ನಾಗ್ಪುರದ ಏಟಿಎಂ ನಲ್ಲಿ ಐದು ಪಟ್ಟು ಹೆಚ್ಚು ಹಣ ಬಂದಿದ್ದು ಯಾಕೆ ಗೊತ್ತಾ, ಅಸಲಿ ಸತ್ಯ ಏನು ನೋಡಿ.

ಸಾಮಾನ್ಯವಾಗಿ ಏಟಿಎಂ ಅನ್ನು ಎಲ್ಲರೂ ಬಳಕೆ ಮಾಡುತ್ತಾರೆ. ಹೌದು ನಾವು ಏಟಿಎಂ ನಲ್ಲಿ ಹಣ ಎಷ್ಟು ಬೇಕು ಎಂದು ಹಾಕಿದಾಗ ನಮ್ಮ ಖಾತೆ ಅಲ್ಲಿ ಹಣ ಇದ್ದರೆ ಏಟಿಎಂ ನಮಗೆ ಹಣವನ್ನ ಕೊಡುತ್ತದೆ. ಇನ್ನು ಅದೇ ರೀತಿಯಲ್ಲಿ ನಿನ್ನೆ ಮಹಾರಾಷ್ಟ್ರದ ನಾಗ್ಪುರದ ಏಟಿಎಂ ನಲ್ಲಿ ಒಂದು ಘಟನೆ ನಡೆದಿದ್ದು, ಒಬ್ಬನಿಗೆ ಏಟಿಎಂ ನಲ್ಲಿ ಐದುಪಟ್ಟು ಹೆಚ್ಚು ಹಣ ಬಂದಿದೆ. ಹೌದು ಏಟಿಎಂ ನಲ್ಲಿ 500 ರೂಪಾಯಿ ಹಣವನ್ನ ಡ್ರಾ ಮಾಡಿದ್ದಕ್ಕೆ ಆತನಿಗೆ 2500 ರೂಪಾಯಿ ಬಂದಿದೆ. ಇದರಿಂದ ಬಹಳ ಸಂತೋಷಗೊಂತ ಆದ ಮೂರೂ ಭಾರಿ ಹಣವನ್ನ ತೆಗೆದಿದ್ದಾನೆ. ಇನ್ನು ಹಣವನ್ನ ತೆಗೆದ ಈತ ಈ ವಿಷಯವನ್ನ ಎಲ್ಲರಿಗೂ ಹೇಳಿದ್ದಾನೆ. ಇನ್ನು ಈ ವಿಷಯ ಎಲ್ಲರಿಗೂ ತಿಳಿದು ಏಟಿಎಂ ಮುಂದೆ ಜನರು ಸಾಲುಗಟ್ಟೆ ನಿಂತರು.

ಸದ್ಯ ಈ ಸುದ್ದಿ ಬ್ಯಾಂಕಿನವರಿಗೆ ಮತ್ತು ಪೊಲೀಸರಿಗೆ ತಿಳಿದು ತಕ್ಷಣ ಏಟಿಎಂ ಬಂದ್ ಮಾಡಿದ್ದಾರೆ. ಹಾಗಾದರೆ ಆ ಏಟಿಎಂ ನಲ್ಲಿ ಐದು ಪಟ್ಟು ಹಣ ಬಂದಿದ್ದು ಯಾಕೆ ಮತ್ತು ಅದರ ಹಿಂದೆ ಎಡವಟ್ಟು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಹೌದು ಏಟಿಎಂ ನಲ್ಲಿ ನಾವು ಎಷ್ಟು ಹಣವನ್ನ ತೆಗೆಯುತ್ತೇವೋ ಅಷ್ಟು ಹಣ ಮಾತ್ರ ಬರುತ್ತದೆ, ಆದರೆ ಈಗ ಐದು ಪಟ್ಟು ಹಣ ಬರಲು ಕಾರಣ ಬ್ಯಾಂಕ್ ಮಾಡಿದ ಒಂದೇ ಒಂದು ಎಡವಟ್ಟು ಎಂದು ಹೇಳಬಹುದು. ಹೌದು ಏಟಿಎಂ ಗೆ ಹಣ ಹಾಕುವ ಅಧಿಕರು 100 ರೂಪಾಯಿಯ ಬಾಕ್ಸ್ ನಲ್ಲಿ 500 ರೂಪಾಯಿಯನ್ನ ನೋಟುಗಳನ್ನ ಹಾಕಿ ದೊಡ್ಡ ಎಡವಟ್ಟು ಮಾಡಿದ್ದಾರೆ.

ATM amount withdraw

ಹೌದು ಏಟಿಎಂ ಗೆ ಹಣ ತುಂಬಲು ಬರುವ ಅಧಿಕಾರಿಗಳು 100 ಟ್ರೇ ನಲ್ಲಿ 500 ರೂಪಾಯಿಯನ್ನ ನೋಟುಗಳನ್ನ ಹಾಕಿ ಹೋಗಿದ್ದಾರೆ. ಇನ್ನು ಏಟಿಎಂ ಗೆ ಹಣವನ್ನ ತೆಗೆಯಲು ಬಂದ ವ್ಯಕ್ತಿ ಏಟಿಎಂ 500 ರೂಪಾಯಿ ತೆಗೆದಿದ್ದಾನೆ, 100 ಟ್ರೇ ನಲ್ಲಿ 500 ರೂಪಾಯಿ ಇದ್ದ ಕಾರಣ ಆತನ ಕೈಗೆ ಐದು ಪಟ್ಟು ಹೆಚ್ಚಿನ ಹಣ ಸಿಕ್ಕಿದೆ. ಇನ್ನು ಬ್ಯಾಂಕಿನವರು ಆಗಿರುವ ಈ ಎಡವಟ್ಟನ್ನ ಕಂಡುಹಿಡಿಯುವುದರ ಒಳಗೆ ಹಲವು ಏಟಿಎಂ ನಲ್ಲಿ ಐದುಪಟ್ಟು ಹೆಚ್ಚಿನ ಹಣವನ್ನ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಈ ಎಡವಟ್ಟಿಗೆ ಏಟಿಎಂ ಗೆ ಹಣ ಹಾಕುವವರೇ ಕಾರಣರಾದ ಕಾರಣ ಇದರಲ್ಲಿ ಏಟಿಎಂ ನಲ್ಲಿ ಹಣ ತೆಗೆಯುವ ಗ್ರಾಹಕನ ತಪ್ಪು ಏನು ಇಲ್ಲ ಅನ್ನುವುದು ಸಾಭೀತಾಗಿದೆ. ಸದ್ಯ ಬ್ಯಾಂಕಿನವರ ಈ ಎಡವಟ್ಟು ಇತರೆ ಬ್ಯಾಂಕಿನವರ ಎಚ್ಚರಕ್ಕೆ ಕಾರಣವಾಗಿದೆ. ಏನೇ ಆಗಲಿ ಬ್ಯಾಂಕಿನವರ ಈಡವಟ್ಟಿನ ಕಾರಣ ಕೆಲವು ಜನರು ನಿನ್ನೆ ಏಟಿಎಂ ನಲ್ಲಿ ಹೆಚ್ಚಿನ ಹಣವನ್ನ ಪಡೆದುಕೊಂಡಿದ್ದಾರೆ. ಸ್ನೇಹಿತರೆ ಬ್ಯಾಂಕ್ ಅಭಿಕಾರಿಗಳ ಈ ಎಡವಟ್ಟಿನ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

ATM amount withdraw

Join Nadunudi News WhatsApp Group