Pension Scheme: ಈ ಯೋಜನೆಯಲ್ಲಿ ಕೇವಲ 210 ರೂ ಹೂಡಿಕೆ ಮಾಡಿದ್ರೆ 60 ವರ್ಷದ ನಂತರ ಸಿಗಲಿದೆ ತಿಂಗಳಿಗೆ 60,000 ರೂ.

ಈ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ಸಿಗಲಿದೆ 60000 ರೂ ಪಿಂಚಣಿ

Atal Pension Yojana: ಜನಸಾಮಾನ್ಯರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಹೂಡಿಕೆಯ ಯೋಜನೆಯನ್ನು ಪರಿಚಯಿಸುತ್ತಿವೆ. ಸಾಮಾನ್ಯವಾಗಿ ಜನರು ತಮ್ಮ ಮುಂದಿನ ಭವಿಷ್ಯಕ್ಕಾಗಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಯನ್ನು ಮಾಡುತ್ತಾರೆ. ಹಾಗೆಯೆ ನಿವೃತ್ತಿಯ ನಂತರ ಆದಾಯವನ್ನು ಪಡೆಯಲು ಪಿಂಚಣಿಯ ಯೋಜನೆಯಲ್ಲಿ ಹೂಡಿಕೆಯನ್ನು ಮಾಡುತ್ತಾರೆ.

ಇನ್ನು ಮಾಸಿಕ ವೇತನದ ರೂಪದಲ್ಲಿ ಪಿಂಚಣಿಯನ್ನು ಪಡೆಯಲು ಹಲವು ಪಿಂಚಣಿಯ ಯೋಜನೆಗಳಿವೆ. ಇದೀಗ ನಾವು ಈ ಲೇಖನದಲ್ಲಿ ಉತ್ತಮ ಪಿಂಚಣಿ ಪಡೆಯಬಹುದಾದ ಅಟಲ್ ಪಿಂಚಣಿ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ.

Atal Pension Yojana
Image Credit: Zeebiz

ಈ ಯೋಜನೆಯಲ್ಲಿ ಕೇವಲ 210 ರೂ ಹೂಡಿಕೆ ಮಾಡಿದರೆ ಸಿಗಲಿದೆ ಇಷ್ಟು ಪಿಂಚಣಿ
ನೀವು 60 ವರ್ಷದ ನಂತರ ಪಿಂಚಣಿಯನ್ನು ಪಡೆಯಲು ಅಟಲ್ ಪಿಂಚಣಿಯಲ್ಲಿ ಹೂಡಿಕೆಯನ್ನು ಮಾಡಬಹುದು. ಈ ಯೋಜನೆಯು ಪಿಂಚಣಿ ಪಡೆಯಲು ಉತ್ತಮವಾಗಿದೆ. ಈ ಯೋಜನೆಯ ಮೂಲಕ ನೀವು ಮಾಸಿಕ 1,000 ರೂ.ನಿಂದ 5,000 ರೂ. ವರೆಗೆ ಪಿಂಚಣಿ ಪಡೆಯಬಹುದು. ಇದಕ್ಕಾಗಿ ನೀವು ಕೇವಲ 42 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಇದು ಅಸಂಘಟಿತ ವಲಯದ ಕಾರ್ಮಿಕರ ಮೇಲೆ ಕೇಂದ್ರೀಕೃತವಾಗಿರುವ ಭಾರತದ ಎಲ್ಲಾ ನಾಗರಿಕರಿಗೆ ಪಿಂಚಣಿ ಯೋಜನೆಯಾಗಿದೆ.

ಈ ಪಿಂಚಣಿ ಯೋಜನೆಯಡಿ, ನೀವು 60 ವರ್ಷ ವಯಸ್ಸಿನಲ್ಲಿ 1,000 ರೂ. ನಿಂದ 5,000 ರೂ. ವರೆಗಿನ ಪಿಂಚಣಿ ಪಡೆಯಬಹುದು. ಅಂದರೆ ವಾರ್ಷಿಕ 60 ಸಾವಿರ ರೂ. ಪಿಂಚಣಿ ಪಡೆಯಲು ಸಾಧ್ಯವಾಗುತ್ತದೆ. ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವ ವಯಸ್ಸು 18 ವರ್ಷದಿಂದ 40 ವರ್ಷಗಳ ನಡುವೆ ಇರಬೇಕು. ಅಂದರೆ 40 ವರ್ಷಗಳ ನಂತರ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಅರ್ಜಿದಾರರು ಬ್ಯಾಂಕ್ ಖಾತೆಯನ್ನು ಸಹ ಹೊಂದಿರಬೇಕು. ನೋಂದಣಿ ಮಾಡುವಾಗ ಆಧಾರ್ ಸಂಖ್ಯೆ ಮತ್ತು ಫೋನ್ ಸಂಖ್ಯೆಯನ್ನು ನೀಡಿದ ನಂತರ ನಿಮ್ಮ ಖಾತೆಯ ಬಗ್ಗೆ ಎಲ್ಲಾ ರೀತಿಯ ಮಾಹಿತಿಯನ್ನು ನೀವು ಪಡೆಯುತ್ತೀರಿ.

Atal Pension Yojana Benefits
Image Credit: Newsnationtv

ಹೂಡಿಕೆಯ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ
ನೀವು 18 ವರ್ಷಕ್ಕೆ ಕೇವಲ 42 ರೂಪಾಯಿ ಹೂಡಿಕೆ ಮಾಡಿದರೆ ಮಾಸಿಕ 1 ಸಾವಿರ ಪಿಂಚಣಿ ಸಿಗುತ್ತದೆ. ಆದರೆ 84 ರೂಪಾಯಿ ಹೂಡಿಕೆ ಮಾಡಿದರೆ 2 ಸಾವಿರ ಪಿಂಚಣಿ ಸಿಗಲಿದೆ. ಈ ರೀತಿ 210 ರೂ. ಪಾವತಿಸಿದರೆ ಮಾಸಿಕ 5 ಸಾವಿರದವರೆಗೆ ಪಿಂಚಣಿ ಸಿಗಲಿದೆ. ಮಾಸಿಕ ಠೇವಣಿ ಮಾಡಬೇಕಾದ ಮೊತ್ತವು ನಿಮ್ಮ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ನೀವು 40 ವರ್ಷ ವಯಸ್ಸಿನಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಿದರೆ, ನಂತರ ರೂ. 5 ಸಾವಿರ ಪಿಂಚಣಿಗಾಗಿ, ನೀವು ಪ್ರತಿ ತಿಂಗಳು ರೂ. 1454 ಪಾವತಿಸಬೇಕಾಗುತ್ತದೆ.

Join Nadunudi News WhatsApp Group

Atal Pension Yojana Details
Image Credit: Sarkariyojnaa

Join Nadunudi News WhatsApp Group