ATM Rules: ATM ನಿಂದ ದಿನಕ್ಕೆ ಎಷ್ಟು ಬಾರಿ ಹಣವನ್ನು ಉಚಿತವಾಗಿ ಪಡೆಯಬಹುದು…?

ATM ನಿಂದ ದಿನಕ್ಕೆ ಎಷ್ಟು ಬಾರಿ ಹಣವನ್ನು ಉಚಿತವಾಗಿ ಪಡೆಯಬಹುದು...?

ATM Money Withdrawal Limit: ಸದ್ಯ ದೇಶದಲ್ಲಿ ಡಿಜಿಟಲ್ ವಹಿವಾಟುಗಳು ಹೆಚ್ಚುತ್ತಿದೆ. ಜನರು ಹೆಚ್ಚಾಗಿ ಆನ್ಲೈನ್ ಮೂಲಕ ತಮ್ಮ ವಹಿವಾಟನ್ನು ನಡೆಸುತ್ತಿದ್ದಾರೆ. ಈ ಹಿಂದೆ ಹಣದ ಅವಶ್ಯಕತೆ ಇದ್ದರೆ ಬ್ಯಾಂಕ್ ನಲ್ಲಿ ಸಾಕಷ್ಟು ಕಾದ ನಂತರ ಹಣ ಪಡೆಯಬೇಕಿದ್ದತ್ತು. ಆದರೆ ಈಗ ಹೀಗಿಲ್ಲ, ಕ್ಷಣಾರ್ಧದಲ್ಲಿ ಹಣಕಾಸಿನ ಯಾವುದೇ ವಹಿವಾಟನ್ನು ಕೂಡ ಮುಗಿಸಿಕೊಳ್ಳಬಹುದಾಗಿದೆ. ಡಿಜಿಟಲ್ ಪೇಮೆಂಟ್ ಹಾಗೆಯೇ ATM ನಿಂದ ಗ್ರಹಕರು ಸದ್ಯ ಸುಲಭವಾಗಿ ಹಣವನ್ನು ಪಡೆಯುತ್ತಿದ್ದಾರೆ.

ಡಿಜಿಎಲ್ ಪಾವತಿಯ ಜೊತೆಗೆ ಜನರು ATM ನಲ್ಲಿ ಕೂಡ ಹಣವನ್ನು ಹಿಂಪಡೆಯುತ್ತಿದ್ದರೆ. ನಿಮಗೆ ಗೊತ್ತೇ…? ATM ಬಳಕೆಗೆ ಕೂಡ ಸಾಕಷ್ಟು ನಿಯಮಗಳಿವೆ. ATM ನಲ್ಲಿ ಹಣ ಹಿಂಪಡೆಯುವ ಮುನ್ನ ಅದರ ನಿಯಮಗಳ ಬಗ್ಗೆ ತಿಳಿಯುವುದು ಅಗತ್ಯ.

ATM Money Withdrawal Limit
Image Credit: Jupiter.money

ATM ನಿಂದ ದಿನಕ್ಕೆ ಎಷ್ಟು ಬಾರಿ ಹಣವನ್ನು ಉಚಿತವಾಗಿ ಪಡೆಯಬಹುದು…?
ನೀವು ಎಟಿಎಂನಿಂದ ದಿನಕ್ಕೆ ಹಲವಾರು ಬಾರಿ ಹಣವನ್ನು ಹಿಂಪಡೆಯಬಹುದು ಅಂದುಕೊಂಡಿದ್ದರೆ ಅದು ತಪ್ಪು. ATM ನಲ್ಲಿ ಹಣ ಹಿಂಪಡೆಯುವಿಕೆಗೆ ಮಿತಿಯನ್ನು ನಿಗದಿಪಡಿಸಾಲಾಗಿದೆ. ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸಿದರೆ ನಷ್ಟ ಅನುಭವಿಸಬೇಕಾಗುತ್ತದೆ.

