TVS and Ather: ಅಥೇರ್ Rizta ಮತ್ತು TVS iQube ನಲ್ಲಿ ಯಾವುದು ಬೆಸ್ಟ್…? ಇಲ್ಲಿದೆ ಎರಡು ಸ್ಕೂಟರ್ ಗಳ ಮಾಹಿತಿ.

ಅಥೇರ್ Rizta ಮತ್ತು TVS iQube ನಲ್ಲಿ ಯಾವುದು ಬೆಸ್ಟ್...?

Ather Rizta v/s TVS iQube Electric Scooter: ಭಾರತೀಯ ಆಟೋ ವಲಯದಲ್ಲಿ ಇತ್ತೀಚಿಗೆ Electric ವಾಹನಗಳು ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಅದರಲ್ಲೂ Electric scooter ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಚಯವಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ Ather Rizta Electric Scooter ಮತ್ತು TVS iQube Electric Scooter ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ.

ನೀವು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವ ಯೋಜನೆಯನ್ನು ಹಾಕಿಕೊಂಡಿದ್ದರೆ ಈ ಎರಡು ಸ್ಕೂಟರ್ ನಿಮಗೆ ಬೆಸ್ಟ್ ಆಯ್ಕೆಯಾಗಲಿದೆ. ನಾವೀಗ ಈ ಲೇಖನದಲ್ಲಿ Ather Rizta Electric Scooter ಮತ್ತು TVS iQube Electric Scooter ಬಗ್ಗೆ ಮಾಹಿತಿ ಹೇಳಲಿದ್ದೇವೆ. ನೀವು ಈ ಲೇಖನವನ್ನು ಓದುವ ಮೂಲಕ ಯಾವ ಎಲೆಕ್ಟ್ರಿಕ್ ಸ್ಕೂಟರ್ ಬೆಸ್ಟ್ ಎನ್ನುವುದನ್ನು ತಿಳಿದು ಆಯ್ಕೆ ಮಾಡಿಕೊಳ್ಳಬಹುದು.

Ather Rizta Electric Scooter Launch
Image Credit: Original Source

ಅಥೇರ್ Rizta ಮತ್ತು TVS iQube ನಲ್ಲಿ ಯಾವುದು ಬೆಸ್ಟ್…?
Ather Rizta Electric Scooter
ಮಾರುಕಟ್ಟೆಯಲ್ಲಿ Ather Rizta Electric Scooter ಆರಂಭಿಕ ಎಕ್ಸ್ ಶೋ ರೂಂ ಬೆಲೆ 1.10 ಲಕ್ಷ ರೂ. ದಿಂದ 1.45 ಲಕ್ಷ ರೂ. ಗೆ ನಿಗದಿಪಡಿಸಲಾಗಿದೆ. ಕಂಪನಿಯು Ather Rizta Electric Scooter ಅನ್ನು ಎರಡು ರೂಪಾಂತರಗಳಲ್ಲಿ ಪರಿಚಯಿಸಿದೆ. ಅಂದರೆ ಇದರಲ್ಲಿ ನೀವು ಎರಡು ಬ್ಯಾಟರಿ ಆಯ್ಕೆಗಳನ್ನು ಪಡೆಯುತ್ತೀರಿ. ಇದರಲ್ಲಿ ನೀವು ಮೊದಲ ಬ್ಯಾಟರಿ ಆಯ್ಕೆಯಾಗಿ 2.9kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತೀರಿ.

ಇದು ಒಂದೇ ಚಾರ್ಜ್‌ನಲ್ಲಿ 123 ಕಿಲೋಮೀಟರ್‌ ಗಳ ಮೈಲೇಜ್ ಅನ್ನು ನೀಡುತ್ತದೆ. ದೊಡ್ಡದಾದ 3.7kWh ಬ್ಯಾಟರಿ ಪ್ಯಾಕ್ ಎರಡನೇ ಬ್ಯಾಟರಿ ಆಯ್ಕೆಯಾಗಿ ಲಭ್ಯವಿದೆ. ಇದು ಒಂದೇ ಚಾರ್ಜ್‌ನಲ್ಲಿ 165 ಕಿಲೋಮೀಟರ್‌ ಗಳ ಮೈಲೇಜ್ ಅನ್ನು ನೀಡುತ್ತದೆ. ಈ ಎರಡೂ ರೂಪಾಂತರಗಳು ಗಂಟೆಗೆ 80 ಕಿಲೋಮೀಟರ್ ವೇಗವನ್ನು ನೀಡುತ್ತದೆ. ನೀವು Rizta ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಉತ್ತಮ ಸ್ಪೆಕ್ಸ್ ಅನ್ನು ನೋಡುತ್ತಿರಿ ಮತ್ತು ಆರಾಮದಾಯಕಕ್ಕಾಗಿ ಉದ್ದವಾದ ಸೀಟ್ ಅನ್ನು ಸ್ಥಾಪಿಸಲಾಗಿದೆ.

