ATM Scam: ಏಟಿಎಂ ನಲ್ಲಿ ಹಣ ತಗೆಯುವಾಗ ಈ ತಪ್ಪು ಮಾಡಿದರೆ ಖಾಲಿಯಾಗಲಿದೆ ನಿಮ್ಮ ಖಾತೆ.

ಏಟಿಎಂ ಯಂತ್ರದ ಮೂಲಕ ಹಾನವನ್ನ ತಗೆದ ನಂತರ ಕ್ಯಾನ್ಸಲ್ ಬಟನ್ ಒತ್ತುವುದು ಕಡ್ಡಾಯ ಆಗಿದೆ. ವಂಚನೆ ಮಾಡುವವರಿಂದ ತಪ್ಪಿಸಿಕೊಳ್ಳಲು ಕೆಲವು ನಿಯಮಗಳನ್ನ ಅನುಸರಿಸಿ.

ATM Card Scam: ಸಾಮಾನ್ಯವಾಗಿ ಎಲ್ಲರು ಕೂಡ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ. ಎಲ್ಲಾ ಪ್ರತಿಷ್ಠಿತ ಬ್ಯಾಂಕ್ ಗಳು ಗ್ರಾಹಕರಿಗೆ ಡೆಬಿಟ್ ಕಾರ್ಡ್ (Debit Card) ಹಾಗೂ ಕ್ರೆಡಿಟ್ ಕಾರ್ಡ್ (Credit Card) ಗಳ ಸೌಲಭ್ಯವನ್ನು ನೀಡುತ್ತದೆ.

ಗ್ರಾಹಕರು ಎಟಿಎಂ (ATM) ನಲ್ಲಿ ಹಣವನ್ನು ತೆಗೆಯಲು ಸಾಮಾನ್ಯವಾಗಿ ಡೆಬಿಟ್ ಕಾರ್ಡ್ ಅನ್ನು ಬಳಸುತ್ತಾರೆ. ಇನ್ನು ನೀವು ಎಟಿಎಂ ನಲ್ಲಿ ಹಣ ತೆಗೆಯುವ ಸಂದರ್ಭದಲ್ಲಿ ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಖಾತೆಯಲ್ಲಿನ ಸಂಪೂರ್ಣ ಹಣವನ್ನು ಕಳೆದುಕೊಳ್ಳೊಬೇಕಾಗುತ್ತದೆ.

Banks have told customers to press the cancel button after the transaction as there is a possibility that some thieves may steal your information at those ATMs after the transaction.
Image Credit: thewire

ಎಟಿಎಂ ನಲ್ಲಿ ಹಣ ವಿತ್ ಡ್ರಾ ಮಾಡುವಾಗ ಎಚ್ಚರ
ಸಾಮಾನ್ಯವಾಗಿ ಎಟಿಎಂ ಗಳನ್ನೂ ಎಲ್ಲರು ಬಳಸುತ್ತಾರೆ. ಎಟಿಎಂ ನಲ್ಲಿ ಹಣ ತೆಗೆಯಲು ನಿಮ್ಮ ಬಳಿ ಇರುವ ಡೆಬಿಟ್ ಕಾರ್ಡ್ ಅನ್ನು ಬಳಸಬೇಕಾಗುತ್ತದೆ. ಎಟಿಎಂ ನಲ್ಲಿ ಹಣ ತೆಗೆಯುವ ಸಮಯದಲ್ಲಿ ಕೆಲವು ನಿಯಮಗಳನ್ನು ಕೂಡ ಅನುಸರಿಸಬೇಕಾಗುತ್ತದೆ. ಎಟಿಎಂ ನಲ್ಲಿ ಹಣಕಾಸಿನ ವ್ಯವಹಾರ ಮಾಡುವಾಗ ಮುನ್ನೆಚ್ಚರಿಕೆಯನ್ನು ವಹಿಸಬೇಕು.

