Bank Merge 2024: ದೇಶದಲ್ಲಿ ವಿಲೀನವಾಗಲಿದೆ ಈ ಎರಡು ಪ್ರತಿಷ್ಠಿತ ಬ್ಯಾಂಕ್, RBI ನಿಂದ ಅಂತಿಮ ನಿರ್ಧಾರ.

ದೇಶದಲ್ಲಿ ವಿಲೀನವಾಗಲಿದೆ ಈ ಎರಡು ಪ್ರತಿಷ್ಠಿತ ಬ್ಯಾಂಕ್

AU Small Finance Bank and Fincare Small Finance Bank Merge: ದೇಶದಲ್ಲಿ ವಿವಿಧ ಬ್ಯಾಂಕ್ ಗಳು ಹೊಸ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಗ್ರಾಹಕರ ಸುರಕ್ಷತೆಗಾಗಿ ಹೆಚ್ಚಿನ ನಿಯಮಗಳು ಪರಿಚಯವಾಗುತ್ತಿದೆ.

ಈ ಹಿಂದೆ HDFC ಮತ್ತು HDFC ಲಿಮಿಟೆಡ್ ಬ್ಯಾಂಕ್ ಗಳು ಈ ಹಿಂದೆ ವಿಲೀನಗೊಂಡಿದ್ದವು. ಈ ವಿಲೀನದ ನಂತರ ಸಾಕಷ್ಟು ಬ್ಯಾಂಕ್ ಗಳು ವಿಲೀನ ಪ್ರಕ್ರಿಯೆಗೆ ಮುಂದಾಗಿವೆ. ಸದ್ಯ ದೇಶದ ಈ ಎರಡು ಪ್ರಮುಖ ಬ್ಯಾಂಕ್ ಗಳು ವಿಲೀನವಾಗಿದ್ದು, ಬ್ಯಾಂಕ್ ಗ್ರಾಹಕರು ಮಾಹಿತಿ ತಿಳಿಯುವುದು ಅಗತ್ಯವಾಗಿದೆ.

AU Small Finance Bank and Fincare Small Finance Bank
Image Credit: Sakshi

ದೇಶದಲ್ಲಿ ವಿಲೀನವಾಗಲಿದೆ ಈ ಎರಡು ಪ್ರತಿಷ್ಠಿತ ಬ್ಯಾಂಕ್
AU Small Finance Bank ಮತ್ತು Fincare Small Finance Bank ಕಳೆದ ವರ್ಷ ಅಕ್ಟೋಬರ್ 2023 ರಲ್ಲಿ ಬ್ಯಾಂಕ್ ವಿಲೀನಕ್ಕಾಗಿ RBI ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದವು. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ವಿಲೀನಕ್ಕೆ ಅನುಮೋದನೆ ನೀಡಿದೆ. ಈ ವಿಲೀನವು ಏಪ್ರಿಲ್ 1, 2024 ರಿಂದ ಜಾರಿಗೆ ಬರಲಿದೆ. ಹಾಗೆಯೆ ಈ ಎರಡು ಬ್ಯಾಂಕ್‌ ಗಳ ಷೇರುಗಳನ್ನು ಸಹ ವಿಲೀನಗೊಳಿಸಲಾಗುತ್ತದೆ.

ಈ ಕುರಿತು ಆರ್‌ಬಿಐ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಈ ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ವಿಲೀನವು ಏಪ್ರಿಲ್ 1, 2024 ರಿಂದ ಜಾರಿಗೆ ಬರಲಿದೆ. ಇದರರ್ಥ Fincare SFB ಯ ಎಲ್ಲಾ ಶಾಖೆಗಳು ಏಪ್ರಿಲ್ 1 ರಿಂದ AU SFB ಯ ಶಾಖೆಗಳಾಗಿ ಕಾರ್ಯನಿರ್ವಹಿಸುತ್ತವೆ. ಬ್ಯಾಂಕಿಂಗ್ ರೆಗ್ಯುಲೇಶನ್ ಆಕ್ಟ್ 1949 ರ ಸೆಕ್ಷನ್ 44A ನ ಉಪ-ವಿಭಾಗ (4) ರಲ್ಲಿ ಒಳಗೊಂಡಿರುವ ಅಧಿಕಾರಗಳ ವ್ಯಾಯಾಮದಲ್ಲಿ ಬ್ಯಾಂಕ್ ಅನುಮೋದನೆಯನ್ನು ನೀಡಲಾಗಿದೆ. ಕಳೆದ ವರ್ಷ, ಅಕ್ಟೋಬರ್ 2023 ರಲ್ಲಿ, ಎರಡೂ ಬ್ಯಾಂಕ್‌ಗಳು ವಿಲೀನವನ್ನು ಘೋಷಿಸಿದ್ದವು. ಫೆಬ್ರವರಿಯಲ್ಲಿ RBI ಅನುಮೋದನೆಯ ಗುರಿಯನ್ನು ಬ್ಯಾಂಕ್ ನಿಗದಿಪಡಿಸಿದೆ.

AU Small Finance Bank and Fincare Small Finance Bank Merge
Image Credit: Business Today

ಬ್ಯಾಂಕ್ ನ ಷೇರುಗಳು ಏನಾಗಲಿವೆ…?
ಒಪ್ಪಂದದ ಪ್ರಕಾರ, ಪಟ್ಟಿಮಾಡದ ಫಿನ್‌ ಕೇರ್‌ ನ ಷೇರುದಾರರು ಅವರು ಹೊಂದಿರುವ ಪ್ರತಿ 2,000 ಷೇರುಗಳಿಗೆ ಪಟ್ಟಿ ಮಾಡಲಾದ AU SFB ಯ 579 ಷೇರುಗಳನ್ನು ಪಡೆಯುತ್ತಾರೆ. ವಿಲೀನದ ನಂತರ, FSFB ಷೇರುದಾರರು AUSFB ನಲ್ಲಿ 9.9 ಶೇಕಡಾ ಈಕ್ವಿಟಿಯನ್ನು ಹೊಂದಿರುತ್ತಾರೆ. RBI ನಿಂದ ಅನುಮೋದನೆ ಪಡೆದ ನಂತರ, ಎಫ್‌ ಎಸ್‌ ಎಫ್‌ ಬಿಯ ಪ್ರವರ್ತಕರು ಸಹ ಘಟಕಕ್ಕೆ 700 ಕೋಟಿ ರೂಪಾಯಿಗಳ ಹೊಸ ಬಂಡವಾಳವನ್ನು ತುಂಬಲು ಒಪ್ಪಿಕೊಂಡರು. ಬ್ಯಾಂಕ್ ಈ ಒಪ್ಪಂದವನ್ನು ಘೋಷಿಸಿದಾಗ, AUSFB ಹೂಡಿಕೆದಾರರಲ್ಲಿ ಅಸಮಾಧಾನ ಇರುವುದು ಕಂಡುಬಂದಿದೆ.

Join Nadunudi News WhatsApp Group

Join Nadunudi News WhatsApp Group