ಪಿದರೆ ನಾಮಿನಿಗೆ ಸಂಪೂರ್ಣ ಹಣವನ್ನು ಹಿಂತಿರುಗಿಸಲಾಗುತ್ತೆ. ಅಂದಹಾಗೆ ನೀವು ಕೂಡ ಈ ಯೋಜನೆಗೆ ಸೇರಲು ಇಚ್ಚಿಸಿದರೆ ಹತ್ತಿರದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ʼನಲ್ಲಿ ಖಾತೆ ಹೊಂದಿರಬೇಕು. ಅಲ್ಲಿ ಅಟಲ್‌ ಪಿಂಚಣಿ ಯೋಜನೆಯ ಅರ್ಜಿ ತುಂಬುವುದರ ಮೂಲಕ ಯೋಜನೆಗೆ ಸೇರಬೋದು. ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ ಮತ್ತು ನೀವು ಕೂಡ ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸಿಲ್ಲವೆಂದರೆ ಇಂದೇ ಅರ್ಜಿ ಸಲ್ಲಿಸಿ.

Join Nadunudi News WhatsApp Group

Atal pension news

Join Nadunudi News WhatsApp Group