Atum 1.0: ಸೈಕಲ್ ತರಾನೇ ಆದರೆ ಸೈಕಲ್ ಅಲ್ಲ, 100 Km ಮೈಲೇಜ್ ಕೊಡುವ ಬೈಕಿಗೆ ಸಕತ್ ಡಿಮ್ಯಾಂಡ್.

100 Km ಮೈಲೇಜ್ ಕೊಡುವ ಬೈಕಿಗೆ ಸಕತ್ ಡಿಮ್ಯಾಂಡ್

Atumobile Atum version 1.0: ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬೈಕ್, ಸ್ಕೂಟರ್ ಗಳನ್ನೂ ಖರೀದಿಸಲು ಬಯಸುತ್ತಾರೆ. ನೀವು ಈ ವರ್ಷದಲ್ಲಿ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್‌ ಗಾಗಿ ಹುಡುಕುತ್ತಿದ್ದರೆ Atumobile Atum ಆವೃತ್ತಿ 1.0 ನಿಮಗೆ ಬೆಸ್ಟ್ ಆಯ್ಕೆಯಾಗಲಿದೆ.

ನೀವು ಈ ಎಲೆಕ್ಟ್ರಿಕ್ ಬೈಕ್ ಅನ್ನು ಖರೀದಿಸುವುದರಿಂದ ಹೆಚ್ಚಿನ ಹಣವನ್ನು ಉಳಿಸಬಹುದು. ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಈ ನೂತನ ಮಾದರಿ ಲಾಂಚ್ ಆಗಿದೆ. ಇನ್ನು Atumobile Atum version 1.0 ಬೈಕ್ ನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Atumobile Atum version 1.0
Image Credit: India Today

ಸೈಕಲ್ ತರಾನೇ ಆದರೆ ಸೈಕಲ್ ಅಲ್ಲ
ಆಟಮ್ 1.0 ಅನ್ನು ಕೆಫೆ ರೇಸರ್ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ನೋಡಲು ಸಾಕಷ್ಟು ಸೊಗಸಾದ ಮತ್ತು ಸುಲಭವಾಗಿ ರಸ್ತೆಗಳಲ್ಲಿ ನಿಮ್ಮ ಗಮನ ಸೆಳೆಯುತ್ತದೆ. ಇದರಲ್ಲಿ ನೀವು ಕನಿಷ್ಟ ವಿನ್ಯಾಸವನ್ನು ಪಡೆಯುತ್ತೀರಿ, ಇದು ಆಕರ್ಷಕವಾಗಿ ಕಾಣುವುದಲ್ಲದೆ ವಾಹನದ ಶಕ್ತಿಯನ್ನು ತೋರಿಸುತ್ತದೆ. Atum 1.0 ನಿಮಗೆ ಒಂದು ಸಂಪೂರ್ಣ ಚಾರ್ಜ್‌ ನಲ್ಲಿ 100 ಕಿಲೋಮೀಟರ್‌ ಗಳ ಅತ್ಯುತ್ತಮ ಮೈಲೇಜ್ ಅನ್ನು ನೀಡುತ್ತದೆ. ನೀವು ಈ ಬೈಕ್ ನಲ್ಲಿ ಯಾವುದೇ ತೊಂದರೆ ಇಲ್ಲದೆ ಪ್ರಯಾಣವನ್ನು ಮಾಡಬಹುದು.

Atumobile Atum version 1.0 Mileage
Image Credit: Bikedekho

100 Km ಮೈಲೇಜ್ ಕೊಡುವ ಬೈಕಿಗೆ ಸಕತ್ ಡಿಮ್ಯಾಂಡ್
ಈ ಬೈಕ್ ರೇಸಿಂಗ್ ಬೈಕ್‌ ನಂತೆ ಓಡುವುದಿಲ್ಲ, ಆದರೆ ಇದು ನಿಮ್ಮನ್ನು ನಗರದ ಟ್ರಾಫಿಕ್ ಮೂಲಕ ಸುಲಭವಾಗಿ ಕರೆದೊಯ್ಯುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 25 ಕಿಲೋಮೀಟರ್. ಆದಾಗ್ಯೂ, ಕಡಿಮೆ ವೇಗವನ್ನು ಹೊಂದಿರುವ ಒಂದು ಪ್ರಯೋಜನವೆಂದರೆ ಅದನ್ನು ಓಡಿಸಲು ನಿಮಗೆ ಪರವಾನಗಿ ಅಗತ್ಯವಿಲ್ಲ. ನೀವು ಯಾವುದೇ ಪರವಾನಗಿಯನ್ನು ಹೊಂದಿಲ್ಲದಿದ್ದರು ಈ ಬೈಕ್ ಅನ್ನು ಓಡಿಸಬಹುದು.

ಆಟಮ್ 1.0 ನ ವಿಶೇಷತೆಯೆಂದರೆ ನೀವು ಅದನ್ನು ಕೇವಲ 3 ರಿಂದ 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಎಲೆಕ್ಟ್ರಿಕ್ ಸ್ಕೂಟರ್‌ ಗಳು ದುಬಾರಿ ಎಂದು ಯೋಚಿಸುವ ಅಗತ್ಯ ಇಲ್ಲ. ಏಕೆಂದರೆ Atum 1.0 ನ ಆರಂಭಿಕ ಬೆಲೆ ಸುಮಾರು 61,500 ರೂ. ಗಳಿಂದ ಪ್ರಾರಂಭವಾಗುತ್ತದೆ. ನೀವು ಕೈಗೆಟುಕುವ ಬೆಲೆಯಲ್ಲಿ ಸೊಗಸಾದ, ಶಕ್ತಿಯುತ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ನೀವು ಈ ನೂತನ ಮಾದರಿಯ Atum 1.0 ನೈಕ್ ಅಣು ಖರೀದಿಸುವ ಮೂಲಕ ಕಡಿಮೆ ಬೆಲೆಯಲ್ಲಿ ನಿಮ್ಮ ಬೈಕ್ ಖರೀದಿಯ ಕನಸನ್ನು ನನಸು ಮಾಡಿಕೊಳ್ಳಬಹುದು.

Join Nadunudi News WhatsApp Group

Atumobile Atum version 1.0 Price
Image Credit: Bikedekho

Join Nadunudi News WhatsApp Group