Ather Apex: ಅಥೇರ್ ಸ್ಕೂಟರ್ ಖರೀದಿ ಮಾಡುವವರಿಗೆ ಬೇಸರದ ಸುದ್ದಿ, ಬೆಲೆಯಲ್ಲಿ ಇಷ್ಟು ಹೆಚ್ಚಳ

ಅಥೇರ್ ಸ್ಕೂಟರ್ ಖರೀದಿ ಮಾಡುವವರಿಗೆ ಬೇಸರದ ಸುದ್ದಿ, ಬೆಲೆಯಲ್ಲಿ ಹೆಚ್ಚಳ

Ather Apex Electric Scooter Price Hike: ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲಿನ ಬೇಡಿಕೆ ಹೆಚ್ಚಿದೆ ಎನ್ನಬಹುದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಖರೀದಿಸುತ್ತಿದ್ದಾರೆ. ಇನ್ನು ಜನಪ್ರಿಯ EV ತಯಾರಕ ಕಂಪನಿಯಾ Ather ಕೂಡ ತನ್ನ ಹಲವು ಮಾದರಿಯ EV ಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

ಸದ್ಯ ಅಥರ್ ತನ್ನ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ Apex ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಶ್ರೇಣಿ ಮತ್ತು ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಿದೆ. ಈ ಮಾದರಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಎನ್ನಬಹದು. ಆದರೆ ಇದೀಗ ಕಂಪನಿಯು ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ ನ ಬೆಲೆಯನ್ನು ಹೆಚ್ಚಿಸಿದೆ. ಈ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.

ather apex in india
Image Credit: original Source

ಅಥೇರ್ ಸ್ಕೂಟರ್ ಖರೀದಿ ಮಾಡುವವರಿಗೆ ಬೇಸರದ ಸುದ್ದಿ, ಬೆಲೆಯಲ್ಲಿ ಇಷ್ಟು ಹೆಚ್ಚಳ
ನೀವೂ Ather Apex Electric Scooter ಅನ್ನು ಖರೀದಿಸುವ ಯೋಚನೆಯಲ್ಲಿದ್ದರೆ ಈಗ ನೀವು ಹೆಚ್ಚಿನ ಬೆಲೆ ನೀಡಬೇಕಾಗುತ್ತದೆ. ಅಥರ್ ಬಿಡುಗಡೆ ಮಾಡಿದ ಅಪೆಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಈಗ ದುಬಾರಿಯಾಗಿದೆ. ಕಂಪನಿಯು ಈ ಸ್ಕೂಟರ್‌ ನ ಬೆಲೆಯನ್ನು ಹೆಚ್ಚಿಸಿದೆ.

ಮಾಧ್ಯಮ ವರದಿಗಳ ಪ್ರಕಾರ, ಈ ಸ್ಕೂಟರ್‌ ನ ಬೆಲೆ ರೂ. 6000 ಹೆಚ್ಚಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದಾಗ, ಅದರ ಪರಿಚಯದ ಬೆಲೆಯನ್ನು ಕಡಿಮೆ ಇರಿಸಲಾಗಿತ್ತು. ಆ ಸಮಯದಲ್ಲಿ ಕಂಪನಿಯು ಈ ಕೊಡುಗೆಯೊಂದಿಗೆ ಅದನ್ನು ಪ್ರಾರಂಭಿಸಿತು. ಸ್ಕೂಟರ್ ನ ನಿಜವಾದ ಬೆಲೆಯಲ್ಲಿ ಮಾರಾಟ ಮಾಡಲು ಕಂಪನಿಯು ನಿರ್ಧರಿಸಿದೆ. ಕಂಪನಿಯು Ather Apex Electric Scooter ಅನ್ನು 1.2 ಲಕ್ಷ ರೂಪಾಯಿಗೆ ಬಿಡುಗಡೆ ಮಾಡಿತ್ತು. ಆದ್ರೆ ಇದೀಗ ಬೆಲೆ ಹೆಚ್ಚಳದ ಕಾರಣ ಈ ಸ್ಕೂಟರ್ ನ ಬೆಲೆ 1.95 ಲಕ್ಷಕ್ಕೆ ಏರಿದೆ.

ather apex range and mileage details
Image Credit: original Source

ಭರ್ಜರಿ 157 KM ಮೈಲೇಜ್ ನೀಡಲಿದೆ ಈ EV
ಕಂಪನಿಯ 10 ನೇ ವಾರ್ಷಿಕೋತ್ಸವದಂದು ಅಥರ್ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತಯಾರಿಸಿದೆ. ಇದನ್ನು ಅಕ್ಟೋಬರ್ 2024 ರವರೆಗೆ ಮಾತ್ರ ಉತ್ಪಾದಿಸಲಾಗುತ್ತದೆ. CMS ಮೋಟಾರ್ ಮತ್ತು IP66 ರೇಟಿಂಗ್ ಹೊಂದಿರುವ 450 ಸರಣಿಯ ಅತ್ಯಂತ ವೇಗದ ಮತ್ತು ದುಬಾರಿ ಸ್ಕೂಟರ್ ಇದಾಗಿದೆ.

Join Nadunudi News WhatsApp Group

ಇದು 7 ಕಿಲೋವ್ಯಾಟ್ ಶಕ್ತಿಯೊಂದಿಗೆ ಮೋಟಾರ್ ಹೊಂದಿದೆ ಮತ್ತು ಅದರ ಗರಿಷ್ಠ ವೇಗ ಗಂಟೆಗೆ 100 ಕಿಲೋಮೀಟರ್ ಆಗಿದೆ. ಈ ಸ್ಕೂಟರ್ ಕೇವಲ 3 ಸೆಕೆಂಡುಗಳಲ್ಲಿ ಗಂಟೆಗೆ 40 ಕಿಲೋಮೀಟರ್ ವೇಗವನ್ನು ತಲುಪುತ್ತದೆ. 3.7 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿರುವ Ather Apex Electric Scooter ನಿಮಗೆ ಒಂದೇ ಚಾರ್ಜ್ ನಲ್ಲಿ 157 ಕಿಲೋಮೀಟರ್ ವರೆಗೆ ಮೈಲೇಜ್ ಅನ್ನು ನೀಡುತ್ತದೆ. ಇದನ್ನು ರೈಡ್, ಸ್ಪೋರ್ಟ್ ಮತ್ತು ರಾಂಪ್ ಪ್ಲಸ್ ಮೋಡ್‌ ನಲ್ಲಿ ಓಡಿಸಬಹುದು.

ather apex new electric scooter
Image Credit: Original Source

Join Nadunudi News WhatsApp Group