ಇದರಲ್ಲಿ ನೀವು 56 ಲೀಟರ್ ಸ್ಟೋರೇಜ್ ಪಡೆಯುತ್ತೀರಿ. ಇದರಿಂದ ನೀವು ನಿಮ್ಮ ಬಹಳಷ್ಟು ವಸ್ತುಗಳನ್ನು ಇಟ್ಟುಕೊಂಡು ಆರಾಮದಾಯವಾಗಿ ಪ್ರಯಾಣವನ್ನು ಮಾಡಬಹುದು. ಇನ್ನು 165 ಕಿಲೋಮೀಟರ್‌ ಮೈಲೇಜ್ ನೀಡುವ Ather Rizta Electric Scooter ನಿಮ್ಮ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ. ಈ ವರ್ಷದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರು ಈ ಸ್ಕೂಟರ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

Join Nadunudi News WhatsApp Group

TVS iQube Electric Scooter
Image Credit: Gaadicdn

TVS iQube Electric Scooter
ಮಾರುಕಟ್ಟೆಯಲ್ಲಿ TVS ನೂತನ iQube EV ಬಾರಿ ಸಂಚಲನ ಸೃಷ್ಟಿಸಲಿದೆ. ಈ TVS ಐಕ್ಯೂಬ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. TVS ಐಕ್ಯೂಬ್ ,TVS ಐಕ್ಯೂಬ್ S ರೂಪಾಂತರಗಳಲ್ಲಿ ಲಭ್ಯವಿದೆ. TVS iQube ರೂಪಾಂತರವು ರೂ.1,47,968 ಮತ್ತು iQube S ರೂಪಾಂತರವು ರೂ.1,53,909 ಆನ್ ರೋಡ್ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

TVS iQube ಎರಡೂ ರೂಪಾಂತರಗಳು 3.04 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿವೆ. ಇದು 4.4 kW ಹಬ್ ಮೌಂಟೆಡ್ BLDC ಮೋಟಾರ್ ಅನ್ನು ಪಡೆಯುತ್ತದೆ ಅದು 140 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಪೂರ್ಣ ಚಾರ್ಜ್‌ನಲ್ಲಿ 100 ಕಿಮೀ ವ್ಯಾಪ್ತಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಕೂಟರ್ ಮೊಬೈಲ್ ಚಾರ್ಜಿಂಗ್‌ ಗಾಗಿ ಯುಎಸ್‌ಬಿ ಸಾಕೆಟ್, 32 ಲೀಟರ್ ಸಾಮರ್ಥ್ಯದ ಸಂಗ್ರಹಣೆ, ಇಕೋ, ಸ್ಪೋರ್ಟ್ ರೈಡಿಂಗ್ ಮೋಡ್ ಆಯ್ಕೆಯನ್ನು ಒಳಗೊಂಡಿದೆ.

ಸ್ಪೋರ್ಟ್ ಮೋಡ್‌ ನಲ್ಲಿ ಇದು ಕೇವಲ 4.2 ಸೆಕೆಂಡುಗಳಲ್ಲಿ 0- 40 kmph ವೇಗವನ್ನು ಪಡೆಯುತ್ತದೆ. ಇನ್ನು 135 ಕಿಮೀ ವ್ಯಾಪ್ತಿಯನ್ನು ಮತ್ತು 80 ಕಿಮೀ / ಗಂ ಗರಿಷ್ಠ ವೇಗವನ್ನು ಹೊಂದಿರಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ವೇಗದ ಚಾರ್ಜಿಂಗ್, ಸ್ಮಾರ್ಟ್‌ ಫೋನ್ ಸಂಪರ್ಕ, ರಸ್ತೆ ಬದಿಯ ಸಹಾಯ, ನೆಟ್‌ ವರ್ಕ್ ಸೇವೆ, ಆಂಟಿ-ಥೆಫ್ಟ್ ಅಲಾರ್ಮ್ ಸಿಸ್ಟಮ್ ಮತ್ತು ಬ್ಲೂಟೂತ್ ಸಂಪರ್ಕ ಸೇರಿದಂತೆ 45 ಕ್ಕೂ ಹೆಚ್ಚು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

Ather Rizta Electric Scooter Price And Features
Image Credit: Autox

Join Nadunudi News WhatsApp Group