Ather 450X: ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಗುಡ್ ನ್ಯೂಸ್, ಕಡಿಮೆ ಬೆಲೆಯ ಎಥೇರ್ ಸ್ಕೂಟರ್ ಬಿಡುಗಡೆ.

ಜನರಿಗೆ ಬಹಳ ಇಷ್ಟವಾಗುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಎಥೇರ್ ಎಲೆಕ್ಟ್ರಿಕ್.

Ather 450X Price And Mileage: ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ (Electric Vehicle) ದ್ವಿಚಕ್ರ ವಾಹನಗಳು ಭಾರಿ ಬೇಡಿಕೆಯನ್ನು ಪಡೆದುಕೊಂಡಿದೆ. ಇದರಿಂದ ಹಲವು ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಯನ್ನು ಪ್ರಾರಂಭಿಸಿದ್ದಾರೆ. ಇದರಿಂದ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಹೆಚ್ಚು ಪೈಪೋಟಿ ನೀಡುತ್ತಿದೆ.

Ather 450X Price And Mileage
Image Source: Bike Dekho

ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್‌ ನ ಬೆಲೆ
ಎಥರ್ (Ather) ಎನರ್ಜಿ ಭಾರತದಲ್ಲಿ ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್‌ ನ ಹೊಸ ಬೇಸ್ ವೆರಿಯೆಂಟ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಎಥರ್ 450X ಸ್ಕೂಟರ್‌ನ ಹೊಸ ಬೇಸ್ ವೆರಿಯೆಂಟ್ ಬೆಲೆ 98,183 ರೂಪಾಯಿ ಆಗಿದೆ.

Ather 450X Price And Mileage
Image Source: Bikewale

ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್‌ ನ ವೈಶಿಷ್ಟ್ಯತೆ
ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್‌ನ ಸ್ಟ್ಯಾಂಡರ್ಡ್ ರೂಪಂತರಕ್ಕೆ ಹೋಲಿಸಿದರೆ ಎಥರ್ 450X ಬೆಸ್ ವೆರಿಯೆಂಟ್ ನಲ್ಲಿ ಕೆಲವು ವೈಶಿಷ್ಟ್ಯಗಳನ್ನು ಕಳೆದುಕೊಂಡಿದೆ. ಇದು ವರ್ಸಿಂಗ್ ಫಂಕ್ಷನ್, ಬ್ಲೂಟೂತ್ ಮತ್ತು 4G LTE ಕನೆಕ್ಟಿವಿಟಿ, ಹಿಲ್ಹೋಲ್ಡ್ ಅಸಿಸ್ಟ್, ನ್ಯಾವಿಗೇಷನ್ ಮತ್ತು ರೈಡ್ ಮೋಡ್‌ಗಳಾಗಿವೆ. ಇದು ಹೆಚ್ಚು ಪ್ರಯೋಜನಕಾರಿಯಾಗಿದ್ದ ಫೀಚರ್ಸ್ ಗಳಾಗಿವೆ.

ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್ ರೈಡ್ ಮೋಡ್‌ಗಳ ಬಗ್ಗೆ ಹೇಳುವುದಾದರೆ. ಸಿಂಗಲ್ ರೈಡ್ ಮೋಡ್‌ನೊಂದಿಗೆ ಬರುತ್ತದೆ ಮತ್ತು ಇದು ಕ್ಲೈಮ್ ಮಾಡಲಾದ ರೇಂಜ್ ಅಂಕಿಅಂಶಗಳ ಮೇಲೆ ಸಣ್ಣ ಪರಿಣಾಮವನ್ನು ಬೀರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಅದರ ಹೊರತಾಗಿ, ಎಥರ್ 450X ಬೇಸ್ ವೆರಿಯೆಂಟ್ OTA ನವೀಕರಣಗಳನ್ನು ಪಡೆಕೊಳ್ಳುವುದಿಲ್ಲ ಅಥವಾ ಎಥರ್ ಫಾಸ್ಟ್ ಚಾರ್ಜಿಂಗ್ ನೆಟ್‌ವರ್ಕ್‌ ಗೆ ಹೊಂದಿಕೆಯಾಗುವುದಿಲ್ಲ.

Ather 450X Price And Mileage
Imagge Source: Autocar India

Join Nadunudi News WhatsApp Group

Join Nadunudi News WhatsApp Group