ಆದಾಗ್ಯೂ, ಇದು ಬ್ಯಾಂಕ್‌ ನಿಂದ ಬ್ಯಾಂಕ್‌ ಗೆ ಬದಲಾಗುತ್ತದೆ. ಇದು ವಿವಿಧ ಬ್ಯಾಂಕಿನ ಸ್ವಂತ ನೀತಿಯನ್ನು ಅವಲಂಬಿಸಿರುತ್ತದೆ. ಒಂದು ದಿನದಲ್ಲಿ ಹಿಂಪಡೆಯಬಹುದಾದ ನಿಖರವಾದ ಹಣವನ್ನು ಸಹ ಬ್ಯಾಂಕ್ ನಿರ್ದಿಷ್ಟಪಡಿಸುತ್ತದೆ. ಇದೀಗ ನಾವು ಈ ಲೇಖನದಲ್ಲಿ ಎಟಿಎಂನಿಂದ ದಿನಕ್ಕೆ ಎಷ್ಟು ಬಾರಿ ಹಣವನ್ನು ಹಿಂಪಡೆಯಬಹುದು ಎನ್ನುವ ಬಗ್ಗೆ ಮಾಹಿತಿ ಹೇಳಲಿದ್ದೇವೆ.

ATM Money Withdrawal Per Day
Image Credit: Axisbank

ATM ನಲ್ಲಿ ಹಣ ಹಿಂಪಡೆಯುವಿಕೆಯ ಮಿತಿ ಎಷ್ಟಿದೆ…?
ಒಂದು ದಿನದಲ್ಲಿ ಬ್ಯಾಂಕ್ ಗರಿಷ್ಠ 10,000 ರೂ. ಗಳನ್ನೂ ಹಿಂಪಡೆಯಬಹುದು. ಆದರೆ ಬೇರೆಡೆ ಗರಿಷ್ಠ 25,000 ರೂ. ಗಳನ್ನೂ ಹಿಂಪಡೆಯಬಹುದಾಗಿದೆ. ನೀವು ಯಾವುದೇ ಬ್ಯಾಂಕ್‌ ನಿಂದ 50 ಸಾವಿರ ರೂಪಾಯಿಗಳವರೆಗೆ ಹಿಂಪಡೆಯಬಹುದು.

Join Nadunudi News WhatsApp Group

ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳ ಪ್ರಕಾರ, ನೀವು ಯಾವುದೇ ಬ್ಯಾಂಕಿನ ATM ನಿಂದ ತಿಂಗಳಿಗೆ ಗರಿಷ್ಠ 5 ಉಚಿತ ವಿತ್ ಡ್ರಾಗಳನ್ನು ಮಾಡಬಹುದು. ಆದರೆ ಅದಕ್ಕಿಂತ ಹೆಚ್ಚಿನ ಹಣವನ್ನು ನೀವು ಹಿಂಪಡೆಯಲು ಬಯಸಿದರೆ, ನೀವು ಪ್ರತಿ ಬಾರಿ ಹಿಂತೆಗೆದುಕೊಳ್ಳುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ATM ನಲ್ಲಿ ಮಿತಿಗಿಂತ ಹೆಚ್ಚಿನ ವಹಿವಾಟಿಗೆ ಗರಿಷ್ಠ 21 ರೂ. ನಿಗದಿಪಡಿಸಲಾಗಿದೆ. ಆದಾಗ್ಯೂ, ಈ ಶುಲ್ಕವು ಬ್ಯಾಂಕ್‌ ನಿಂದ ಬ್ಯಾಂಕ್‌ ಗೆ ಬದಲಾಗುತ್ತದೆ ಎನ್ನುವುದು ನಿಮಗೆ ತಿಳಿದಿರಲಿ.

ATM Money Withdrawal Limit Update
Image Credit: News18

Join Nadunudi News WhatsApp Group