ಎಟಿಎಂ ನಲ್ಲಿ ವಹಿವಾಟು ಮುಗಿದ ನಂತರ ಕ್ಯಾನ್ಸಲ್ ಬಟನ್ ಒತ್ತುವುದು ಕಡ್ಡಾಯ
ಎಟಿಎಂ ನಲ್ಲಿ ಹಣ ತೆಗೆಯುವಾಗ ಕೆಲವು ಮಾಹಿತಿಯನ್ನು ನೀವು ನೀಡಬೇಕಾಗುತ್ತದೆ. ನಿಮ್ಮ ಪಿನ್ ಸಂಖ್ಯೆಯನ್ನು ನಮೂದಿಸಿದ ನಂತರ ನೀವು ಆಯ್ಕೆ ಮಾಡಿದ ಹಣ ನಿಮಗೆ ಸಿಗುತ್ತದೆ. ಆದರೆ ಎಟಿಎಂ ನಲ್ಲಿ ನಿಮ್ಮ ವಹಿವಾಟು ಪೂರ್ಣಗೊಂಡ ನಂತರ ನೀವು ಕ್ಯಾನ್ಸಲ್ ಬಟನ್ ಒತ್ತುವುದು ಕಡ್ಡಾಯ. ನೀವು ಕ್ಯಾನ್ಸಲ್ ಬಟನ್ ಒತ್ತದೆ ಹಾಗೆ ಬಂದಲ್ಲಿ ಬೇರೊಬ್ಬರು ನಿಮ್ಮ ಖಾತೆಯಲ್ಲಿನ ಹಣವನ್ನು ತೆಗೆದುಕೊಳ್ಳಬಹುದು.

If the cancel button is not pressed after using the ATM, there is a possibility of your card information being leaked.
Image Credit: abplive

ಯಾವ ಸಮಯದಲ್ಲಿ ಕ್ಯಾನ್ಸಲ್ ಬಟನ್ ಅನ್ನು ಒತ್ತಬೇಕು
ಎಟಿಎಂ ಕಾರ್ಡ್ ಅನ್ನು ಬಳಸಿದ ಪ್ರತಿ ಬಾರಿ ನೀವು ಕ್ಯಾನ್ಸಲ್ ಬಟನ್ ಅನ್ನು ಒತ್ತುವುದು ಕಡ್ಡಾಯವಿಲ್ಲ. ಕೆಲವೊಮ್ಮೆ ಎಟಿಎಂ ಯಂತ್ರ ನಿಮ್ಮ ವಹಿವಾಟು ಮುಗಿದ ನಂತರ ಮಾಹಿತಿಯನ್ನು ಅಳಿಸುತ್ತದೆ. ಎಟಿಎಂ ಯಂತ್ರದಲ್ಲಿ ಹೋಂ ಸ್ಕ್ರೀನ್ ಕಾಣಿಸಿದರೆ ಕ್ಯಾನ್ಸಲ್ ಬಟನ್ ಒತ್ತುವ ಅವಶ್ಯಕತೆ ಇರುವುದಿಲ್ಲ.

Join Nadunudi News WhatsApp Group

ಆದರೆ ವಹಿವಾಟಿನ ನಂತರ ವ್ಯವಹಾರವನ್ನು ಮುಂದುವರೆಸಲು ಕೆಳೆದರೆ ಆಗ ನೀವು ಕ್ಯಾನ್ಸಲ್ ಬಟನ್ ಅನ್ನು ಒತ್ತುವುದು ಅನಿವಾರ್ಯ. ಈ ಸಮಯದಲ್ಲಿ ಕ್ಯಾನ್ಸಲ್ ಬಟನ್ ಅನ್ನು ಒತ್ತದಿದ್ದರೆ ನೀವು ನಿಮ್ಮ ಖಾತೆಯಲ್ಲಿನ ಹಣವನ್ನು ಕಳೆದುಕೊಳ್ಳುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

As the number of ATM card transactions is high, it is better to press the cancel button after using the ATM.
Image Credit: nationalheraldindia

ಕೆಲವು ಕಳ್ಳರು ನಿಮ್ಮಾ ವ್ಯವಹಾರ ನಂತರ ಆ ಏಟಿಎಂ ಗಳಲ್ಲಿ ನಿಮ್ಮ ಮಾಹಿತಿಯನ್ನ ಕದಿಯುವ ಸಾಧ್ಯತೆ ಇರುವುದರಿಂದ ವ್ಯವಹಾರ ನಂತರ ಕ್ಯಾನ್ಸಲ್ ಬಟನ್ ಒತ್ತಬೇಕು ಎಂದು ಗ್ರಾಹಕರಿಗೆ ಬ್ಯಾಂಕುಗಳು ಹೇಳಿದೆ.

Join Nadunudi News WhatsApp Group